ಕೊನೆಗೂ ಟಿ.ವೆಂಕಟರಮಣಯ್ಯ ಕೈ ಸೇರಿದ ‘ಬಿ’ ಫಾರಂ: ಜ್ಯೋತಿಷಿ ಸಲಹೆಯಂತೆ ಮುಂದಿನವಾರ ನಾಮಪತ್ರ ಸಲ್ಲಿಕೆ

 

2023ರ ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆ, ಈಗಾಗಲೇ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಪಡೆದ ಕೆಲ ಅಭ್ಯರ್ಥಿಗಳಿಗೆ ಪಕ್ಷದ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ‘ಬಿ’ ಫಾರಂ ಕೊಡುವ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.

ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಸ್ವಪಕ್ಷದಿಂದಲೇ ಟಿಕೆಟ್ ಅಭ್ಯರ್ಥಿ ಹಾಗೂ ಹಾಲಿ ಶಾಸಕ ಟಿ.ವೆಂಕಟರಮಣಯ್ಯ ನವರಿಗೆ ಟಿಕೆಟ್ ತಪ್ಪಿಸಲು ಹಲವು ಹೋರಾಟ, ವಿರೋಧ ವ್ಯಕ್ತವಾಗಿತ್ತು. ಈ ಎಲ್ಲಾ ವಿರೋಧಗಳ ನಡುವೆ ‘ಕೈ’ ಹೈಕಮಾಂಡ್ ಈಗಾಗಲೇ ಎರಡು ಬಾರಿ ಕ್ಷೇತ್ರದಲ್ಲಿ ಗೆದ್ದಿದ್ದ ಟಿ.ವೆಂಕಟರಮಣಯ್ಯನವರಿಗೆ ಮತ್ತೆ ಟಿಕೆಟ್ ಘೋಷಣೆ ಮಾಡಿದರು.

ಇಂದು ಪಕ್ಷದ ಕಚೇರಿಯಲ್ಲಿ ಟಿಕೆಟ್ ಅಭ್ಯರ್ಥಿ ಟಿ.ವೆಂಕಟರಮಣಯ್ಯ ನವರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ‌‌.ಶಿ ಅವರು ‘ಬಿ’ ಫಾರಂ ನೀಡಿ ಶುಭ ಹಾರೈಸಿದರು.

ಈ ಹಿನ್ನೆಲೆ ಕ್ಷೇತ್ರದಾದ್ಯಂತ ಈಗಾಗಲೇ ಅಬ್ಬರದ ಚುನಾವಣಾ ಪ್ರಚಾರ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇನ್ನೇನು ನಾಮಪತ್ರ ಸಲ್ಲಿಸುವುದೊಂದೆ ಬಾಕಿ‌ ಇದ್ದು, ಅದು ಕೂಡ ಅತೀ ಶೀಘ್ರದಲ್ಲೇ ಉಮೇದುವಾರಿಕೆ ಸಲ್ಲಿಸಲು ಸಜ್ಜಾಗಿದ್ದಾರೆ.

Leave a Reply

Your email address will not be published. Required fields are marked *