ಕೋರ್ಟ್‌ಗೆ ಹೋಗುವ ವೇಳೆ ವಕೀಲನ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆ

ಕೋರ್ಟ್‌ಗೆ ಹೋಗುವ ವೇಳೆ ವಕೀಲನೊಬ್ಬನ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕಲಬುರ್ಗಿಯ ಸಾಯಿ ಮಂದಿರ ಬಳಿ ನಡೆದಿದೆ.

ಈರಣಗೌಡ ಪಾಟೀಲ್‌ (40), ಕೊಲೆಯಾದ ವಕೀಲ ಎಂದು ಗುರುತಿಸಲಾಗಿದೆ.

ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಸಂಬಂಧಿಕರೇ ಹತ್ಯೆ ಮಾಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಹತ್ಯೆಗೈದ ಆರೋಪಿಯನ್ನ ಬಂಧಿಸುವಂತೆ ಜಿಲ್ಲಾ ವಕೀಲರ ಸಂಘದಿಂದ ನಗರದ ಎಸ್.ಪಿ.ವಿ ಸರ್ಕಲ್‌ ಬಳಿ ಬೃಹತ್‌ ಪ್ರತಿಭಟನೆ ನಡೆಸಲಾಗಿದೆ.

ಸದ್ಯ ಆರೋಪಿಗಳು ಕಲ್ಲು‌ ಹಾಗೂ ಮಾರಕಾಸ್ತ್ರಗಳೊಂದಿಗೆ ವಕೀಲನನ್ನು ಬೆನ್ನಟ್ಟುತ್ತಿರುವ ದೃಶ್ಯ  ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್‌ ಆಗಿದೆ.

ಈ ಕುರಿತು ವಿಶ್ವ ವಿದ್ಯಾಲಯ ಠಾಣೆ ಪೋಲಿಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *