ಕೋಲಾರ ಎಂಪಿ ಕ್ಷೇತ್ರ ಬಿಜೆಪಿಗೆ ನೀಡಿದರೆ ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ಸಹಕಾರಿಯಾಗಲಿದೆ: ಓಂಶಕ್ತಿ ಚಲಪತಿ

ಕೋಲಾರ: ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಶಾಸಕರು ಇಲ್ಲದೇ ಇದ್ದರೂ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯೇ ಎರಡು ಲಕ್ಷ ಮತಗಳ ಅಂತರದಿಂದ ಸಂಸದರಾಗಿ ಪಕ್ಷ ಸಂಘಟನೆಯಾಗಿದೆ. ಮತ್ತೊಮ್ಮೆ ಕೋಲಾರ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಟಿಕೆಟ್ ನೀಡಿದರೆ ಗೆಲುವು ಖಚಿತ. ಜೊತೆಗೆ ಮತ್ತಷ್ಟು ಪಕ್ಷದ ಸಂಘಟನೆಗೆ ಸಹಕಾರಿಯಾಗಲಿದೆ ಎಂದು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಕೂಡಾ ಮಾಜಿ ಅಧ್ಯಕ್ಷ ಓಂಶಕ್ತಿ ಚಲಪತಿ ತಿಳಿಸಿದರು.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೋಲಾರ ಎಂಪಿ ಕ್ಷೇತ್ರವನ್ನು ಜೆಡಿಎಸ್ ಪಕ್ಷಕ್ಕೆ ನೀಡಲಾಗುತ್ತದೆ ಎಂದು ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ ಅವರು ಎನ್.ಡಿ.ಎ.ಮೈತ್ರಿಕೂಟದ ಒಂದು ಭಾಗವಾಗಿದ್ದಾರೆ ಅವರು ಎರಡು ಬಾರಿ ಮಾಜಿ ಮುಖ್ಯಮಂತ್ರಿಯಾಗಿದ್ದವರು ಎರಡು ಪಕ್ಷಗಳ ವರಿಷ್ಠರು ಯಾರಿಗೆ ಟಿಕೆಟ್ ನೀಡಿದರೂ ಕೆಲಸ ಮಾಡತ್ತೇವೆ ಬಿಜೆಪಿಗೆ ಕೊಟ್ಟರೆ ಉತ್ತಮ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು

ಬಿಜೆಪಿಯಿಂದ ರಾಜ್ಯದಲ್ಲಿ ಈಗಾಗಲೇ 20 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ. ಇನ್ನೂ 8 ಕ್ಷೇತ್ರಗಳ ಘೋಷಣೆ ಬಾಕಿ ಇದೆ. ಕಳೆದ ಬಾರಿ ಬಿಜೆಪಿ ಅಭ್ಯರ್ಥಿ ಎನ್.ಮುನಿಸ್ವಾಮಿ 2.11 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ ಕೆಳೆದ 5 ವರ್ಷಗಳಿಂದ ಪಕ್ಷದ ಸಂಘಟನೆ ಉತ್ತಮವಾಗಿ ನಡೆದಿದೆ. ಬಿಜೆಪಿ ಸಂಘಟನೆ ಮತ್ತು ವ್ಯಕ್ತಿತ್ವಕ್ಕಾಗಿ ಕಳೆದ ಬಾರಿ ಗೆದ್ದಿದ್ದ ಕ್ಷೇತ್ರ ಮತ್ತೆ ನಮಗೆ ನೀಡಬೇಕೆಂಬುದು ನಮ್ಮ ಒತ್ತಾಯವಾಗಿದೆ.

ಕೋಲಾರ ಕ್ಷೇತ್ರ ಬಿಜೆಪಿಗೆ ನೀಡುತ್ತಾರೆಂಬ ಆಶಾಭಾವನೆ ಇದೆ. ಉಳಿದಿದ್ದು ಹೈಕಮ್ಯಾಂಡ್‌ಗೆ ಬಿಟ್ಟಿದ್ದು, ಹೈಕಮಾಂಡ್ ಜೆಡಿಎಸ್ ನೀಡದೆ ಬಿಜೆಪಿಗೆ ನೀಡಿದರೆ ಒಟ್ಟಾಗಿ ಕೆಲಸ ಮಾಡುತ್ತೇವೆ. ಹಾಲಿ ಸಂಸದರಿಗೆ ನೀಡಿದರೆ ಬಿಜೆಪಿ ಜಿಲ್ಲೆಯಲ್ಲಿ ಮತ್ತಷ್ಟು ಬಲಿಷ್ಠಗೊಳ್ಳುತ್ತದೆ. 5 ವರ್ಷಗಳ ಕಾಲ ಸಂಸದರು ಉತ್ತಮವಾಗಿ ಕೆಲಸ ನಿರ್ವಹಿಸಿದ್ದಾರೆ ಎಂದರು.

ದೇಶದಲ್ಲಿ ಸಿಎಎ ಜಾರಿ ಮಾಡಲು ಹೊರಟಿರುವುದು ಉತ್ತಮ ಬೆಳವಣಿಗೆಯಾಗಿದೆ ಬಿಜೆಪಿ ಪಕ್ಷವು ಯಾವತ್ತೂ ಮುಸ್ಲಿಮರಿಗೆ ವಿರೋಧವಾಗಿಲ್ಲ
ಭಾರತದ ಮುಸ್ಲಿಮರಿಗಾಗಲಿ, ಕ್ರೈಸ್ತರಿಗಾಗಲಿ ಬಿಜೆಪಿ ವಿರೋಧ ಮಾಡುತ್ತಿಲ್ಲ. ಅವರನ್ನು ದೇಶದಿಂದ ಹೊರ ಹಾಕುವ ಉದ್ದೇಶ ಯಾರಿಗೂ ಇಲ್ಲ. ಆದರೆ ಕಾಂಗ್ರೇಸ್ ನವರು ಬಿಜೆಪಿ ಬಗ್ಗೆ ಅಪಪ್ರಚಾರ ಮಾಡುತ್ತಾ ಅಲ್ಪಸಂಖ್ಯಾತರನ್ನು ಸೆಳೆಯುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೇಸ್ ನವರಿಗೆ ಸುಳ್ಳು ಹೇಳುವುದೇ ಅವರ ಜಾಯಮಾನವಾಗಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

Leave a Reply

Your email address will not be published. Required fields are marked *