
ದೊಡ್ಡಬಳ್ಳಾಪುರ : ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ತಂಡ ಬೆಂಗಳೂರಿನ ಎಸ್-ವ್ಯಾಸ ವಿಶ್ವವಿದ್ಯಾಲಯದಲ್ಲಿ ನಡೆದ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಯೋಗಾಸನ ಸ್ಪರ್ಧೆಯಲ್ಲಿ(ಮಹಿಳಾ) ಗೆಲುವು ಸಾಧಿಸಿ, ರಾಷ್ಟ್ರಮಟ್ಟದ ಖೇಲೋ ಇಂಡಿಯಾ ಯೋಗಾಸನ ಛಾಂಪಿಯನ್ ಶಿಪ್‌ಗೆ ಆಯ್ಕೆ ಮಾಡಲಾಗಿದೆ.
ಈ ಸ್ಪರ್ಧೆಯಲ್ಲಿ ದೊಡ್ಡಬಳ್ಳಾಪುರ ಮಂಜುಶ್ರೀ, ನಿಖಿತಾ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಅದಿತಿ, ಸಂಜನಾ, ಮುಕ್ತಾ, ಪೂರ್ವಜ ಪಾಲ್ಗೊಳ್ಳಲಿದ್ದಾರೆ.
ಯೋಗಪಟುಗಳಿಗೆ ತಂಡದ ವ್ಯವಸ್ಥಾಪಕ ಧರ್ಮೇಂದ್ರಕುಮಾರ್, ಕೋಚ್ ಮಹೇಂದ್ರ.ಸಿ ಅಭಿನಂದಿಸಿದ್ದಾರೆ.