Categories: ಕೋಲಾರ

ಕ್ರೆಡಿಲ್ ಮತ್ತು ನಿರ್ಮಿತಿ ಕೇಂದ್ರವು ಶಾಸಕರು, ಎಂಎಲ್ಸಿಗಳನ್ನು ಸಾಕುವ ಕೇಂದ್ರ ಮುಬಾರಕ್ ಆರೋಪ: ದಾಖಲೆ ಬಹಿರಂಗ ಪಡಿಸುವಂತೆ ನಗರಸಭೆ ಅಧ್ಯಕ್ಷೆ, ಸದಸ್ಯರ ಸವಾಲು

ಕೋಲಾರ: ನಗರಸಭೆಯ ಅಭಿವೃದ್ಧಿಗಾಗಿ ಮುಖ್ಯಮಂತ್ರಿಗಳ ವಿಶೇಷ ಅನುದಾನ 30 ಕೋಟಿ ಬಂದಿದ್ದು ಈ ಹಣವು ನಿರ್ಮಿತಿ ಕೇಂದ್ರ ಮತ್ತು ಕ್ರೆಡಿಲ್ ಇಲಾಖೆಗೆ ವಹಿಸಿದ್ದರ ಬಗ್ಗೆ ನಗರಸಭೆ ಮಾಜಿ ಅಧ್ಯಕ್ಷ ಮುಬಾರಕ್ ಅವರು ಸಭೆಯಲ್ಲಿ ಶಾಸಕರು ಮತ್ತು ಎಂಎಲ್ಸಿಗಳನ್ನು ಸಾಕುವ ಕೇಂದ್ರಗಳ ಎಂದು ಆರೋಪಿಸಿದ್ದಾರೆ ಬರೀ ಅರೋಪ ಮಾಡುವುದು ಬಿಟ್ಟು ದಾಖಲೆ ಸಮೇತ ಸಾಬೀತುಪಡಿಸಲಿ ಎಂದು ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ ಸವಾಲು ಹಾಕಿದರು.

ನಗರಸಭೆ ಆವರಣದಲ್ಲಿ ಮಂಗಳವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನಗರಸಭೆ ಮಾಜಿ ಅಧ್ಯಕ್ಷರಾಗಿ ಹಿರಿಯ ಸದಸ್ಯರಾಗಿರುವ ಮುಬಾರಕ್ ಅವರು ಪ್ರತಿ ಸಭೆಯಲ್ಲಿ ಬರೀ ಆರೋಪಗಳನ್ನು ಮಾಡಲಿಕ್ಕೆ ಬರತ್ತಾರೆ ಒಂದು ಬಾರಿ ಅಭಿವೃದ್ಧಿಗೆ ಶಾಸಕ ಕೊತ್ತೂರು ಮಂಜುನಾಥ್ ಮತ್ತು ಎಂಎಲ್ಸಿ ಅನಿಲ್ ಕುಮಾರ್ ನಯಾ ಪೈಸೆ ಬಂದಿಲ್ಲ ಎಂದು ಹೇಳುವ ಅವರು ಹೇಗೆ 30 ಕೋಟಿ ಅನುದಾನದ ಬಗ್ಗೆ ಮಾತಾಡತ್ತಾರೆ ಇವರಿಗೆ ಏನಾದರೂ ನೈತಿಕತೆ ಇದ್ದರೆ ಮೊದಲು ದಾಖಲೆಗಳನ್ನು ನೀಡಲಿ ಇಲ್ಲದೇ ಹೋದರೆ ಮುಂದಿನ ದಿನಗಳಲ್ಲಿ ಸದಸ್ಯರೇ ಬುದ್ದಿ ಕಲಿಸಬೇಕಾಗುತ್ತದೆ ಎಂದರು.

