ಕ್ಯೂಆರ್ ಕೋಡ್ ಬಳಸಿ ಮತದಾರರ ಮಾಹಿತಿ ಕಳ್ಳತನ ಮಾಡುವ ಬಿಜೆಪಿ ಅಭ್ಯರ್ಥಿ – ಜೆಡಿಎಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಹರೀಶ್ ಗೌಡ ಆರೋಪ

ಕ್ಯೂ ಆರ್‌ಕೋಡ್ ಬಳಸಿ ಮತದಾರರ ಮಾಹಿತಿ ಕದಿಯುವ ಮೂಲಕ ರಾಜಕೀಯ ವ್ಯವಸ್ಥೆಯನ್ನು ಬಿಜೆಪಿ ಅಭ್ಯರ್ಥಿ ಹಾಳು ಮಾಡುತ್ತಿದ್ದಾರೆ ಎಂದು ಜೆಡಿಎಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಹರೀಶ್ ಗೌಡ ಆರೋಪಿಸಿದರು..

ಬಿಜೆಪಿ ಅಭ್ಯರ್ಥಿಯ ಪರವಾಗಿ ಪ್ರಚಾರ ಮಾಡುವ ವೇಳೆ QR ಕೋಡ್ ಬಳಕೆ ಮಾಡಿರುವ ಬಗ್ಗೆ ಮಾದ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಕಳೆದ ಎರಡು-ಮೂರು ವರ್ಷಗಳಿಂದ ಸಾಮಾಜಿಕ‌ ಸೇವೆ‌ ಮಾಡಿದಂತೆ ಈಗಲೂ ಕ್ಯೂಆರ್ ಕೋಡ್ ಕೂಪನ್ ಬಳಸಿ‌ ಜನರನ್ನು ಯಾಮಾರಿಸುತ್ತಿದ್ದಾರೆ..

ತಾಲೂಕಿನ ಜನರನ್ನು‌ ದುಡ್ಡಿನಿಂದ ಅಳೆಯಲಾಗದು. QR ಕೋಡ್ ನಲ್ಲಿ ಏನಿದೆ, ಏನೆಲ್ಲಾ ಒಳಗೊಂಡಿದೆ ಎಂಬುದು ಈ ಕೂಡಲೇ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.. ಬಿಜೆಪಿ ಅಭ್ಯರ್ಥಿ ಧೀರಜ್ ಮುನಿರಾಜು ಅವರಿಗೆ ಮುಖಂಡರ ಮೇಲೆ ಅನುಮಾನ ಇದ್ದು ಬೇರೆ ಗ್ರಾಮಗಳಿಂದ ಜನರನ್ನು ಕರೆದುಕೊಂಡು ಬಂದು ಚುನಾವಣಾ ಪ್ರಚಾರ ಮಾಡಿಸುತ್ತಿದ್ದಾರೆ..

ಸರ್ಕಾರದ ಅನುಮತಿ‌ ಇಲ್ಲದೇ ಏಕಾಏಕಿ ಕ್ಯೂಆರ್ ಕೋಡ್ ಕೂಪನ್ ಬಳಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಇದರ ಬಗ್ಗೆ ಸೂಕ್ತ ತನಿಕೆ ನಡೆಸಿ ಕಾನೂನು ಕ್ರಮ ಕೈಗೋಳ್ಳಬೇಕು ಎಂದರು..

ನಾಳೆಯಿಂದ ಪ್ರಚಾರದ ವರಸೆ ಬದಲಿಸುತ್ತೇವೆ, ದೊಡ್ಡಬಳ್ಳಾಪುರದ ಜನರ ಬಗ್ಗೆ ಬಿಜೆಪಿ ಅಭ್ಯರ್ಥಿಗೆ ತಿಳಿದಿಲ್ಲ. ಹಣದಿಂದ ಎಲ್ಲವನ್ನೂ ಅಳತೆ ಮಾಡಲು ಹೊರಟಿದ್ದಾರೆ, ಜನರ‌ಮಧ್ಯೆ ಇದ್ದು ಅವರ ಕಷ್ಟ ಸುಖಗಳಿಗೆ ಸ್ಪಂದಿಸುವವರಿಗೆ ಜನ‌ ಆಶೀರ್ವಾದ‌ ಮಾಡುತ್ತಾರೆ ಎಂದರು.

ಈ ಸಂದರ್ಭದಲ್ಲಿ ಕೆಸ್ತೂರ್ ರಮೇಶ್, ರಾಜಣ್ಣ, ರಾಮಚಂದ್ರ ಬಾಬು, ಭರತ್ ರಾಜ್ ಕೆ.ಬಿ ಉಮೇಶ್, ಭಾನುಪ್ರಕಾಶ್ , ನರೇಂದ್ರ, ಇಪ್ತಿಕರ್ ಅಹಮ್ಮದ್, ಮಂಜುನಾಥ್, ಅಪ್ಪಾಜಿಗೌಡ ಇದ್ದರು..

Leave a Reply

Your email address will not be published. Required fields are marked *