ವಿಶ್ವ ಪರಿಸರ ದಿನಾಚರಣೆ ಅಂಗವಾಗಿ “ನಮ್ಮ ಭೂಮಿ-ನಮ್ಮ ಭವಿಷ್ಯ, ನಮ್ಮ ಪೀಳಿಗೆಗೆ ಪುನಃಸ್ಥಾಪನೆ” ಎಂಬ ಘೋಷವಾಕ್ಯದೊಂದಿಗೆ ಹಾಗೂ ಹಸಿರೇ ಉಸಿರು ಕಾರ್ಯಕ್ರಮದ ಅಂಗವಾಗಿ ತಾಲೂಕಿನ ಕೋಲಿಗೆರೆ ಗ್ರಾಮದಲ್ಲಿ ಗಿಡ ನೆಡುವ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು.
ದೊಡ್ಡಬೆಳವಂಗಲ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ನವೀನ್ ಕುಮಾರ್ ಅವರು ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ವೇಳೆ ಗೋವಿಂದ ರಾಜು, ರೋಹಿತ್, ವಕೀಲ ನರೇಂದ್ರ, ನಾರನಹಳ್ಳಿ ಆನಂದ್, ಬೆಳವಂಗಲ N L.ರಾಜು ಸೇರಿದಂತೆ ಇತರರು ಉಪಸ್ಥಿತರಿದ್ದರು.