ಕೋಟ್ಯಾಂತರ ರೂ. ಮೌಲ್ಯದ ಚಿನ್ನ ಕದ್ದ ಗೋಲ್ಡ್ ಲೋನ್ ಆಫೀಸರ್: ತಾನೂ ಕೆಲಸ ಮಾಡುವ ಬ್ಯಾಂಕಿನಿಂದಲೆ ಕೆಜಿಗಟ್ಟಲೆ ಚಿನ್ನ ಕದ್ದ ಆಫೀಸರ್

ದಾವಣಗೆರೆ ನಗರದ ಸಿ.ಎಸ್.ಬಿ. ಬ್ಯಾಂಕ್ ನಲ್ಲಿ ಸುಮಾರು 3 ಕೆಜಿಗೂ ಹೆಚ್ಚು ಬಂಗಾರ ಕಳ್ಳತನ ಆಗಿದ್ದ ಪ್ರಕರಣದಲ್ಲಿ ಅದೇ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದ ನೌಕರನನ್ನು ಕೆಟಿಜೆ ನಗರ ಪೊಲೀಸರು ಬಂಧಿಸಿದ್ದು, ಬಂಧಿತನಿಂದ ಸುಮಾರು 3 ಕೋಟಿ ಮೌಲ್ಯದ 3 ಕೆಜಿ 643 ಗ್ರಾಂ ಬಂಗಾರದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಯೆಸ್ ವ್ಯಕ್ತಿಯೊಬ್ಬ ತಾನು ಗೋಲ್ಡ್ ಲೋನ್ ಆಫೀಸರ್ ಆಗಿ ಕಾರ್ಯನಿರ್ವಹಿಸುತ್ತಿರುವ ಬ್ಯಾಂಕ್​ನಿಂದಲೇ ಕೆಜಿಗಟ್ಟಲೆ ಚಿನ್ನ ಕದ್ದು ಅದನ್ನು ಬೇರೆ ಬೇರೆ ಬ್ಯಾಂಕ್​ಗಳಲ್ಲಿ ಅಡವಿಟ್ಟ ವಿಚಿತ್ರ ಪ್ರಕರಣವೊಂದು ದಾವಣಗೆರೆಯಲ್ಲಿ ಬೆಳಕಿಗೆ ಬಂದಿದೆ.

ದಾವಣಗೆರೆಯ ದೇವರಾಜ್ ಅರಸ್ ಬಡಾವಣೆಯ ವಾಸಿಯಾಗಿರುವ ಸಂಜಯ್ ಟಿಪಿ ನಿಟ್ಟುವಳ್ಳಿಯಲ್ಲಿರುವ ಸಿಎಸ್​ಬಿ ಬ್ಯಾಂಕ್​​​ನಲ್ಲಿ ಗೋಲ್ಡ್ ಲೋನ್ ಆಫೀಸರ್ ಆಗಿ ಕೆಲಸ ಮಾಡುತ್ತಿದ್ದ.

ಒಂದು ದಿನ ಬ್ಯಾಂಕ್ ಆಡಿಟ್ ಮಾಡುವಾಗ ಬಂಗಾರ ಕಡಿಮೆ ಇರುವುದು ಬೆಳಕಿಗೆ ಬಂದಿದೆ. ಕೂಡಲೇ ಬ್ಯಾಂಕ್ ಮ್ಯಾನೇಜರ್, ಗ್ರಾಹಕರು ಅಡಮಾನ ಇಟ್ಟಿದ್ದ 1.86 ಕೋಟಿ ರೂಪಾಯಿ ಮೌಲ್ಯದ 3 ಕೆಜಿ 157 ಗ್ರಾಂ ಬಂಗಾರದ ಆಭರಣ ಕಳ್ಳತನವಾಗಿದೆ ಎಂದು ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿತ್ತು.

ದೂರು ದಾಖಲಿಸಿಕೊಂಡ ಪೊಲೀಸರು ಬ್ಯಾಂಕಿನಲ್ಲಿ ಗೋಲ್ಡ್ ಲೋನ್ ಆಫೀಸರ್ ಆಗಿ ಕೆಲಸ ಮಾಡುತಿದ್ದ ಸಂಜಯ್​​ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.