ಕಳೆದ ಬಾರಿಯ ಸಭೆಯಲ್ಲಿ ನಗರಸಭೆ ಅಧ್ಯಕ್ಷರಿಗೆ ಇರುವ ಅಧಿಕಾರವನ್ನು ಶಾಸಕರು ಎಂಎಲ್ಸಿಗಳು ಆಪರೇಟ್ ಮಾಡತ್ತಾರೆ ಎಂದು ಆರೋಪಿಸಿದರು. ನನ್ನನ್ನು 23 ಸದಸ್ಯರಿಂದ ಆಯ್ಕೆಯಾಗಿದ್ದೇನೆ ನನಗೂ ಒಂದಿಷ್ಟು ಜ್ಞಾನವು ಇದೆ ಯಾರ ಕಡೆಯಿಂದಲೂ ಅಪರೇಟ್ ಮಾಡಿಸಿಕೊಳ್ಳುವ ಪರಿಸ್ಥಿತಿ ಇನ್ನೂ ಬಂದಿಲ್ಲ ನೀವು ಕೂಡ ಅಧ್ಯಕ್ಷರಾಗಿ ಇದ್ದವರು ನೀವು ಯಾರ ಕಡೆಯಿಂದ ಅಪರೇಟ್ ಆಗಿದ್ದೀರ ಉತ್ತರ ಕೊಡಬೇಕು ಅವರು ಎಂದು ಪ್ರಶ್ನೆ ಮಾಡಿದರು.

ಈ ಸಂದರ್ಭದಲ್ಲಿ ಸದಸ್ಯ ಎನ್. ಅಂಬರೀಷ್ ಮಾತನಾಡಿ, ಮುಬಾರಕ್ ಸಹ 2014 ರಿಂದ 2016 ರ ವರೆಗೆ ಅಧ್ಯಕ್ಷರಾಗಿ ಸುಮಾರು 1.40 ಕೋಟಿ ಅನುದಾನವನ್ನು ನಿರ್ಮಿತಿ ಕೇಂದ್ರಕ್ಕೆ ಹಾಗೂ ಕಿಯೋನಿಕ್ಸ್ ಇಲಾಖೆಗೆ ಬಿಡುಗಡೆ ಮಾಡಿದ್ದರು ಅವತ್ತು ಯಾವ ಉದ್ದೇಶಕ್ಕಾಗಿ ಕೊಟ್ಟಿದ್ದೀರಾ ಇವತ್ತು ಅ ಇಲಾಖೆಗಳ ಬಗ್ಗೆ ಆರೋಪ ಮಾಡಲಿಕ್ಕೆ ಯಾವ ನೈತಿಕತೆ ಇದೆ ನಿಮ್ಮ ಹೊಟ್ಟೆಪಾಡಿಗಾಗಿ ಯಾರ ಯಾರ ಮನೆ ಬಾಗಿಲಿಗೆ ಹೋಗಿದ್ದೀರಾ ಜನಕ್ಕೆ ಗೊತ್ತಿದೆ ಆರೋಪ ಮಾಡುವ ಮೊದಲು ತಾವು ದಾಖಲೆಗಳನ್ನು ಸಾಬೀತು ಮಾಡಲಿ ಇಲ್ಲದೇ ಹೋದರೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಸದಸ್ಯ ಸುರೇಶ್ ಬಾಬು ಮಾತನಾಡಿ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೋಲಾರ ವಿಧಾನಸಭಾ ಕ್ಷೇತ್ರಕ್ಕೆ ಎಷ್ಟು ಅನುದಾನ ಬಂದಿದೆ ಎಂಬುದನ್ನು ಕಾಮಗಾರಿ ಸ್ಥಳದಲ್ಲಿಯೇ ಸಾಬೀತು ಪಡಿಸಲು ಸಿದ್ದವಿದ್ದೇವೆ ಮುಬಾರಕ್ ಅವರೇ ನಿಮಗೆ ಏನಾದರೂ ರಾಜಕೀಯದ ಮೌಲ್ಯದ ಜೊತೆಗೆ ನೈತಿಕತೆ ಇದ್ದರೆ ಮಾಧ್ಯಮರೊಂದಿಗೆ ದಿನಾಂಕ ನಿಗಧಿ ಮಾಡಿ ಅದು ಎಲ್ಲಾ ಬಿಟ್ಟು ಆಧಾರ ರಹಿತವಿಲ್ಲದೇ ವಿನಾಕಾರಣ ಮಾತಾಡುವುದಕ್ಕೆ ನಾಚಿಕೆ ಪಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಸದಸ್ಯ ಅಫ್ಸರ್ ಮಾತನಾಡಿ, ಪ್ರತಿ ಬಾರಿಯ ಸಭೆಯಲ್ಲಿ ಆರೋಪ ಮಾಡಲಿಕ್ಕೆ ಸೀಮಿತವಾಗಿದ್ದು ಅಭಿವೃದ್ಧಿಗೆ ಸಹಕಾರವಿಲ್ಲ ಅಲ್ಪಸಂಖ್ಯಾತ ವಾರ್ಡ್ ಗಳ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಿದರು ವಿರೋಧ ವ್ಯಕ್ತಪಡಿಸತ್ತಾರೆ ಎಂದರೆ ನಮ್ಮ ಸಮುದಾಯದವರು ಎಂದು ಹೇಳಿಕೊಂಡು ಓಡಾಡುತ್ತಾರೆ ಅವರು ಅಧ್ಯಕ್ಷರಾಗಿ ಹೇಗೆ ಸಭೆಗಳನ್ನು ನಡೆಸಿದ್ದಾರೆ ಎಂಬುದು ಜನಕ್ಕೆ ಗೊತ್ತಿದೆ ಇವತ್ತಿನ ಅಧ್ಯಕ್ಷರ ಉಪಾಧ್ಯಕ್ಷ ಬಗ್ಗೆ ಮಾತಾಡುವುದಕ್ಕೆ ಯೋಗ್ಯತೆ ಇಲ್ಲ ಎಂದು ಆರೋಪಿಸಿದರು.

