ಕೋಮುವಾದಿ ಧೋರಣೆಯ ಬಿಜೆಪಿಯ ದುರಾಡಳಿತವನ್ನು ಕೊನೆಗಣಿಸಿ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುವುದಾಗಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನ ಸಮಿತಿ ಘೋಷಿಸಿದೆ.
ದೊಡ್ಡಬಳ್ಳಾಪುರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಗೆ ಬೆಂಬಲ ಸೂಚಿಸಿ ಸಂಘಟನೆಯ ರಾಜ್ಯ ಮುಖಂಡ ರಮೇಶ್ ಮಾತನಾಡಿ ಲೋಕಸಭಾ ಚುನಾವಣೆಯಲ್ಲಿ ಸಂವಿಧಾನ ವಿರೋಧಿ, ಸರ್ವಾಧಿಕಾರಿ ಹಾಗೂ ಪ್ರಜಾಪ್ರಭುತ್ವದ ಆಶಯಗಳನ್ನು ಗಾಳಿಗೆ ತೂರಿ ಮನುವಾದವನ್ನು ಬಲವಂತವಾಗಿ ಹೇರುತ್ತಿರುವ ಮೋದಿ ನೇತೃತ್ವದ ಬಿಜೆಪಿಯನ್ನು ಸೋಲಿಸಬೇಕಾಗಿದೆ ಎಂದು ಹೇಳಿದರು.
ಸಬ್ ಕಾ ಸಾತ್, ಸಬ್ ಕಾ ವಿಕಾಸ್ ಎನ್ನುವ ಘೋಷದೊಂದಿಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ, ಪ್ರಜಾಪ್ರಭುತ್ವದ ಆಶಯಗಳನ್ನು ಗಾಳಿಗೆ ತೂರಿ ದಲಿತ, ಶೂದ್ರ ಮುಂತಾದ ತಳ ಸಮುದಾಯಗಳನ್ನು ತುಳಿಯುವ ಹುನ್ನಾರ ನಡೆಸಿದೆ. ಅದರಲ್ಲೂ ಪ್ರಮುಖವಾಗಿ ಸಂವಿದಾನವನ್ನು ಬದಲಾಯಿಸಲು ಸಂಚು ನಡೆಸಿರುವುದು ಕಂಡನೀಯ ಎಂದು ಕಿಡಿಕಾರಿದರು.
ಅನಂತಕುಮಾರ ಹೆಗ್ಡೆ ಒಬ್ಬ ಅಯೋಗ್ಯ, ಸಂವಿಧಾನದ ಬದಲಾವಣೆ ಬಗ್ಗೆ ಸತತವಾಗಿ ಮಾತನಾಡುತ್ತಿದ್ದರೂ ಪ್ರಧಾನಿ ಮೋದಿ ಕನಿಷ್ಠ ಅದನ್ನು ಖಂಡಿಸಿಲ್ಲ. ಬಿಜೆಪಿ ಸಹ ಸಂವಿಧಾನ ವಿರೋಧಿ ಹೇಳಿಕೆ ಕೊಟ್ಟ ಹೆಗ್ಡೆ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲವೆಂದರೆ ಬಾಬಾ ಸಾಹೇಬರ ಸಂವಿಧಾನದ ಬಗ್ಗೆ ಬಿಜೆಪಿಗೆ ಎಷ್ಟು ಅಸಹನೆ ಇದೆ ಎಂದು ಗೊತ್ತಾಗುತ್ತದೆ. ಮುಖ್ಯವಾಗಿ ಈ ಸಂದರ್ಭದಲ್ಲಿ ಕೋಮುವಾದಿಗಳಿಂದ ದೇಶವನ್ನು ಉಳಿಸುವ ಅನಿವಾರ್ಯತೆ ನಮ್ಮೆಲ್ಲರಿಗೂ ಇದೆ ಎಂದರು.
ಬಿಜೆಪಿ ಹತ್ತು ವರ್ಷದ ಸಾಧನೆ ಶೂನ್ಯ. ಬಡವರ ಖಾತೆಗೆ 15 ಲಕ್ಷ, ವರ್ಷಕ್ಕೆ ಎರಡು ಕೋಟಿ ಉದ್ಯೋಗ ಹೀಗೆ ಹತ್ತು ಹಲವು ಭರವಸೆಗಳು ಭರವಸೆಗಳಾಗೆ ಉಳಿದಿವೆ. ಮೋದಿ ಅಧಿಕಾರದಲ್ಲಿ ಸರ್ಕಾರಿ ಸ್ವತ್ತುಗಳನ್ನು ಖಾಸಗಿಯವರಿಗೆ ಮಾರಿ ಕಾರ್ಪೊರೇಟ್ ಕಂಪನಿಗಳಿಗೆ ಲಾಭ ಮಾಡಿಕೊಟ್ಟಿದ್ದೆ ದೊಡ್ಡ ಸಾಧನೆಯಗಿದೆ. ಜೊತೆಗೆ ಧರ್ಮವನ್ನು ಮುಂದಿಟ್ಟುಕೊಂಡು ಮತ್ತೊಮ್ಮೆ ಚುನಾವಣೆಗೆ ಬಿಜೆಪಿಗರು ಮುಂದಾಗಿದ್ದಾರೆ ಎಂದು ಹೇಳಿದರು.
