ಕ್ಯಾನ್ಸರ್ ಗುಣಮುಖರಾದವರಿಗೆ ಐಪಿಎಲ್ ಪಂದ್ಯ ವೀಕ್ಷಣೆಗೆ ಅವಕಾಶ

ಬೆಂಗಳೂರು :ಕ್ಯಾನ್ಸರ್ ನೊಂದಿಗೆ ಹೋರಾಡಿ ಜಯಿಸಿದ 20 ಜನರಿಗೆ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಬುಧವಾರ ನಡೆದ ಪಂದ್ಯದ ವೀಕ್ಷಣೆಗೆ ವಿಶೇಷ ವ್ಯವಸ್ಥೆವನ್ನು ಮಣಿಪಾಲ ಆಸ್ಪತ್ರೆ ವತಿಯಿಂದ ಆಯೋಜಿಸಲಾಗಿತ್ತು .

ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಅಧಿಕೃತ ಆರೋಗ್ಯ ಪಾರ್ಟ್ನರ್ ಮಣಿಪಾಲ ಆಸ್ಪತ್ರೆ ,ಆರ್ ಸಿಬಿ ತಂಡದ ಸಹಕಾರದಲ್ಲಿ ಯುವ ಕ್ಯಾನ್ಸರ್ ಪೀಡಿತರು ಮತ್ತು ಅವರ ಪೋಷಕರಿಗೆ ಪಂದ್ಯ ವೀಕ್ಷಣೆಗೆ ವಿಶೇಷ ವ್ಯವಸ್ಥೆಯನ್ನು ಒದಗಿಸಿತು .

ಕ್ಯಾನ್ಸರ್ ನ ರೋಗ ನಿರ್ಣಯವದ ಕ್ಷಣದಿಂದ ಕ್ಯಾನ್ಸರ್ ನಿಂದ ಚೇತರಿಸಿಕೊಳ್ಳುವ ನಡುವಿನ ಅವಧಿಯಲ್ಲಿ ರೋಗಿಗಳು ಭಯ, ದುಃಖ, ಆತಂಕ ಮತ್ತು ಖಿನ್ನತೆಯನ್ನು ಅನುಭವಿಸುತ್ತಾರೆ, ಚೇತರಿಕೆಯ ನಂತರವೂ, ಈ ಭಾವನೆಗಳು ಉಳಿಯುತ್ತವೆ. ಹೊಸ ಅವಕಾಶಗಳನ್ನು ಅಳವಡಿಸಿಕೊಳ್ಳಲು ಮತ್ತು ಮಾನಸಿಕವಾಗಿ ಗುಣವಾಗಲು ರೋಗಿಗಳು ತಮ್ಮ ಭಯವನ್ನು ಹೋಗಲಾಡಿಸ ಉದ್ದೇಶ ಈ ವ್ಯವಸ್ಥೆಯನ್ನು ಕೈಗೊಂಡಿದ್ದರು .

ವಿಶೇಷವಾಗಿ ಮಕ್ಕಳಲ್ಲಿ, ಕ್ಯಾನ್ಸರ್ ಚಿಕಿತ್ಸೆಗಾಗಿ ಆಗಾಗ್ಗೆ ಆಸ್ಪತ್ರೆಗೆ ಭೇಟಿ ನೀಡುವುದು ಅವರನ್ನು ಮಾನಸಿಕವಾಗಿ ಜರ್ಜರಿತವಾಗಿಸಬಹುದು, ಇದರಿಂದಾಗಿ ಅವರು ತಮ್ಮ ಬಾಲ್ಯವನ್ನು ಆಹ್ಲಾದಿಸುವ, ಮೋಜು ಮಾಡುವ, ಭರವಸೆ ಮತ್ತು ಉತ್ಸಾಹವನ್ನು ಕಳೆದುಕೊಳ್ಳುತ್ತಾರೆ , ಇದನ್ನು ಗಮನದಲ್ಲಿಟ್ಟುಕೊಂಡು, ಮಣಿಪಾಲ್ ಆಸ್ಪತ್ರೆಗಳು ಕ್ಯಾನ್ಸರ್ ನೊಂದಿಗೆ ಹೋರಾಡಿ ಜಯಿಸಿದ 20 ಮತ್ತು ಅವರ ಪೋಷಕರನ್ನು ಸಂದರ್ಶಿಸಿ, ಅವರಿಗೆ ಸರಿಯಾದ ಸುರಕ್ಷತೆ, ಆರೈಕೆ ಮತ್ತು  ಮೋಜಿನ ದಿನವನ್ನು ನೀಡುವ ಭರವಸೆಯೊಂದಿಗೆ ಅವರನ್ನು ಸಭಾಂಗಣಕ್ಕೆ ಆಹ್ವಾನಿಸಿದ್ದರು. ಸುಲಭವಾಗಿ ಗುರುತಿಸಲು ಪ್ರತಿ ಸ್ಪರ್ಧಿಗೆ ರಿಸ್ಟ್ಬ್ಯಾಂಡ್ ನೀಡಲಾಗಿತ್ತು .

Leave a Reply

Your email address will not be published. Required fields are marked *