ಬೆಂಗಳೂರು, ವೈಟ್ ಫೀಲ್ದ್ : ಶ್ವಾಸನಾಳದಲ್ಲಿ ಸಿಲುಕಿಕೊಂಡಿದ್ದ ಅಡಿಕೆ ತುಂಡುಗಳನ್ನು ಕ್ರಯೋ ಪ್ರೋಬ್ ಎಂಬ ಅತ್ಯಾಧುನಿಕ ಉಪಕರಣ ಬಳಸಿ ಕೇವಲ 7 ನಿಮಿಷದಲ್ಲಿ ಶಸ್ತ್ರಚಿಕಿತ್ಸೆ ಮಾಡಿ ಹೊರತೆಗೆಯಲಾಗಿದೆ.
ಕ್ರಯೋ ಪ್ರೋಬ್ ಬಳಕೆ ಮಾಡದೇ ಇದ್ದಿದ್ದರೆ ಈ ಚಿಕಿತ್ಸೆಗೆ ಸುಮಾರು ಒಂದು ಗಂಟೆಗೂ ಹೆಚ್ಚು ಸಮಯ ತಗಲುತ್ತಿತ್ತು.
81 ವರ್ಷದ ವೃದ್ದನಿಗೆ ಕಳೆದ ಮೂರು ದಿನಗಳಿಂದ ನಿರಂತರ ಕೆಮ್ಮು ಹಾಗೂ ಎದೆ ಭಾಗದಲ್ಲಿ ನೋವು ಕಾಣಿಸಿಕೊಂಡಿದ್ದ ಕಾರಣ ಮಧ್ಯ ರಾತ್ರಿ ಬೇರೆ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೋಗಲಾಗಿತ್ತು. ಆದ್ರೆ ಅಲ್ಲಿ ಹೃದಯಕ್ಕೆ ಸಂಭಂಧಿಸಿದ ಪರೀಕ್ಷೆಗಳನ್ನು ನಡೆಸಿ ಯಾವುದೇ ಸಮಸ್ಯೆ ಇಲ್ಲ ಎಂದು ವರದಿ ನೀಡಿ ವಾಫಸ್ ಮನೆಗೆ ಕಳುಹಿಸಿಕೊಡಲಾಗಿತ್ತು. ಆದ್ರೆ ವೃದ್ದನಿಗೆ ನೋವು ಮಾತ್ರ ಕಮ್ಮಿಯಾಗಿರಲಿಲ್ಲ. ಬಳಿಕ ವೈಟ್ ಪೀಲ್ಡ್ ನಲ್ಲಿರುವ ಮೆಡಿಕವರ್ ಆಸ್ಪತ್ರೆಯ ಇಂಟರ್ವೆನ್ಷನಲ್ ಶ್ವಾಸಕೋಶಶಾಸ್ತ್ರಜ್ಞ ಡಾ . ಮಂಜುನಾಥ್ ಬಿ ಜಿ ರವರನ್ನು ಭೇಟಿ ಮಾಡಿ, ವೃದ್ದ ತನ್ನ ನೋವಿಗೆ ನಿಜವಾದ ಕಾರಣವೇನೆಂದು ತಿಳಿದುಕೊಂಡಿದ್ದಾರೆ.
ವೃದ್ದನಿಗೆ ಪ್ರತಿ ದಿನ ಮಲಗುವಾಗ ಬಾಯಿಯಲ್ಲಿ ಅಡಿಕೆಯನ್ನು ಇಟ್ಟುಕೊಂಡು ಮಲಗುವ ಅಭ್ಯಾಸವಿತ್ತು. ನಿದ್ದೆ ವೇಳೆ ಅಡಿಕೆಯ ತುಂಡುಗಳು ಶ್ವಾಸಕೋಶದೊಳಗಡೆ ಹೋಗಿತ್ತು. ಇದರಿಂದ ಅವರಿಗೆ ಉಸಿರಾಟಕ್ಕೆ ತೊಂದರೆ ಶುರುವಾಗಿತ್ತು. ತಕ್ಷಣ ಅವರಿಗೆ ಆಕ್ಸಿಜನ್ ನೀಡಿ ಎಕ್ಸ್ ರೇ ತೆಗೆದಾಗ ಶ್ವಾಸಕೋಶದ ಕೆಳಗಿಳ ಪದರ ಸಂಪೂರ್ಣವಾಗಿ ಹದಗೆಟ್ಟಿರೋದು ತಿಳಿದು ಬಂದಿತ್ತು.ಕೂಡಲೇ ಅವರನ್ನು ಅಪರೇಷನ್ ಥಿಯೇಟರ್ ಕರೆದೊಯ್ದು, ಲಾರಿಂಜಿಯಲ್ ಮಾಸ್ಕ್ ಏರ್ವೇ ಬಳಸಿ ಶಸ್ತ್ರ ಚಿಕಿತ್ಸೆ ಶುರು ಮಾಡಲಾಯಿತು. ಶಸ್ತ್ರ ಚಿಕಿತ್ಸೆ ವೇಳೆ ಎಡ ಮುಖ್ಯ ಶ್ವಾಸನಾಳ ಸಂಪೂರ್ಣವಾಗಿ ಬ್ಲಾಕ್ ಆಗಿರೋದು ಗೊತ್ತಾಗಿದೆ. 1.7 mm ಸೈಜ್ ನ ಕ್ರಯೋ ಪ್ರೋಬ್ ಉಪಕರಣದ ಸಹಾಯದಿಂದ ಅಡಿಕೆ ತುಂಡುಗಳನ್ನು ಕೇವಲ ೭ ನಿಮಿಷದಲ್ಲಿ ಸಂಪೂರ್ಣವಾಗಿ ಹೊರತೆಗೆಯವಲ್ಲಿಶ್ವಾಸಕೋಶಶಾಸ್ತ್ರಜ್ಞ ಡಾ . ಮಂಜುನಾಥ್ ಬಿ ಜಿ ಯಶಸ್ವಿಯಾಗಿದ್ದಾರೆ .