ಸದಸ್ಯ ರಫೀ ಮಾತನಾಡಿ, ಮಾಜಿ ಅಧ್ಯಕ್ಷ ಮುಬಾರಕ್ ಅವರಿಗೆ ಅತ್ಮ ಮತ್ತು ಶರೀರ ಕೆಟ್ಟರಬೇಕು ಅದಕ್ಕೆ ಅವರು ಬರೀ ಆರೋಪಕ್ಕೆ ಸೀಮಿತವಾಗಿದ್ದಾರೆ ಎರಡು ನಾಲಿಗೆ ಇರೋ ವ್ಯಕ್ತಿ ಅವರಿಂದ ಮುಸ್ಲಿಂ ಸಮುದಾಯಕ್ಕೆ ಅವಮಾನವಾಗಿದೆ ಪ್ರತಿ ಚುನಾವಣೆಗೆ ಒಂದೊಂದು ಪಕ್ಷದ ಪರವಾಗಿ ಕೆಲಸ ಮಾಡತ್ತಾರೆ ಅಂತಹವರಿಂದ ನಗರಸಭೆ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷೆ ಸಂಗೀತಾ ಜಗದೀಶ್, ಸ್ಥಾಯಿ ಸಮಿತಿ ಅಧ್ಯಕ್ಷ ಫೈರೋಜ್ ಖಾನ್ ಸದಸ್ಯರಾದ ಹಿದಾಯಿತ್ ಉಲ್ಲಾ, ಏಜಾಜ್, ಗುಣಶೇಖರ್, ಶ್ಯಾಮೀರ್, ಏಜಾಜ್ ಪಾಷ, ಮುಂತಾದವರು ಇದ್ದರು.

Ramesh Babu

Journalist

Recent Posts

ಯುಗಾದಿ…..

