ಕೋಲಾರ: ಅಧಿಕಾರದ ಆಸೆಗಾಗಿ ಪೈಪೋಟಿ ಪಡುವ ಸಂದರ್ಭದಲ್ಲಿ ಬಯಸದೇ ಬಂದ ರೀತಿಯಲ್ಲಿ ಜಿಲ್ಲೆಯ ಹಿರಿಯ ಸಹಕಾರಿ ಧುರೀಣರ ಮಾರ್ಗದರ್ಶನದಲ್ಲಿ ಬೇಡ ಎಂದು ದೂರ ನಡೆದರು ಕೊನೆಯಲ್ಲಿ ಎಳೆದು ತಂದು ಕೋಲಾರ ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷರ ಪಟ್ಟ ಕಟ್ಟಿದ ಪ್ರಸಂಗ ಪಿಎಲ್ ಡಿ ಬ್ಯಾಂಕ್ ನಲ್ಲಿಂದು ನಡೆದಿದೆ.
ಹಿಂದಿನ ಅವಧಿಗೆ ಕೋಲಾರ ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷರಾಗಿದ್ದ ಕೃಷ್ಣೇಗೌಡರಿಂದ ತೆರೆವುಗೊಂಡ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿತ್ತು. ತಾನು ಆಗಬೇಕು ನಾನು ಆಗಬೇಕು ಎಂದು ಮೂವರು ಅಭ್ಯರ್ಥಿಗಳು ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು. ರೈತರ ಸ್ವಾಭಿಮಾನದ ಬ್ಯಾಂಕ್ ಇಲ್ಲಿ ಅವಿರೋಧವಾಗಿ ಆಯ್ಕೆಯಾಗಬೇಕು ಎಂದು ಹಿರಿಯರು ತೀರ್ಮಾನಿಸಿ, ಯಾರಾದರೂ ಒಬ್ಬರು ಆಗಲಿ ಎಂದು ತಿಳಿಸಿದ್ದರು. ಆದರೆ, ಮೂವರನ್ನು ಮನವೊಲಿಸಿದರು ಕೂಡ ಯಾರು ನಾಮಪತ್ರಗಳನ್ನು ವಾಪಸ್ಸು ಪಡೆಯಲಿಲ್ಲ. ಅಂತಿಮವಾಗಿ ಹಿರಿಯ ಸಹಕಾರಿ ಧುರೀಣರ ಮಾರ್ಗದರ್ಶನದಲ್ಲಿ ಹಿರಿಯ ಸಹಕಾರಿ ಧುರೀಣ ಹಾಗೂ ಹಾಲಿ ಪಿಎಲ್ ಡಿ ಬ್ಯಾಂಕ್ ರಾಜ್ಯ ನಿರ್ದೇಶಕ ಯಲವಾರ ಸೊಣ್ಣೇಗೌಡ ಅವರನ್ನು ಬಲವಂತವಾಗಿ ನಾಮಪತ್ರ ಸಲ್ಲಿಸಿ ಅಧ್ಯಕ್ಷ ಪಟ್ಟ ಕಟ್ಟಿದ್ದಾರೆ.
ಇವತ್ತಿನ ಯಾವುದೇ ಚುನಾವಣೆಗಳು ಇರಲಿ ಸ್ಪರ್ಧೆ, ಪೈಪೋಟಿ ಇದ್ದೇ ಇರುತ್ತದೆ. ಅದರಲ್ಲೂ, ಪ್ರತಿಷ್ಠೆಗಳೇ ಹೆಚ್ಚು ಅದರಲ್ಲೂ ಅಧಿಕಾರದ ಆಸೆ ಪ್ರತಿಯೊಬ್ಬರಲ್ಲೂ ಇರುತ್ತದೆ. ಆದರೆ, ಪಿಎಲ್ ಡಿ ಬ್ಯಾಂಕ್ ಗೆ ನೂತನವಾಗಿ ಆಯ್ಕೆಯಾದ ಯಲವಾರ ಸೊಣ್ಣೇಗೌಡ ನಾನು ಒಬ್ಬ ನಿರ್ದೇಶಕನಾಗಿ ರೈತರಿಗೆ ಎಷ್ಟು ನ್ಯಾಯ ಕೊಡಿಸಲು ಸಾಧ್ಯವೋ ಅಷ್ಟು ಮಾಡಿಕೊಂಡು ಹೋಗುತ್ತೇವೆ. ನನಗೆ ಯಾವುದೇ ಕಾರಣಕ್ಕೂ ಅಧ್ಯಕ್ಷ ಪದವಿ ಬೇಡ ಎಂದರು.
