ಕ್ರಿಕೆಟ್: ಗೆಲುವಿನ ನಿರೀಕ್ಷೆಯಲ್ಲಿ ಟೀಂ ಇಂಡಿಯಾ

2024ರ ಟಿ – ಟ್ವೆಂಟಿ ವಿಶ್ವಕಪ್ ಗೆ ಸಿದ್ಧತೆ ನೆಡೆಸುತ್ತಿರುವ ಭಾರತ ತಂಡಕ್ಕೆ ನೂತನ ವರ್ಷದ ಆರಂಭದಲ್ಲೇ ಮತ್ತೊಂದು ಸವಾಲು ಎದುರಾಗಿದ್ದು ನಾಯಕತ್ವದ ಹಲವಾರು ಪ್ರಯೋಗಗಳ ನಡುವೆಯೂ ಪ್ರವಾಸಿ ಶ್ರೀಲಂಕಾ ತಂಡವನ್ನು ಎದುರಿಸಲು ಭಾರತ ತಂಡ ಸಿದ್ಧವಾಗಿದೆ.

ಭಾರತ ತಂಡದ ನಾಯಕ ರೋಹಿತ್ ಶರ್ಮ , ವಿರಾಟ್ ಕೊಹ್ಲಿ, ಕೆ. ಎಲ್. ರಾಹುಲ್ ಅನುಭವಿ ಆಟಗಾರರ ಅನಪಸ್ಥಿಯ ನಡುವೆಯೂ ಸಹ ಗೆಲುವಿನ ನಿರೀಕ್ಷೆಯಲ್ಲಿ ನೂತನ ನಾಯಕ ಹಾರ್ದಿಕ್ ಪಾಂಡ್ಯ ಬಳಗವಿದ್ದು ಯುವ ಪಡೆಯು ತಮ್ಮ ಸಾಮರ್ಥ್ಯವನ್ನು ತೋರಲು ಸುವರ್ಣಾವಕಾಶವಾಗಿದೆ.

ವಾಣಿಜ್ಯ ನಗರಿ ಮುಂಬೈನ ವಾಖೆಂಡೆ ಕ್ರೀಡಾಂಗಣದಲ್ಲಿ 2023 ರ ಮೊದಲ ಪಂದ್ಯ ಆಡುತ್ತಿರುವ ಟೀಮ್ ಇಂಡಿಯಾ ಗೆ ಏಷ್ಯಾ ಕಪ್ ಚಾಂಪಿಯನ್ ಶ್ರೀಲಂಕಾ ಸವಾಲೊಡ್ಡುವ ಸಾಧ್ಯತೆ ಇದೆ, ಅನುಭವಿ ಆಟಗಾರರನ್ನು ಹೊಂದಿರುವ ಶ್ರೀಲಂಕಾ ತಂಡ ಸದಾ ಅಚ್ಚರಿ ಫಲಿತಾಂಶ ನೀಡುತ್ತಿದ್ದು ಭಾರತ ತಂಡವನ್ನು ಸೋಲಿಸಿದರೆ ಆಶ್ಚರ್ಯ ಪಡುವಂತಿಲ್ಲಾ.

ಭಾರತ ಸಂಭಾವ್ಯ ತಂಡ:ಇಶಾನ್ ಕಿಶನ್ (ವಿಕೆಟ್ ಕೀಪರ್), ರುತುರಾಜ್ ಗಾಯಕ್ವಾಡ್ / ಶುಬ್ಮನ್ ಗಿಲ್, ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ಹಾರ್ದಿಕ್ ಪಾಂಡ್ಯ (ನಾಯಕ ), ವಾಷಿಂಗ್ಟನ್ ಸುಂದರ್, ಹರ್ಷಲ್ ಪಟೇಲ್, ಯುಜ್ವೇಂದ್ರ ಚಾಹಲ್, ಉಮ್ರಾನ್ ಮಲಿಕ್, ಅರ್ಶ್ದೀಪ್ ಸಿಂಗ್

ಶ್ರೀಲಂಕಾ ಸಂಭಾವ್ಯ ತಂಡ : ಕುಸಲ್ ಮೆಂಡಿಸ್ (ವಿಕೆಟ್ ಕೀಪರ್ ), ಪಥುಮ್ ನಿಸಾಂಕ, ಭಾನುಕಾ ರಾಜಪಕ್ಸೆ, ಧನಂಜಯ ಡಿ ಸಿಲ್ವಾ, ಚರಿತ್ ಅಸಲಂಕಾ, ದಸುನ್ ಶಾನಕ (ನಾಯಕ ), ವನಿಂದು ಹಸರಂಗ, ಚಮಿಕಾ ಕರುಣಾರತ್ನೆ, ಮಹೇಶ್ ತೀಕ್ಷಣ, ಲಹಿರು ಕುಮಾರ, ಪ್ರಮೋದ್ ಮಧುಶನ್/ದಿಲ್ಶನ್ ಮಧುಶಂಕ.

Leave a Reply

Your email address will not be published. Required fields are marked *