ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಟಿ -ಟ್ವೆಂಟಿ ಸರಣಿಯ ಅಂತಿಮ ಪಂದ್ಯವನ್ನು ಗೆಲ್ಲುವ ಮೂಲಕ ಸೂರ್ಯ ಕುಮಾರ್ ಯಾದವ್ ನೇತೃತ್ವದ ಭಾರತ ತಂಡ 4-1 ಅಂತರದಿಂದ ಗೆಲುವು ಸಾಧಿಸುವ ಮೂಲಕ ಆಸೀಸ್ ಗೆ ಆಘಾತ ನೀಡಿದೆ.
ಕೊನೆಯ ಪಂದ್ಯದಲ್ಲಿ ಜಯ ಸಾಧಿಸಿ ಸೋಲಿನ ಅಂತರವನ್ನು ಕಡಿಮೆ ಮಾಡುವ ಆಸೆ ಈಡೇರಲಿಲ್ಲ, ಆಸ್ಟ್ರೇಲಿಯಾದ ನಾಯಕ ಮ್ಯಾಥ್ಯೂ ವೆಡ್ ಐದು ಪಂದ್ಯಗಳಲ್ಲಿ ಟಾಸ್ ಗೆದ್ದರೂ ಮ್ಯಾಚ್ ಗೆದ್ದಿದ್ದು ಕೇವಲ ಒಂದು ಪಂದ್ಯದಲ್ಲಿ ಮಾತ್ರ.
ಆಸೀಸ್ ಅಂತಿಮ ಪಂದ್ಯದ ಟಾಸ್ ಗೆದ್ದರೂ ಬೌಲಿಂಗ್ ಆಯ್ದುಕೊಂಡ ಕಾರಣ ಭಾರತ ತಂಡ ಬ್ಯಾಟಿಂಗ್ ಆರಂಭಿಸಿತು, ಈ ಬಾರಿ ಆರಂಭಿಕ ಆಘಾತ ಎದುರಿಸಿತು ಯಶಸ್ವಿ ಜೈಸ್ವಾಲ್ (21) ಹಾಗೂ ಋತುರಾಜ್ ಗಾಯಕ್ವಾಡ್ (10) ರನ್ ಗಳಿಸಿ ಔಟಾದರು.
ನಂತರ ಬಂದ ಶ್ರೇಯಸ್ ಅಯ್ಯರ್ (53) ತಂಡದ ಮೊತ್ತವನ್ನು ಹೆಚ್ಚಿಸಲು ಮುಂದಾದರು, ಆದರೆ ನಾಯಕ ಸೂರ್ಯ ಕುಮಾರ್ ಯಾದವ್ (5) ಹಾಗೂ ಮಧ್ಯಮ ಕ್ರಮಾಂಕದ ಆಟಗಾರ ರಿಂಕು ಸಿಂಗ್ (6) ನಿರಾಸೆ ಮೂಡಿಸಿದರು, ಆದರೆ ಜಿತೇಶ್ ಶರ್ಮಾ (24) ಹಾಗೂ ಅಕ್ಷರ್ ಪಟೇಲ್ (31) ತಂಡದ ಮೊತ್ತವನ್ನು 160 ರನ್ ಗಡಿ ದಾಟಿಸಿದರು.
ಗುರಿ ಬೆನ್ನತ್ತಿದ್ದ ಆಸ್ಟ್ರೇಲಿಯಾ ತಂಡ ಆರಂಭಿಕ ಆಟಗಾರ ಫಿಲಿಪ್ಸ್ (4) ಮುಖೇಶ್ ಕುಮಾರ್ ಬೌಲಿಂಗ್ ನಲ್ಲಿ ಔಟಾದರು, ಆದರೆ ಹೆಡ್ (24) ಹಾಗೂ ಬೆನ್ (54) ರನ್ ಗಳಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು.
ನಂತರ ಬಂದ ಯಾವುದೇ ಆಟಗಾರರು ಹೆಚ್ಚು ಹೊತ್ತು ನಿಲ್ಲಲಿಲ್ಲ, ಹಾಡಿ೯ (6), ಟೀಮ್ ಡೇವಿಡ್ (17) , ಶಾಟ್೯(16) ಹಾಗೂ ನಾಯಕ ಮ್ಯಾಥ್ಯೂ ವೆಡ್ (22) ರನ್ ಗಳಿಸಿದ್ದರೂ ಅದು ಜಯ ಸಾಧಿಸಲು ಸಾಧ್ಯವಾಗಲಿಲ್ಲ.
ಭಾರತ ತಂಡದ ಪರವಾಗಿ ಮುಖೇಶ್ ಕುಮಾರ್ ಮೂರು, ಅಶ೯ದೀಪ್ ಸಿಂಗ್ ಹಾಗೂ ರವಿ ಬಿಷ್ಣೋಯಿ ಎರಡು ವಿಕೆಟ್ ಕಬಳಿಸಿದರೆ ಅಕ್ಷರ್ ಪಟೇಲ್ ಒಂದು ವಿಕೆಟ್ ಪಡೆದರು, ಅಲ್ ರೌಂಡರ್ ಆಟವಾಡಿದ ಅಕ್ಷರ್ ಪಟೇಲ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರೆ ಟೂರ್ನಿಯುದ್ದಕ್ಕೂ ಉತ್ತಮ ಬೌಲಿಂಗ್ ಪ್ರದರ್ಶನ ಮಾಡಿದ್ದ ರವಿ ಬಿಷ್ಣೋಯಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.