ಕೋಲಾರ: ಅಪರಾಧ ಪ್ರಕರಣ ಹಾಗೂ ಡ್ರಗ್ಸ್ ದಂಧೆಯನ್ನ ಮಟ್ಟಹಾಕುವಂತೆ ಒತ್ತಾಯಿಸಿ ಧರಣಿ

ಇತ್ತೀಚೆಗೆ ಕೋಲಾರ ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳು ಹಾಗೂ ಡ್ರಗ್ಸ್ ದಂಧೆ ಹೆಚ್ಚಾಗುತ್ತಿದ್ದು, ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಭಯದ ವಾತಾವರಣದಲ್ಲಿ ಬದುಕುವಂತಾಗಿದೆ. ಮಿತಿಮೀರಿದ ಅಪರಾಧ ಪ್ರಕರಣಗಳು ಹಾಗೂ ಡ್ರಗ್ಸ್ ದಂಧೆಯನ್ನ ಮಟ್ಟಹಾಕಿ ಕೋಲಾರವನ್ನ ಶಾಂತಿಯುತವಾಗಿ ಇರಿಸಲು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕೋಲಾರ ಜಿಲ್ಲಾ ಪ್ರಗತಿಪರ ಸಂಘಟನೆಗಳ ಒಕ್ಕೂಟ ಹಾಗೂ ಕಾಲೇಜಿನ‌ ವಿದ್ಯಾರ್ಥಿಗಳು, ಶಿಕ್ಷಕರು, ಸಾರ್ವಜನಿಕರು ಧರಣಿ ನಡೆಸಿದ್ದಾರೆ.

ಪ್ರತಿಭಟನಾನಿರತರ ಹಕ್ಕೋತ್ತಾಯಗಳು

1.ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕಲು ಸೂಕ್ತ ತನಿಖಾ ತಂಡವನ್ನ ರಚಿಸಬೇಕು.

2. ಜಿಲ್ಲೆಯ ಪ್ರಮುಖ‌ ಭಾಗಗಳಲ್ಲಿ ವಿಶೇಷ ಗಸ್ತು ಪಡೆಯನ್ನ ನೇಮಿಸಬೇಕು.

3. ಕೆಲವು ಔಷಧಿ ಅಂಗಡಿಗಳಲ್ಲಿ ವೈದ್ಯರ ಸಲಹೆ ಚೀಟಿ ಇಲ್ಲದೆ ಮತ್ತು ಬರುವಂತಹ ಔಷಧಿಗಳನ್ನ ಮಾರಾಟ ಮಾಡಲಾಗುತ್ತಿದೆ. ಇದಕ್ಕೆ ಕೂಡಲೇ ಕಡಿವಾಣ ಹಾಕಬೇಕು.

4. ಗಾಂಜಾ ಮಾಫಿಯಾವನ್ನ ಮಟ್ಟಹಾಕಲು ತಂಡ ರಚನೆ ಮಾಡಬೇಕು.

5. ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಸೂಕ್ತ ಕಾನೂನಿನ ಅರಿವು ಹಾಗೂ ಮಾದಕ ವಸ್ತುಗಳಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಶಿಬಿರಗಳನ್ನ ಹಮ್ಮಿಕೊಳ್ಳಬೇಕು.

6. ಹತ್ಯೆಯಾದ ಕಾರ್ತಿಕ್ ಸಿಂಗ್ ಕೊಲೆಯ ಆರೋಪಿಗಳನ್ನ ಅಪ್ರಾಪ್ತರೆಂದು ಪರಿಗಣೊಸದೆ ಶಿಕ್ಷೆಗೆ ಒಳಪಡಿಸಬೇಕು.

7. ಹತ್ಯೆಯಾದ ಕಾರ್ತಿಕ್ ಸಿಂಗ್ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ತಾಲೂಕು ಕಚೇರಿವರೆಗೆ ಬೃಹತ್ ಜಾಥಾ ನಡೆಸಿ ಜಿಲ್ಲಾ ಪೊಲೀಸ್ ಅಧೀಕ್ಷಕರು, ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.

Leave a Reply

Your email address will not be published. Required fields are marked *