ಬಿಹಾರ ಮತ್ತು ಉತ್ತರ ಪ್ರದೇಶ ಮೂಲದ ಗ್ಯಾಂಗ್‌ಗಳು ಕೊರಿಯರ್ ಸೇವೆಯ ಮೂಲಕ ಹೈದರಾಬಾದ್‌ಗೆ ಗಾಂಜಾ ಚಾಕೊಲೇಟ್‌ಗಳನ್ನು ಪೂರೈಸುತ್ತಿತುವ ಜಾಲವನ್ನ ಪತ್ತೆ ಮಾಡಲಾಗಿದೆ.
ಈ ಗಾಂಜಾ ಚಾಕೊಲೇಟ್‌ಗಳನ್ನು ವಿದ್ಯಾರ್ಥಿಗಳು ಮತ್ತು ಇತರೆ ಗ್ರಾಹಕರಿಗೆ ಕಿರಣ ಅಂಗಡಿಗಳು ಮತ್ತು ಪಾನ್ ಶಾಪ್‌ಗಳಲ್ಲಿ ಮಾರಾಟ ಮಾಡಲಾಗುತ್ತಿರುವುದು ಬೆಳಕಿಗೆ ಬಂದಿದೆ.
ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದ ಪೊಲೀಸರು ಇಬ್ಬರು ಪೂರೈಕೆದಾರರನ್ನು ಬಂಧಿಸಿ 21 ಸಾವಿರ ಗಾಂಜಾ ಚಾಕಲೇಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಜೀಡಿಮೆಟ್ಲದಲ್ಲಿ ಬಿಹಾರ ಮೂಲದ ಸಿಬುಕುಮಾರ್ ಎಂಬಾತನನ್ನ ಬಂಧನ ಮಾಡಿದರೆ ಇನ್ನೊಬ್ಬ ಬಿಹಾರ ಮೂಲದ ಸೀತಾರಾಮಸಿಂಗ್ ಎಂಬಾತನನ್ನು ಪತಂಚೆರುವಿನಲ್ಲಿ ಬಂಧಿಸಲಾಗಿದೆ.