ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಲವು ಬದಲಾವಣೆ ನಡೆಯುತ್ತಿವೆ. ಸರ್ಕಾರದಿಂದ ಇಂದಿರಾ ಕ್ಯಾಂಟೀನ್ ಪುನರಾರಂಭಕ್ಕೆ ಸಿದ್ಧತೆಗಳು ಜೋರಾಗಿ ಸಾಗಿವೆ. ಇಂದಿರಾ ಕ್ಯಾಂಟೀನ್ ನಲ್ಲಿ ಊಟದ ಮೆನು ಬದಲಾವಣೆ ಮಾಡಿ ಅಂತಿಮ ಪಟ್ಟಿ ತಯಾರು ಮಾಡಿದೆ.
ಬೆಂಗಳೂರಿನಲ್ಲಿ ಇಂದಿರಾ ಕ್ಯಾಂಟೀನ್ ಗಳ ನಿರ್ವಹಣೆಯ ಹೊಣೆ ಹೊತ್ತಿರುವ ಬಿಬಿಎಂಪಿ ಇದಕ್ಕಾಗಿ ಒಂದು ಮೆನುವನ್ನು ಸಿದ್ಧಪಡಿಸಿದೆ.
ಇಂದಿರಾ ಕ್ಯಾಂಟೀನ್ ನ್ಯೂ ಮೆನು !!
• ಇಡ್ಲಿ ಚಟ್ನಿ/ ಸಾಂಬಾರ್
• ಬ್ರೆಡ್ & ಜಾಮ್
• ಮಂಗಳೂರು ಬನ್ಸ್
• ಬೇಕರಿ ಬನ್
• ಪಲಾವ್
• ಟೊಮ್ಯಾಟೊ ಬಾತ್
• ಖಾರಾ ಪೊಂಗಲ್
• ಬಿಸಿಬೇಳೆ ಬಾತ್
• ಅನ್ನ ಸಾಂಬಾರ್
• ರಾಗಿ ಮುದ್ದೆ ಸೊಪ್ಪುಸಾರು
• ಚಪಾತಿ & ಪಲ್ಯ
• ಟೀ ಕಾಫಿ ನೀಡಲು ಬಿಬಿಎಂಪಿ ನಿರ್ಧರಿಸಿದೆ. ಇದು ಪ್ರತಿ ದಿನ, ಪ್ರತಿ ವಾರಕೊಮ್ಮೆ ಬದಲಾವಣೆ ಆಗುತ್ತಿರುತ್ತದೆ.
ಸೋಮವಾರ :
ಬೆಳಗ್ಗೆ : ಇಡ್ಲಿ ಸಾಂಬಾರ್, ಪಲಾವ್,ಬ್ರೆಡ್ & ಜಾಮ್
ಮಧ್ಯಾಹ್ನ : ಅನ್ನ ಸಾಂಬಾರ್, ಕೀರ್, ರಾಗಿಮುದ್ದೆ ಸೊಪ್ಪು ಸಾರು + ಕೀರ್
ರಾತ್ರಿ : ಅನ್ನ ಸಾಂಬಾರ್, ರಾಗಿಮುದ್ದೆ ಸೊಪ್ಪು ಸಾರು
ಮಂಗಳವಾರ :
ಬೆಳಗ್ಗೆ : ಇಡ್ಲಿ ಚಟ್ನಿ, ಬಿಸಿ ಬೇಳೆ ಬಾತ್, ಮಂಗಳೂರು ಬನ್
ಮಧ್ಯಾಹ್ನ : ಅನ್ನ ಸಾಂಬಾರ್, ಮೊಸರು, ಚಪಾತಿ ಸಾಗು, ಕೀರ್
ರಾತ್ರಿ : ಅನ್ನ ಸಾಂಬಾರ್, ಚಪಾತಿ,ವೆಜ್ ಕರಿ
ಬುಧವಾರ :
ಬೆಳಗ್ಗೆ : ಇಡ್ಲಿ ಸಾಂಬಾರ್, ಖಾರಾ ಬಾತ್, ಬೇಕರಿ ಬನ್
ಮಧ್ಯಾಹ್ನ : ಅನ್ನ ಸಾಂಬಾರ್, ಕೀರ್, ರಾಗಿಮುದ್ದೆ, ಸೊಪ್ಪು ಸಾರು
ರಾತ್ರಿ : ಅನ್ನ ಸಾಂಬಾರ್, ರಾಗಿಮುದ್ದೆ + ಸೊಪ್ಪು ಸಾರು
ಗುರುವಾರ :
ಬೆಳಗ್ಗೆ : ಇಡ್ಲಿ ಸಾಂಬಾರ್, ಪಲಾವ್, ಬ್ರೆಡ್ & ಜಾಮ್
ಮಧ್ಯಾಹ್ನ : ಅನ್ನ ಸಾಂಬಾರ್, ಮೊಸರು, ಚಪಾತಿ ಸಾಗು + ಕೀರ್
ರಾತ್ರಿ : ಅನ್ನ ಸಾಂಬಾರ್ + ಮೊಸರು, ಚಪಾತಿ + ವೆಜ್ ಕರಿ
ಶುಕ್ರವಾರ :
ಬೆಳಗ್ಗೆ : ಇಡ್ಲಿ ಸಾಂಬಾರ್, ಬಿಸಿಬೇಳೆ ಬಾತ್ / ಮಂಗಳೂರು ಬನ್ಸ್
ಮಧ್ಯಾಹ್ನ : ಅನ್ನ ಸಾಂಬಾರ್, ಮೊಸರಾನ್ನ, ರಾಗಿಮುದ್ದೆ ಸೊಪ್ಪು ಸಾರು
ರಾತ್ರಿ : ಅನ್ನ ಸಾಂಬಾರ್, ರಾಗಿಮುದ್ದೆ ಸೊಪ್ಪು ಸಾರು
ಶನಿವಾರ :
ಬೆಳಗ್ಗೆ : ಇಡ್ಲಿ ಸಾಂಬಾರ್, ಪೊಂಗಲ್, ಬೇಕರಿ ಬನ್
ಮಧ್ಯಾಹ್ನ : ಅನ್ನ ಸಾಂಬಾರ್ + ಕೀರ್, ಚಪಾತಿ ಸಾಗು + ಕೀರ್
ರಾತ್ರಿ : ಅನ್ನ ಸಾಂಬಾರ್ + ಮೊಸರು, ಚಪಾತಿ + ವೆಜ್ ಕರಿ
ಭಾನುವಾರ :
ಬೆಳಗ್ಗೆ : ಇಡ್ಲಿ ಚಟ್ನಿ, ಖಾರಾ ಬಾತ್, ಬ್ರೆಡ್ & ಜಾಮ್
ಮಧ್ಯಾಹ್ನ : ಅನ್ನ ಸಾಂಬಾರ್, ಮೊಸರಾನ್ನ, ರಾಗಿಮುದ್ದೆ ಸೊಪ್ಪು ಸಾರು
ರಾತ್ರಿ : ಅನ್ನ ಸಾಂಬಾರ್, ರಾಗಿಮುದ್ದೆ ಸೊಪ್ಪು ಸಾರು