
775 ಶೇರುದಾರರು ಇರುವ ಗಂಟಿಗಾನಹಳ್ಳಿ ವಿವಿದ್ದೋದ್ದೇಶ ಪ್ರಾಥಮಿಕ ಕೃಷಿ ಸಹಕಾರ ಸಂಘದ ನಿರ್ದೇಶಕರ ಆಯ್ಕೆಗೆ ಇಂದು ಚುನಾವಣೆ ನಡೆಯಿತು.
ಸಂಘದ ಮುಂದಿನ 5 ವರ್ಷದ ಅಧಿಕಾರವಧಿಗೆ ಗುರುವಾರ ಸಂಘದ ಕಚೇರಿಯಲ್ಲಿ 12 ನಿರ್ದೇಶಕರಿಗೆ 24 ಮಂದಿ ಚುನಾವಣೆಗೆ ಸ್ವರ್ಧೆ ಮಾಡಿದ್ದರು. ಸಾಲಗಾರರು ಅಲ್ಲದ ಕ್ಷೇತ್ರದಿಂದ 4 ಮಂದಿ, ಸಾಲಗಾರರ ಕ್ಷೇತ್ರದಿಂದ 37 ಮಂದಿ ಸ್ಪರ್ಧಿಸಿದ್ದರು.
ಇಂದು ಮಧ್ಯಾಹ್ನ 3 ಗಂಟೆಯಿಂದ ಚುನಾವಣೆ ಎಣಿಕೆ ಕಾರ್ಯ ಪ್ರಾರಂಭವಾಗಿ 5.30 ಗಂಟೆಗೆ ಮುಕ್ತಾಯವಾಯಿತು. ಇದರಲ್ಲಿ ಜೆಡಿಎಸ್ 8, ಕಾಂಗ್ರೆಸ್ 4 ಗೆಲುವು ಸಾಧಿಸಿದ್ದಾರೆ. ಈ ಮೂಲಕ ಜೆಡಿಎಸ್ ಹೆಚ್ಚು ಬಹುಮತ ಪಡೆದಿದೆ.
ಈ ಗ್ರಾಮದಲ್ಲಿ ಸುಮಾರು ವರ್ಷಗಳಿಂದ ಜೆಡಿಎಸ್ ಬಿಟ್ಟರೆ ಬೇರೆ ಪಕ್ಷ ಬರುತ್ತಿರಲಿಲ್ಲ, ಆದರೆ, ಇದೀಗ ಕಾಂಗ್ರೆಸ್- ಜೆಡಿಎಸ್ ನಡುವೆ ಜಿದ್ದಾಜಿದ್ದಿನ ಸಮರ ನಡೆದಿತ್ತು. ಇದರಲ್ಲಿ ಜೆಡಿಎಸ್ ಹೆಚ್ಚು ಬಹುಮತ ಪಡೆದಿದೆ.
ಚುನಾವಣೆಯಲ್ಲಿ ಗೆದ್ದವರ ಪಟ್ಟಿ
ಸಾಮಾನ್ಯ ಕ್ಷೇತ್ರದಿಂದ ಗೌರೀಶ ಎಸ್, ನಂದೀಶ ಎಂ. ಎಸ್, ಮುರಳಿಧರ್ ಜಿ.ಆರ್, ಶ್ರೀನಿವಾಸ್ ಬಿ.ಎನ್, ಬಸವರಾಜ ಸಿ, ಹಿಂದುಳಿದ ವರ್ಗದಿಂದ ವಿಜಯಕುಮಾರ್, ಯಸವಂತ್ ಎಸ್.ವಿ,ಹನುಮಂತಪ್ಪ, ರಾಮಕೃಷ್ಣ .ಪಿ, ಶೋಭಾ, ಸುಮಿತ್ರ, ಶಿವಕುಮಾರ್ ಎಂ, ಆಯ್ಕೆಯಾಗಿದ್ದಾರೆ.
ಚುನಾವಣೆಗಳಲ್ಲಿ ಸೋಲು ಗೆಲುವು ಸಹಜ, ಆದರೆ, ಸಹಕಾರ ಸಂಘಗಳಿಗೆ ಚುನಾವಣೆ ಆಗಬಾರದು ಎಂದು ನನ್ನ ಭಾವನೆ. ಸಹಾಕರ ಸಂಘಗಳಲ್ಲಿ ಲಾಭಾಂಶ ಕಡಿಮೆ ಇರುತ್ತದೆ. ಆದ್ದರಿಂದ ಚುನಾವಣೆ ನಡೆಯಬಾರದು. ಗಂಟಿಗಾನಹಳ್ಳಿ ಕೃಷಿ ಸಹಕಾರ ಸಂಘವು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿಯೇ ಅತ್ಯಂತ ಸದೃಢವಾದ ಸಂಘವಾಗಿ ಇದೆ. ಸಂಘದ ವತಿಯಿಂದ ಗೋಲ್ಡ್ ಲೋನ್, ಸುಮಾರು 6ಕೋಟಿಯಷ್ಟು ರೈತರಿಗೆ ಕೆಸಿಸಿ ಸಾಲವನ್ನು ನೀಡಲಾಗಿದೆ. ಬಡ್ಡಿರಹಿತವಾಗಿ ರೈತರಿಗೆ ಸಾಲವನ್ನು ನೀಡಲಾಗುತ್ತಿದೆ. ಹಾಗಾಗಿ ನಮ್ಮ ಊರಿನ ಈ ಸಂಘ ಬಹಳ ಸದೃಢವಾಗಿದೆ ಎಂದು ತೆಂಗು ಮತ್ತು ನಾರು ಅಭಿವೃದ್ಧಿ ನಿಗಮ ಅಧ್ಯಕ್ಷ ಗಂಟಿಗಾನಹಳ್ಳಿ ವೆಂಕಟೇಶ್ ಬಾಬು ಹೇಳಿದರು.

ಗಂಟಿಗಾನಹಳ್ಳಿ ವಿಎಸ್ ಎಸ್ ಎನ್ ಚುನಾವಣೆಯಲ್ಲಿ ಮತದಾರರು ಪ್ರಭುಗಳು ನಮ್ಮ ಕೈ ಹಿಡಿದಿದ್ದಾರೆ. ಅವರಿಗೆ ಧನ್ಯವಾದ, ನಮಗೆ ಹೆಚ್ಚಿನ ಬಹುಮತ ಬರಬೇಕಿತ್ತು, ಮುಂದಿನ ದಿನಗಳಲ್ಲಿ ಹೆಚ್ಚಿನ ಬಹುಮತ ಪಡೆಯಲು ಪ್ರಯತ್ನ ಮಾಡಲಾಗುವುದು ಎಂದು ದೊಡ್ಡಬಳ್ಳಾಪುರ ತಾಲೂಕು ಕೃಷಿ ಸಮಾಜದ ಅಧ್ಯಕ್ಷ ಆರ್.ಮುರುಳಿಧರ್ ಹೇಳಿದರು.