ಪಟ್ಟು ಬಿಡದ ಹಿರಿಯ ಸಹಕಾರಿಗಳು ನೀನು ಆಗಲೇ ಬೇಕು ನಾಮಪತ್ರ ಸಲ್ಲಿಸಿ ಉಳಿದ ಮೂವರ ನಾಮಪತ್ರಗಳನ್ನು ವಾಪಸು ಪಡೆದು ಅಂತಿಮವಾಗಿ ಯಲವಾರ ಸೊಣ್ಣೇಗೌಡ ಅವಿರೋಧವಾಗಿ ಆಯ್ಕೆಯಾಗುವಂತೆ ಮಾಡಿದರು.
ಈ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ನೂತನ ಅಧ್ಯಕ್ಷ ಯಲವಾರ ಸೊಣ್ಣೇಗೌಡ, ಕೆಲಸ ಮಾಡಲಿಕ್ಕೆ ಅಧಿಕಾರವೇ ಬೇಕಾಗಿಲ್ಲ ನನಗೆ ಅಧ್ಯಕ್ಷ ಪಟ್ಟ ಬೇಡ ಎಂದು ಹೇಳಿದರೂ, ಹಿರಿಯ ಸಹಕಾರಿಗಳು ನನ್ನನ್ನು ಅಧ್ಯಕ್ಷರಾಗಿ ಮಾಡಿದ್ದಾರೆ. ಮುಂದೆ ತಾಲೂಕಿನ ರೈತರು ಅಭಿವೃದ್ಧಿಯಾಗುವ ನಿಟ್ಟಿನಲ್ಲಿ ಹಿರಿಯ ಸಹಕಾರಿಗಳ ಮಾರ್ಗದರ್ಶನದಲ್ಲಿ ಬ್ಯಾಂಕ್ ಮಾದರಿಯಾಗುವ ರೀತಿಯಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ನಡೆಸಿಕೊಂಡು ಹೋಗುತ್ತನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಸ್ಥಾನಕ್ಕೆ ಸುನಂದಮ್ಮ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಈ ವೇಳೆ ಹಿರಿಯ ಸಹಕಾರಿ ಮುಖಂಡರಾದ ಛತ್ರಕೋಡಿಹಳ್ಳಿ ಮುನೇಗೌಡ, ಬ್ಯಾಲಹಳ್ಳಿ ಗೋವಿಂದಗೌಡ, ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್, ಕೋಚಿಮುಲ್ ನಿರ್ದೇಶಕ ವಡಗೂರು ಡಿ.ವಿ ಹರೀಶ್, ರಾಜ್ಯ ಒಕ್ಕಲಿಗ ಸಂಘದ ಮಾಜಿ ನಿರ್ದೇಶಕ ವಕ್ಕಲೇರಿ ರಾಮು, ತಲಗುಂದ ನರಸಿಂಹರಾಜು, ಸೇರಿದಂತೆ ಪಿಎಲ್ ಡಿ ಬ್ಯಾಂಕ್ ನಿರ್ದೇಶಕರು ಇದ್ದು, ಚುನಾವಣಾಧಿಕಾರಿಯಾಗಿ ಜಗದೀಶ್ ಕಾರ್ಯನಿರ್ವಹಿಸಿದರು.