ಕಳವು ಮಾಡಿದ ಚಿನ್ನಾಭರಣಗಳನ್ನು ದಾವಣಗೆರೆ ನಗರದ ಫೆಡರಲ್ ಬ್ಯಾಂಕ್, ಫೆಡ್ ಬ್ಯಾಂಕ್ ಹಾಗೂ ಪಿ.ಬಿ.ರಸ್ತೆಯಲ್ಲಿರುವ ಮಣಪ್ಪುರಂ ಗೋಲ್ಡ್ ಲೋನ್ ಪೈನಾನ್ಸ್ ಶಾಖೆಯಲ್ಲಿ ತಂದೆ, ತಾಯಿ ಹಾಗೂ ಸ್ನೇಹಿತರ ಹೆಸರಿನಲ್ಲಿ ಅಡಮಾನ ಇಟ್ಟು ಸಾಲ ಪಡೆದಿರುವುದಾಗಿ ಒಪ್ಪಿಕೊಂಡಿದ್ದಾನೆ.

ಇದೀಗ, ಆತ ಅಡಮಾನ ಇಟ್ಟಿದ್ದ ಸುಮಾರು 3 ಕೋಟಿ ಮೌಲ್ಯದ 3 ಕೆಜಿ 643 ಗ್ರಾಂ ಬಂಗಾರದ ಆಭರಣಗಳನ್ನು ಕೆಟಿಜೆ ನಗರ ಪೊಲೀಸರು ವಶ ಪಡಿಸಿಕೊಂಡಿದ್ದಾರೆ.

ಆರೋಪಿಯು ವಿವಿಧ ಬ್ಯಾಂಕ್​​ಗಳಲ್ಲಿ ಗೋಲ್ಡ್ ಲೋನ್ ಆಫೀಸರ್ ಆಗಿ ಕೆಲಸ ಮಾಡಿದ್ದ. ಹಾಗಾಗಿ ಸಂಜಯ್ ಮೇಲೆ ಬ್ಯಾಂಕಿನವರಿಗೆ ಸಾಕಷ್ಟು ನಂಬಿಕೆ ಇತ್ತು. ಅದಕ್ಕಾಗಿ ಅವರು ಬ್ಯಾಂಕಿನಲ್ಲಿ ಬಂಗಾರದ ಆಭರಣಗಳನ್ನು ಚೆಕ್ ಮಾಡಲು ಅಕ್ಕಸಾಲಿಗರನ್ನು ಕೂಡ ಇಟ್ಟುಕೊಂಡಿರಲಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡ ಸಂಜಯ್, ಗ್ರಾಹಕರ ಹೆಸರಿನಲ್ಲಿ ನಕಲಿ ಬಂಗಾರದ ಆಭರಣಗಳನ್ನು ಅಡಮಾನ ಇಟ್ಟುಕೊಂಡು ಸಾಲ ಮಂಜೂರು ಕೂಡ ಮಾಡಿಕೊಂಡು ಬ್ಯಾಂಕಿನವರಿಗೆ ನಂಬಿಕೆಗೆ ದ್ರೋಹ ಮಾಡಿದ್ದಾನೆ. ಬಿಸಿಎ ಓದಿರುವ ಸಂಜಯ್ ಆನ್ ಲೈನ್ ಬೆಟ್ಟಿಂಗ್ ಚಾಳಿಗೆ ಬಿದಿದ್ದ. ಅಷ್ಟೇ ಅಲ್ಲದೇ ಪದೇ ಪದೇ ಗೋವಾಕ್ಕೆ ಹೋಗಿ ಕ್ಯಾಸಿನೋಗಳಲ್ಲಿ ಗೇಮ್ ಆಟವಾಡುತ್ತಿದ್ದ. ಸಂಜಯ್ ತಾನು ಐಷಾರಾಮಿ ಜೀವನ ನಡೆಸಬೇಕೆಂದು ಕನಸು ಕಂಡಿದ್ದ. ತಾನು ಕಳ್ಳತನ ಮಾಡಿದ ಹಣವನ್ನೆಲ್ಲಾ ಆನ್ ಲೈನ್ ಬೆಟ್ಟಿಂಗ್​ನಲ್ಲೇ ಕಳೆದಿದ್ದಾನೆ.

Leave a Reply

Your email address will not be published. Required fields are marked *