ವಿಶ್ವ ಮಹಾಯುದ್ಧದ ಕಾರ್ಮೋಡಗಳ ನಡುವೆ, ಅತ್ಯಂತ ಅಗತ್ಯದ ಗ್ಯಾಸ್ ಸಿಲಿಂಡರ್ಗಳ ಅಭಾವದ ನಡುವೆ, ಪ್ರಕ್ಷ್ಯುಬ್ಧ ಮನಸ್ಥಿತಿಯ ನಡುವೆ, ಸಂಭ್ರಮದ ಹೊಸ…

2 hours ago

ಯುವ ಆಪದ್ ಮಿತ್ರ ಯೋಜನೆ: ವಿಪತ್ತು ನಿರ್ವಹಣೆ ಕುರಿತು ಒಂದು ವಾರ ತರಬೇತಿ ಶಿಬಿರ

ಯುವ ಆಪದ್ ಮಿತ್ರ ಯೋಜನೆಯ ಅಂಗವಾಗಿ ಕಾಲೇಜಿನ ವಿದ್ಯಾರ್ಥಿಗಳು ದೊಡ್ಡಬಳ್ಳಾಪುರದ ಅನಿಬೆಸೆಂಟ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ತರಬೇತಿ ಮತ್ತು…

12 hours ago

ಮಹಿಳೆಯರನ್ನು ಮಂಚಕ್ಕೆ ಕರೆದ ಆರೋಪ: ಮೂಡುಬಿದಿರೆ ಪೊಲೀಸ್ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ ಅಮಾನತು

ಪೊಲೀಸ್ ಠಾಣೆಗೆ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ದೂರು ಕೊಡಲು ಬಂದ ಮಹಿಳೆಯರನ್ನು ಮಂಚಕ್ಕೆ ಕರೆಯುತ್ತಾರೆ ಎಂಬ ಆರೋಪದ ಮೇರೆಗೆ ಮೂಡುಬಿದಿರೆ…

12 hours ago

ಮುಂಗಾರು ಪೂರ್ವ ಮಳೆ: ಮಳೆಯಲ್ಲಿ ಸಾಲುಗಟ್ಟಿ ನಿಂತ ರಾಗಿ‌ ಮಾರಾಟ ಮಾಡಲು ಬಂದ ಟ್ರ್ಯಾಕ್ಟರ್ ಗಳು

ಇಂದು ಸಂಜೆ ಸುಮಾರು 4:30ರಲ್ಲಿ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಪ್ರಾರಂಭವಾದ ಮಳೆಯು ಸತತವಾಗಿ 7ಗಂಟೆಯವರೆಗೆ ಬಿದ್ದಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿತು. ಅದೇರೀತಿ…

14 hours ago

ರಣ ಬಿಸಿಲಿನಿಂದ ಕಂಗೆಟ್ಟಿದ್ದ ಜನ: ಧರೆಗಿಳಿದ ವರ್ಷದ ಮೊದಲ ಮಳೆ: ಬಿಸಿಲಿನ ಬೇಗೆಗೆ ಬೆಂದಿದ್ದ ಭೂಮಿ ತಂಪು ತಂಪು: ಗುಡುಗು ಸಹಿತ ಬಿದ್ದ ಮಳೆ ಹನಿಗೆ ಜನ ಫುಲ್ ಖುಷ್

ಬಿಸಿಲಿನ ತಾಪ ಹೆಚ್ಚಾಗುತ್ತಿದ್ದ ಸಂದರ್ಭದಲ್ಲಿ ದೊಡ್ಡಬಳ್ಳಾಪುರ ನಗರದ ಕೆಲವು ಪ್ರದೇಶಗಳಲ್ಲಿ ಮಂಗಳವಾರ ಸಂಜೆ ವರ್ಷದ ಮೊದಲ ಮಳೆ ಸುರಿಯಿತು. ಬಂಗಾಳ…

15 hours ago

ನಾಳೆ (ಮಾ.18) ಎಸ್.ಎಸ್.ಎಲ್.ಸಿ ಪರೀಕ್ಷೆ -01: ಬೆಂ. ಗ್ರಾ ಜಿಲ್ಲೆಯಲ್ಲಿ 14,314 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ

2025-26ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಮಾರ್ಚ್ 18 ಬುಧವಾರದಿಂದ ಏಪ್ರಿಲ್ 02 ಗುರುವಾರದ ವರೆಗೆ ಬೆಳಿಗ್ಗೆ 10:15 ಗಂಟೆಯಿಂದ ಮಧ್ಯಾಹ್ನ…

17 hours ago