ಕೋಮುಲ್ ಚುನಾವಣೆ ನಿಷ್ಪಕ್ಷಪಾತವಾಗಿ ನಡೆಸಲು ರೈತ ಸಂಘ ಒತ್ತಾಯ

ಕೋಲಾರ: ಹಾಲು ಒಕ್ಕೂಟ ಚುನಾವಣೆ ನಿಷ್ಪಕ್ಷಪಾತ ಹಾಗೂ ಪಾರದರ್ಶಕವಾಗಿ ನಡೆಯಬೇಕಾದರೆ ಹತ್ತಾರು ವರ್ಷಗಳಿಂದ ಒಕ್ಕೂಟದಲ್ಲಿರುವ ಅಧಿಕಾರಿಗಳನ್ನು ಕೂಡಲೇ ಬೇರೆ ಕಡೆ ವರ್ಗಾವಣೆ ಮಾಡಿ ನಿರ್ದೇಶಕರ ಸ್ಥಾನಕ್ಕೆ ಸ್ಪರ್ಧಿಸುವ ಆಕಾಂಕ್ಷಿಗಳು ಕಡ್ಡಾಯವಾಗಿ 5 ವರ್ಷ ಸ್ಥಳೀಯವಾಗಿ ಹಾಲೂ ಉತ್ಪಾದಕರ ಸಂಘದಲ್ಲಿ ಸದಸ್ಯತ್ವ ಪಡೆದಿರುಬೇಕೆಂಬ ಕಾನೂನು ಜಾರಿ ಮಾಡಬೇಕೆಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಅಧಿಕಾರಿಗಳನ್ನು ಒತ್ತಾಯಿಸಿರು.

ಈ ಕುರಿತು ನಗರದಲ್ಲಿ ಮಾತನಾಡಿ ಲಕ್ಷಾಂತರ ರೈತ ಕುಟುಂಬಗಳ ಜೀವನಾಡಿಯಾಗಿ ಸ್ವಾಭಿಮಾನದ ಬದುಕನ್ನು ಕಲ್ಪಿಸಿರುವ ಹಾಲು ಒಕ್ಕೂಟದಲ್ಲಿ ದಿನೇ ದಿನೇ ರಾಜಕೀಯ ವ್ಯಕ್ತಿಗಳ ಆರೋಪ ಪ್ರತ್ಯಾರೋಪ ಬಹಿರಂಗವಾಗುತ್ತಿದ್ದು, ಇದರಿಂದ ಹಾಲು ಒಕ್ಕೂಟ ಮುಚ್ಚು ಹೋಗುವ ಬೀತಿಯಲ್ಲಿರುವ ಕೋಲಾರ ಜಿಲ್ಲೆಯ ಹೈನೋದ್ಯಮದ ಉಳಿವಿಗಾಗಿ ಒಕ್ಕೂಟದಲ್ಲಿನ ಭ್ರಷ್ಟಾಚಾರ ತೊಗಬೇಕೆಂದರೆ ಹತ್ತಾರು ವರ್ಷಗಳಿಂದ ಒಕ್ಕೂಟದಲ್ಲಿಯೇ ಬೇರು ಬಿಟ್ಟಿರುವ ವ್ಯವಸ್ಥಾಪಕರಿಂದ ಹಿಡಿದು ಕೆಲವು ಉನ್ನತ ರಾಜಕೀಯ ಅಧ್ಯಕ್ಷರ ಕೈಬೊಂಬೆಯಾಗಿರುವ ಅಧಿಕಾರಿಗಳನ್ನು ಚುನಾವಣೆ ಮುಗಿಯುವ ವರೆಗೂ ಬೇರೆ ಕಡೆ ವರ್ಗಾವಣೆ ಮಾಡಬೇಕೆಂದು ಆಗ್ರಹಿಸಿದರು.

ಒಕ್ಕೂಟ ರೈತರ ಜೀವನಾಡಿ , ಒಕ್ಕೂಟ ಉಳಿಯಬೇಕಾದರೆ ಹಸುಗಳ ಮೇಲೆ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಬೇಸಿಗೆ ಮಳೆಗಾಲದಲ್ಲಿ ಮೇವು ನೀರು ಒದಗಿಸಿ ಬೆಲೆ ಇಳಿಕೆ ಯಾದಾಗ ಸಾಲ ಮಾಡಿ ಹಸು ಸಾಕಾಣಿಕೆ ಮಾಡಿ ಲಾಭ ಇಲ್ಲದಿದ್ದರೂ ಸಗಣಿ ಗಂಜಲಕ್ಕೆ ತನ್ನ ಜೀವವನನ್ನೇ ಜೀವನ ಮಾಡುವ ರೈತರು ಒಕ್ಕೂಟಕ್ಕೆ ಆಯ್ಕೆಯಾಗಬೇಕು. ಆದರೆ ಇವತ್ತಿನ ರಾಜಕೀಯ ಯಾವ ಪರಿಸ್ತಿತಿಯಲ್ಲಿದೆ ಎಂದರೆ ಹಸುಗಳಲ್ಲಿ ಎಷ್ಟು ತಳಿ ಇದೆ ಎಂದು ತಿಳಿದಿರುವುದಿಲ್ಲ. ಒಂದು ಲೀಟರ್ ಹಾಲು ಉತ್ಪಾದನೆಗೆ ಎಷ್ಟು ವೆಚ್ಚ ಆಗುತ್ತದೆ ಎಂದು, ಗಂದಾ ಗಾಳಿ ಗೊತ್ತಿಲ್ಲದ ರಾಜಕೀಯ ವ್ಯಕ್ತಿಗಳು ಒಕ್ಕೂಟದಲ್ಲಿನ ನೂರಾರು ಕೋಟಿ ಲೂಟಿ ಮಾಡಲು ಅಡ್ಡದಾರಿಯಲ್ಲಿ ಚುನಾವಣೆಯಲ್ಲಿ ಆಯ್ಕೆಯಾಗಲು ಮುಂದಾಗುತ್ತಿರುವುದು ದುರದೃಷ್ಟಿಕರ ಎಂದು ಅಸಮದಾನ ವ್ಯಕ್ತಪಡಿಸಿದರು.

ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ ಮಾತನಾಡಿ ಹಾಲು ಒಕ್ಕೂಟ ರಾಜಕೀಯ ವ್ಯಕ್ತಿಗಳ ತವರು ಮನೆಯಾಗಿದೆ. ಒಂದು ಕಡೆ ನಂಜೇಗೌಡರಿಗೆ ಅತ್ತೆ ಮನೆಯಾದರೆ ಬಂಗಾರಪೇಟೆ ಶಾಸಕರಾದ ಎಸ್.ಎನ್.ನಾರಾಯಣಸ್ವಾಮಿ ರವರಿಗೆ ತವರು ಮನೆಯಾಗಿ ಸಾವಿರಾರು ಹಸುಗಳನ್ನು ಕಟ್ಟಿ, ಕಷ್ಟಾ ಪಟ್ಟಂತೆ ರಾಜಕೀಯ ಮಾಡಿಕೊಂಡು, ಚುನಾವಣೆ ನಿಯಮವನ್ನು ಉಲ್ಲಂಘನೆ ಮಾಡಿ ಕೋಟ್ಯಾಂತರ ರೂಪಾಯಿ ಚುನಾವಣೆಗೆ ಖರ್ಚು ಮಾಡಿ, ಹಾಲು ಉತ್ಪಾದಕರ ಅಧ್ಯಕ್ಷರಿಗೆ ವಿದೇಶಿ ಪ್ರವಾಸ ಬಂಗಾರ ಮತ್ತಿತರ ಆಸೆಗಳನ್ನು ಹುಟ್ಟಿಸಿ ಅಡ್ಡದಾರಿಯಲ್ಲಿ ಗೆದ್ದು, ಬಾರದಂತೆ ಕಾನೂನು ರೂಪಿಸಬೇಕೆಂದು ಚುನಾವಣೆ ಅಧಿಕಾರಿಗಳನ್ನು ಹಾಗೂ ಆಡಳಿತ ಅಧಿಕಾರಿಗಳನ್ನು ಒತ್ತಾಯಿಸಿದರು.

ಒಕ್ಕೂಟದ ನಿರ್ದೇಶಕರ ಸ್ಥಾನಕ್ಕೆ ಸ್ಪರ್ದಿಸಬೇಕಾದರೆ ಕಡ್ಡಾಯವಾಗಿ ಆ ಕ್ಷೇತ್ರದಲ್ಲಿ 5 ವರ್ಷ ಹಾಲು ಉತ್ಪಾದಕರ ಸಂಘಕ್ಕೆ ಹಾಲು ವಿತರಣೆ ಮಾಡಿ ಸದಸ್ಯಸತ್ವ ಪಡೆದಿರಬೇಕು. ಚುನಾವಣೆಗೆ ಮಾತ್ರ ಸದಸ್ಯತ್ವ ಪಡೆದು ಚುನಾವಣೆಗೆ ನಿಲ್ಲುವ ನಿರ್ದೇಶಕರ ನಾಮ ಪತ್ರವನ್ನು ತಿರಸ್ಕಾರ ಮಾಡಿ ಚುನಾವಣೆ ಮುಗಿಯುವ ವರೆಗೂ ಹತ್ತಾರು ವರ್ಷಗಳಿಂದ ಒಕ್ಕೂಟದಲ್ಲಿರುವ ಅಧಿಕಾರಿಗಳನ್ನು ಬೇರೆ ಕಡೆಗೆ ವರ್ಗಾವಣೆ ಮಾಡಬೇಕೆಂದು ಚುನಾವಣೆ ಅಧಿಕಾರಿಗಳನ್ನು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ರೈತ ಸಂಘದ ರಾಜ್ಯ ಮುಖಂಡ ಬಂಗವಾರಿ ನಾಗರಾಜಗೌಡ, ಮಂಗಸಂದ್ರ ತಿಮ್ಮಣ್ಣ, ರಾಜೇಂದ್ರ ಗೌಡ ಮುಂತಾದರು ಇದ್ದರು.

Leave a Reply

Your email address will not be published. Required fields are marked *