ಮುಖಂಡ ಮುನಿಸುಬ್ಬು ಮಾತನಾಡಿ ಪ್ರಧಾನಿ ಮೋದಿ ಹತ್ತು ವರ್ಷ ದೇಶವನ್ನಾಳಿದ್ದಾರೆ ಈ ಹತ್ತು ವರ್ಷಗಳಲ್ಲಿ ಜನಪರ ಕಾಳಜಿ ತೋರದೆ ಬಾಬಾ ಸಾಹೇಬರ ಸಂವಿಧಾನದ ಆಶಯಗಳನ್ನು ಹತ್ತಿಕ್ಕುವ ಪ್ರಯತ್ನ ಮಾಡಿದ್ದಾರೆ. ಒಂದೆಡೆ ಬಾಬಾ ಸಾಹೇಬರು ಬಂದರೂ ಸಂವಿದಾನವನ್ನು ಬದಲಾಯಿಸಲು ಸಾಧ್ಯವಿಲ್ಲವೆಂದು ಹೇಳುವ ಬಿಜೆಪಿಯವರು ಒಳಗೊಳಗೇ ದಲಿತ ಹಿಂದುಳಿದ ವರ್ಗಗಳನ್ನು ತುಳಿದು ಸಂವಿಧಾನ ಬದಲಿಸುವ ಕೆಲಸ ಮಾಡುತ್ತಿದ್ದಾರೆ. ಧರ್ಮದ ಆಧಾರದಲ್ಲಿ ದೇಶವನ್ನು ಒಡೆಯಲು ನೋಡುತ್ತಿರುವ ಬಿಜೆಪಿ ಯಂತ ಕೋಮುವಾದಿ ಪಕ್ಷವನ್ನು ಸೋಲಿಸಿ ಜಾತ್ಯತೀತ ಪಕ್ಷವಾದ ಕಾಂಗ್ರೆಸನ್ನು ಗೆಲ್ಲಿಸಬೇಕಿದೆ ಎಂದು ಹೇಳಿದರು.
ದಲಿತ ಸಂಘರ್ಷ ಸಮಿತಿಯ ಜಿಲ್ಕಾ ಮುಖಂಡ ರಾಜು ಸಣ್ಣಕ್ಕಿ ಮಾತನಾಡಿ, ಮೋದಿ ಪ್ರಧಾನಿಯಾಗಿ ಜನಪರ ಆಡಳಿತವನ್ನು ನೀಡುವುದರಲ್ಲಿ ವಿಫಲರಾಗಿದ್ದಾರೆ. ರೈತರಿಗೆ ಸ್ವಾಮಿನಾಥನ್ ವರದಿಯಂತೆ ಬೆಳೆದ ಬೆಳಗೆ ಬೆಂಬಲ ಬೆಲೆ ನೀಡುವ ಕಾಯ್ದೆ ಜಾರಿಗೊಳಿಸುವ ಭರವಸೆ ನೀಡಿ ಅಧಿಕಾರಕ್ಕೆ ಬಂದ ಮೋದಿ ಎಂಎಸ್‌ಪಿ ಜಾರಿಗೊಳಿಸುವಂತೆ ಒತ್ತಾಯಿಸಿ ಹೋರಾಟ ಮಾಡಿದ ರೈತರನ್ನು ಹತ್ತಿಕ್ಕುವ ಕೆಲಸ ಮಾಡಿದ್ದಾರೆ. ದೆಹಲಿ ಗಡಿಗಳಿಗೆ ರೈತರು ಬರದಂತೆ ರಸ್ತೆಗಳಿಗೆ ಕಬ್ಬಿಣದ ಮುಳ್ಳುಗಳನ್ನು ಹೊಡೆದಿದ್ದರು ಜೆಸಿಬಿ ಮೂಲಕ ರಸ್ತೆಗಳನ್ನೇ ಕೊರೆದು ರೈತರು ಒಳಗೆ ಬರದಂತೆ ಕಂದಕಗಳನ್ನು ಸೃಷ್ಟಿ ಮಾಡಿದ್ದರು. ಈ ಹೋರಾಟದಲ್ಲಿ 750 ಹೆಚ್ಚು ರೈತರು ತಮ್ಮ ಪ್ರಾಣ ಕಳೆದುಕೊಂಡರೂ ರೈತ ವಿರೋಧಿ ಮೋದಿ ರೈತರ ಬೇಡಿಕೆಗಳ ಬಗ್ಗೆ ಚಕಾರ ಎತ್ತಲಿಲ್ಲ ಎಂದು ಆರೋಪಿಸಿದರು.
ಕೋವಿಡ್ ಸಂದರ್ಭದಲ್ಲಿ ಚುಚ್ಚು ಮದ್ದು ಕೊಡದೆ ಉದಾಸೀನಾ ತೋರಿದ್ದು ಕಡೆಗೆ ಸುಪ್ರೀಂ ಕೋರ್ಟ್ ಚೀಮಾರಿ ಹಾಕಿದ ನಂತರ ಪ್ರತಿ ನಾಗರೀಕನಿಗೂ ಉಚಿತ ಚುಚ್ಚುಮದ್ದು ನೀಡಿದರು. ನಮ್ಮ ರಾಜ್ಯದ ಪಾಲಿನ ಜಿಎಸ್‌ಟಿ ಅನುದಾನ, ಬರ ಪರಿಹಾರ ಸೇರಿದಂತೆ ರಾಜ್ಯದ ಅನುದಾನವನ್ನು ತಡೆ ಹಿಡಿದು ಮಲತಾಯಿ ದೋರಣೆ ತಾಳಿದ್ದು, ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ನಂತರ ಅನುದಾನ ಬಿಡುಗಡೆ ಮಾಡಲು ಒಪ್ಪಿದ್ದು ಬಿಜೆಪಿ ಬಡ ಜನರ ವಿರೋಧಿ ಎಂಬುದಕ್ಕೆ ಸ್ಫಷ್ಟ ಉದಾಹರಣೆ ಎಂದರು.
ಒಟ್ಟಾರೆ ಈ ಮನುವಾದಿ ಪಕ್ಷಗಳು ಸಂವಿದಾನವನ್ನು ಗುಪ್ತವಾಗಿ ಬದಲಿಸುವ ಗುರಿ ಹೊಂದಿದ್ದಾರೆ. ಹೀಗಾಗಿ ಬಿಜೆಪಿ ಮೈತ್ರಿ ಪಕ್ಷವನ್ನು ಸೋಲಿಸಿ ಕಾಂಗ್ರೆಸ್ ಬೆಂಬಲಿಸಬೇಕಾಗಿದೆ ಎಂದರು.
ದಲಿತ ಮುಖಂಡ ಗುರುರಾಜಪ್ಪ ಮಾತನಾಡಿ ಪ್ರಸ್ತುತ ಪ್ರಜಾಪ್ರಭುತ್ವ ಸಂಧಿಗ್ದ ಪರಿಸ್ಥಿತಿಯಲ್ಲಿದೆ. ಸಂವಿಧಾನ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ. ಮೋದಿ ಸರ್ಕಾರ ಸರ್ವಾಧಿಕಾರಿ ದೋರಣೆ ತಾಳಿದೆ. ಯಾವುದೇ ಚರ್ಚೆಯಿಲ್ಲದೇ ಶೇ. 3 ರಷ್ಟಿರುವವರಿಗೆ 10% ಮೀಸಲಾತಿ ನೀಡುತ್ತಾರೆ. ಆದರೆ, ಇಲ್ಲಿನ ಮೂಲನಿವಾಸಿಗಳ ಹಾಕ್ಕೋತ್ತಯಗಳನ್ನು ಕಡೆಗಣಿಸುತ್ತಾರೆ. ಮೋದಿ ಆಡಳಿತದಲ್ಲಿ ಸಾಮಾಜಿಕ ನ್ಯಾಯ ಸತ್ತಿದೆ. ಜನವಿರೋಧಿ ನೀತಿಗಳನ್ನು ಪ್ರಶ್ನೆ ಮಾಡುವ ಹಾಗೆ ಇಲ್ಲಾ. ಜನರ ಆಶಯಕ್ಕೆ ವಿರುದ್ಧವಾಗಿ ಮನುವಾದಿ ಸಂಸ್ಕೃತಿಯನ್ನು ಬಲವಂತವಾಗಿ ಹೇರಲು ಮೋದಿ ಸರ್ಕಾರ ಹೊರಟಿದೆ. ಇದನ್ನೆಲ್ಲಾ ಪ್ರಶ್ನೆ ಮಾಡಿದರೆ ದೇಶ ದ್ರೋಹದ ಆಪಾದನೆ ಹೋರಿಸುತ್ತಾರೆ, ಬರೀ ಸುಳ್ಳುಗಳನ್ನು ಪ್ರತಿ ಪಾಧಿಸುವುದು ಮೋದಿ ಕೆಲಸ. ಹೀಗಾಗಿ ಸಂವಿದಾನವನ್ನು ಬೆಂಬಲಿಸುವ ಜಾತ್ಯತೀತ ಆಶಯವನ್ನು ಉಳಿಸುವ ಕಾಂಗ್ರೆಸ್ ಪಕ್ಷವನ್ನು ನಾವೆಲ್ಲ ಬೆಂಬಲಿಸಬೇಕಿದೆ. ಬಾಬಾ ಸಾಹೇಬರು ನೀಡಿದ ಮತದಾನದ ಅಸ್ತ್ರವನ್ನು ಬಳಸಿ ಕೋಮುವಾದಿ ಹಾಗೂ ಸರ್ವಾಧಿಕಾರಿಗಳನ್ನು ತಿರಸ್ಕರಿಸಬೇಕಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕುರುಬರಳ್ಳಿ ಮಂಜುನಾಥ್, ಏಕಾಶಿಪುರ ರಾಜಣ್ಣ, ವಡ್ಡರಹಳ್ಳಿ ರಾಜಗೋಪಾಲ್ ಅಜಯ್, ಸೇರಿದಂತೆ ಹಲವಾರು ದಲಿತ ಮುಖಂಡರು ಉಪಸ್ಥಿತರಿದ್ದರು.
ಕೋಲಾರ: ಕೆ.ಸಿ.ವ್ಯಾಲಿ ಯೋಜನೆಯಿಂದ ಅಂತರ್ಜಲ ಹೆಚ್ಚಿ ರೈತರ ಬದುಕು ಹಸನಾಗಿದ್ದು, ಜೆಡಿಎಸ್ ಪಕ್ಷ ಸೇರಿದಂತೆ ಕೆಲ ಮುಖಂಡರಿಂದ ದಾರಿ ತಪ್ಪಿಸುವ…
ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಜಾಗೃತ ಪರಿಷತ್ತು ವತಿಯಿಂದ ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಅವರಿಗೆ ನುಡಿನಮನ…
ಆಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಸಹ ಶಿಕ್ಷಕ ಅರುಣ್ ಅವರು ವರ್ಗಾವಣೆಗೊಂಡಿದ್ದು, ಈ ಹಿನ್ನೆಲೆ ಇಂದು ಎಸ್…
ಬಿಜೆಪಿ-ಜೆಡಿಎಸ್ ಸಂಸದರು ರಾಜ್ಯಕ್ಕೆ ಕೇಂದ್ರದಿಂದ ಆಗುತ್ತಿರುವ ಅನ್ಯಾಯದ ಬಗ್ಗೆ ಬಾಯಿಯನ್ನೇ ಬಿಡುತ್ತಿಲ್ಲ. ಪ್ರಹ್ಲಾದ್ ಜೋಶಿ ಕೂಡ ಒಂದೇ ಒಂದು ದಿನ…
ಗೆದ್ದವರಿಗೆ ಅಭಿನಂದಿಸುತ್ತಾ, ಸೋತವರಿಗೆ ಸಾಂತ್ವನ ಹೇಳುತ್ತಾ, ಮತದಾರರಿಗೆ ಧನ್ಯವಾದಗಳನ್ನು ಅರ್ಪಿಸುತ್ತಾ, ಸಂವಿಧಾನಕ್ಕೆ ಸಲಾಂ ಹೊಡೆಯುತ್ತಾ, ನಮ್ಮ ಮುಗ್ದತೆ ಮತ್ತು ಮೂರ್ಖತನ…
ಡಿ.13ರಂದು ರಾಷ್ಟ್ರೀಯ ಲೋಕ ಅದಾಲತ್ ನಡೆಯಲಿದ್ದು, ರಾಷ್ಟ್ರೀಯ ಲೋಕ ಅದಾಲತ್ ಮುಖೇನ ರಾಜೀಯಾಗುವ ಪ್ರಕರಣಗಳ ವಿಲೇವಾರಿಗೊಳಿಸುವಂತೆ ಕರ್ನಾಟಕ ರಾಜ್ಯ ಕಾನೂನು…