ಕೊಲಂಬೊದಲ್ಲಿ ನಡೆಯುತ್ತಿರುವ ಏಷ್ಯಾ ಕಪ್ ನ ಸೂಪರ್ ಫೋರ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ತಂಡದ ಹಿರಿಯ ಆಟಗಾರ ವಿರಾಟ್ ಕೋಹ್ಲಿ (122*) ಹಾಗೂ ಕನ್ನಡಿಗ ಕೆ.ಎಲ್, ರಾಹುಲ್ (111*) ರನ್ ಗಳಿಸುವ ಮೂಲಕ ಪಾಕ್ ಬೌಲಿಂಗ್ ಪಡೆಯನ್ನು ಪುಡಿಗಟ್ಟಿದರು.
ಟಾಸ್ ಗೆದ್ದ ಪಾಕಿಸ್ತಾನದ ನಾಯಕ ಬಾಬರ್ ಅಜಾಮ್ ಬೌಲಿಂಗ್ ಆಯ್ದುಕೊಂಡರು ಆದರೆ ಅವರ ಬೌಲಿಂಗ್ ವಿಭಾಗ ಅವರ ನಂಬಿಕೆಯನ್ನು ಉಳಿಸಿಕೊಳ್ಳಲಿಲ್ಲ, ಭಾರತದ ಆರಂಭಿಕ ಆಟಗಾರರಾದ ಶುಭಮನ್ ಗಿಲ್ (58) ಹಾಗೂ ನಾಯಕ ರೋಹಿತ್ ಶರ್ಮಾ (56) ಮೊದಲ ವಿಕೆಟ್ ಜೊತೆಯಾಟಕ್ಕೆ 121ರನ್ ಗಳಿಸಿ ಭದ್ರ ಬುನಾದಿಯನ್ನು ಹಾಕಿದರು.
ಪಾಕಿಸ್ತಾನದ ಬೌಲಿಂಗ್ ವಿಭಾಗದ ಶಾಬದ್ ಖಾನ್ ಮೊದಲ ವಿಕೆಟ್ ರೋಹಿತ್ ರೂಪದಲ್ಲಿ ಪಡೆದರೆ , ವೇಗಿ ಶಾಹೀನ್ ಅಫ್ರಿದಿ, ಶುಭ್ಮನ್ ಗಿಲ್ ನ ವಿಕೆಟ್ ಪಡೆದರು, ನಂತರ ಬಂದ ವಿರಾಟ್ ಕೊಹ್ಲಿ 122* ಒಂಭತ್ತು ಫೋರ್ ಹಾಗೂ ಮೂರು ಸಿಕ್ಸರ್ ಸಿಡಿಸಿ ಏಕದಿನ ಕ್ರಿಕೆಟ್ ನಲ್ಲಿ ತಮ್ಮ 47ನೇ ಶತಕ ಹಾಗೂ 13,000 ರನ್ ಗಳಿಸಿದ ವಿಶ್ವದ ಆರನೇ ಆಟಗಾರ ಎಂಬ ಖ್ಯಾತಿಗೆ ಪಾತ್ರರಾದರು.
ವಿರಾಟ್ ಕೊಹ್ಲಿಗೆ ಸಾಥ್ ನೀಡಿದ ಕನ್ನಡಿಗ, ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಕೆ. ಎಲ್. ರಾಹುಲ್ 111* ಹನ್ನೆರಡು ಫೋರ್ ಹಾಗೂ ಎರಡು ಸಿಕ್ಸರ್ ಸಿಡಿಸಿ ತಂಡದ ಮೊತ್ತವನ್ನು 350ರ ಗಡಿ ದಾಟಿಸಿದರು. ಗಾಯಗೊಂಡು ಸತತ ನಾಲ್ಕು ತಿಂಗಳು ಕ್ರಿಕೆಟ್ ನಿಂದ ದೂರವಿದ್ದು ನಂತರ ಮರಳಿ ಮೊದಲ ಪಂದ್ಯದಲ್ಲೇ ಶತಕ ಸಿಡಿಸಿದ್ದು ತಂಡಕ್ಕೆ ಆತ್ಮವಿಶ್ವಾಸ ಹೆಚ್ಚಿಸಿದೆ.
ಬೃಹತ್ ಮೊತ್ತ ಬೆನ್ನತ್ತಿದ್ದ ಪಾಕಿಸ್ತಾನದ ಬ್ಯಾಟ್ಸ್ಮನ್ ಗಳು ಯಾರೂ ಸಹ ಹೆಚ್ಚು ಹೊತ್ತು ಕ್ರೀಸ್ ನಲ್ಲಿ ಉಳಿಯಲಿಲ್ಲ, ಆರಂಭಿಕ ಆಟಗಾರರಾದ ಫಾಕರ್ ಜ್ಹಮಾನ್(27) ಹಾಗೂ ಇಮಾಮ್ ಉಲ್ ಹಕ್ (9), ಹಾಗೂ ನಾಯಕ ಬಾಬರ್ ಅಜಾಮ್ (10), ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಜ್ವಾನ್ (2)ರನ್ ಗಳಿಸುವ ಮೂಲಕ ಪಾಕ್ ಮೊದಲೇ ಸೋಲನ್ನು ಒಪ್ಪಿಕೊಂಡಿತು.
ಭಾರತದ ಪರವಾಗಿ ಸ್ಪಿನ್ನರ್ ಕುಲದೀಪ್ ಯಾದವ್ 5 ವಿಕೆಟ್ ಗೊಂಚಲು ಪಡೆದರೆ, ವೇಗಿಗಳಾದ ಬುಮ್ರಾ, ಶಾದೂ೯ಲ್ ಠಾಕೂರ್ ಹಾಗೂ ಹಾರ್ದಿಕ್ ಪಾಂಡ್ಯ ತಲಾ ಒಂದು ವಿಕೆಟ್ ಪಡೆದು ಪಾಕ್ ತಂಡವನ್ನು 128ಕ್ಕೆ ಆಲೌಟ್ ಮಾಡುವ ಮೂಲಕ 228 ರನ್ ಗಳ ಗೆಲುವು ತಂದುಕೊಟ್ಟರು.
ಹೆಚ್ಚು ರನ್ ಗಳ ಹೊಳೆ ಹರಿಸಿದ ಹಿನ್ನೆಲೆ ವಿರಾಟ್ ಕೊಹ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.