ಕ್ಷೇತ್ರದ ಮತದಾರರ ಮನ ಸೆಳೆಯಲು ಜೆಸಿಬಿ ಪಕ್ಷಗಳಿಂದ ಹಣ, ಮದ್ಯ ಆಮಿಷ: ಎಎಪಿ‌ ಅಭ್ಯರ್ಥಿ ಪುರುಷೋತ್ತಮ್ ಆರೋಪ

2023ರ ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಗೆ ದಿನಗಣನೆ ಬೆನ್ನಲ್ಲೇ ಕ್ಷೇತ್ರದಲ್ಲಿ ಜೆಡಿಎಸ್, ಕಾಂಗ್ರೆಸ್, ಬಿಜೆಪಿ(ಜೆಸಿಬಿ) ಪಕ್ಷಗಳು ಮತದಾರರಿಗೆ ಆಸೆ, ಆಮಿಷಕ್ಕೆ ಒಳಪಡಿಸಿ ದಿಕ್ಕು ತಪ್ಪಿಸಿ ಮತ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಎಎಪಿ ಅಭ್ಯರ್ಥಿ ಪುರುಷೋತ್ತಮ್ ಆರೋಪಿಸಿದರು.

ನಗರದ ಎಎಪಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಈ ಕುರಿತು ಮಾತನಾಡಿದ ಅವರು, ಎಎಪಿ ವತಿಯಿಂದ ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡು ಪ್ರಾಮಾಣಿಕವಾಗಿ ಮತದಾರರನ್ನು ಯಾವುದೇ ಆಸೆ, ಆಮಿಷಕ್ಕೆ ಒಳಪಡಿಸದೇ ಮತಯಾಚನೆ ಮಾಡುತ್ತಿದ್ದೇವೆ. ಆದರೆ ಜೆಸಿಬಿ ಪಕ್ಷಗಳು ಮದ್ಯ, ಹಣ ಹಂಚಿಕೆ ಮಾಡಿ ಕಾನೂನು ಬಾಹಿರವಾಗಿ ಮತಯಾಚನೆ ಮಾಡುತ್ತಿರುವ ಕೂಗು ಕೇಳಿಬರುತ್ತಿದೆ. ಇದರ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಲಾಗಿದೆ ಎಂದರು.

ಚುನಾವಣೆಯಲ್ಲಿ ಗೆಲ್ಲಲೇಬೇಕು ಎಂದು ವಾಮಮಾರ್ಗ ಅನುಸರಿಸುವುದು ಎಷ್ಟರ ಮಟ್ಟಿಗೆ ಸರಿ, ನಮ್ಮಂತ ಬಡ ಪಕ್ಷ, ಭ್ರಷ್ಟಾಚಾರ ರಹಿತ ಪಕ್ಷಗಳು ಕಷ್ಟಪಟ್ಟು ಪ್ರಮಾಣಕವಾಗಿ ಮನೆ ಮನೆಗೆ ಭೇಟಿ ಕಾನೂನಾತ್ಮಕವಾಗಿ ಮತಯಾಚನೆ ಮಾಡಿದ್ದೇವೆ. ಜೆಸಿಬಿ ಪಕ್ಷಗಳ ಅನ್ಯಮಾರ್ಗದ ಮತಯಾಚನೆಯಿಂದ ನಮ್ಮಂತ ಬಡ ಪಕ್ಷಗಳು ಗೆಲ್ಲುವುದಾದರು ಹೇಗೆ ಎಂದು ಪ್ರಶ್ನೆ‌ ಮಾಡಿದರು.

ಕ್ಷೇತ್ರದ ಮತದಾರರು ದಯವಿಟ್ಟು ಯಾವುದೇ ಹಣ, ಮದ್ಯ, ಆಸೆ, ಆಕಾಂಕ್ಷೆ, ಆಮಿಷಕ್ಕೆ ಒಳಗಾಗದೇ ಪ್ರಮಾಣಿಕವಾಗಿ ನಿಷ್ಠಾವಂತ, ಕ್ಷೇತ್ರದ ಅಭಿವೃದ್ಧಿಗೆ ತುಡಿಯುವ ಅಭ್ಯರ್ಥಿಗೆ ಮತ ನೀಡಿ ಎಂದು ಮತದಾರರಲ್ಲಿ ಮನವಿ ಮಾಡಿದರು.

ಈ ವೇಳೆ ಪಕ್ಷದ ಮುಖಂಡರು, ಕಾರ್ಯಕರ್ತರು ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *