ಇಂದು ಖಾಸಗಿ ಸಾರಿಗೆ ಸಂಘಗಳ ಒಕ್ಕೂಟ ವಿವಿಧ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ತಮ್ಮ ಎಲ್ಲಾ ಸಾರಿಗೆ ಸೇವೆಗಳನ್ನ ಬಂದ್ ಮಾಡಿದ ಹಿನ್ನೆಲೆ ಪ್ರಯಾಣಿಕರು ಪರದಾಡುವಂತಾಗಿದೆ. ಇದರ ಬಿಸಿ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಅವರಿಗೂ ತಟ್ಟಿದೆ. ಟ್ಯಾಕ್ಸಿ, ಓಲಾ,ಉಬರ್ ಸೇವೆ ಬಂದ್ ಹಿನ್ನೆಲೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬಿಎಂಟಿಸಿ ಬಸ್ ನಲ್ಲಿ ಸಾರ್ವಜನಿಕರೊಂದಿಗೆ ಪ್ರಯಾಣಿಸಿದ ಅನಿಲ್ ಕುಂಬ್ಳೆ.
ಬಸ್ ನಲ್ಲಿ ಪ್ರಯಾಣಿಸುವಾಗ ಸ್ವತಃ ತಾವೇ ಸೆಲ್ಫಿ ತೆಗೆದು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಬಿಎಂಟಿಸಿ ಬಸ್ ನಲ್ಲಿ ವಿಮಾನ ನಿಲ್ದಾಣದಿಂದ ಮನಗೆ ಪಯಣ ಎಂದೂ ಸಹ ಬರೆದುಕೊಂಡಿದ್ದಾರೆ.