ಅತ್ಯಾಧುನಿಕ ಉಪಕರಣ ಬಳಕೆಯಿಂದ ರೋಗಿಗೆ ಅನಗತ್ಯವಾಗಿ ಸಿಟಿ ಸ್ಕ್ಯಾನ್ ಮಾಡುವ ಅವಶ್ಯಕತೆ ಇರೋದಿಲ್ಲ ಹಾಗೂ ಗಂಟೆಗಟ್ಟಲೆ ರೋಗಿಗೆ ಅಪರೇಷನ್ ಮಾಡುವ ಅಗತ್ಯನೇ ಇರೋದಿಲ್ಲ ಎಂದು ಡಾ ಮಂಜುನಾಥ್ ಅಭಿಪ್ರಾಯ ಪಟ್ಟಿದ್ದಾರೆ .
ದಕ್ಷಿಣ ಭಾರತದಲ್ಲಿ ನಾಗರಾಧನೆಗೆ ಸುಪ್ರಸಿದ್ಧಿ ಪಡೆದಿರುವ ಘಾಟಿ ಸುಬ್ರಹ್ಮಣ್ಯ ಸ್ವಾಮಿಯ ಬ್ರಹ್ಮರಥೋತ್ಸವ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿಂದು ಅದ್ಧೂರಿಯಾಗಿ ನೆರವೇರಿತು. ತಾಲೂಕಿನ…
ಕ್ರಿಸ್ಮಸ್ ಮತ್ತು ಜೀಸಸ್, ಪ್ರೀತಿ ಮತ್ತು ಸೇವೆ.......... ಜಗತ್ತಿನ ಬೆಳಕಿನ ಹಬ್ಬ - ಶಾಂತಿಯ ಸಂದೇಶ ಎಲ್ಲೆಡೆಯೂ ರವಾನೆಯಾಗಲಿ..... ಯೇಸುಕ್ರಿಸ್ತನ…
ಎಲ್ಲರನ್ನು ಬೆಚ್ಚಿಬೀಳಿಸುವಂತಹ ಭೀಕರ ರಸ್ತೆ ಅಪಘಾತವೊಂದು ಚಿತ್ರದುರ್ಗದ ಬಳಿ ನಡೆದಿದ್ದು, ಬೆಂಗಳೂರಿನಿಂದ ಗೋಕರ್ಣಕ್ಕೆ ತೆರಳುತ್ತಿದ್ದ 'ಸೀ ಬರ್ಡ್' ಖಾಸಗಿ ಬಸ್…
ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಘಾಟಿ ಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರದಲ್ಲಿ ಸ್ವಸ್ತಿಶ್ರೀ ವಿಜಯಾಭ್ಯುದಯ ಶಾಲಿವಾಹನ ಶಕ ವರ್ಷಂಗಳು 1946ಕ್ಕೆ ಸರಿಯಾದ…
ಡಿ.28ರಂದು ದೊಡ್ಡಬಳ್ಳಾಪುರ ನಗರ ಮತ್ತು ತಾಲ್ಲೂಕಿನ ಹಲವೆಡೆ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ ಎಂದು ದೊಡ್ಡಬಳ್ಳಾಪು ಉಪವಿಭಾಗದ ಬೆಸ್ಕಾಂ ಅಧಿಕಾರಿಗಳು ಪತ್ರಿಕಾ…
ಇತಿಹಾಸ ಪ್ರಸಿದ್ಧ ದೊಡ್ಡಬಳ್ಳಾಪುರದ ಶ್ರೀ ಘಾಟಿ ಸುಬ್ರಮಣ್ಯ ಕ್ಷೇತ್ರದಲ್ಲಿ ನಾಳೆ(ಡಿಸೆಂಬರ್ 25) ಬ್ರಹ್ಮರಥೋತ್ಸವ ನಡೆಯಲಿದ್ದು, ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ನಡೆಸಲು ಜಿಲ್ಲಾಡಳಿತ…