ದೊಡ್ಡಬಳ್ಳಾಪುರ ತಾಲ್ಲೂಕಿನ ಕೊನಘಟ್ಟದಲ್ಲಿ 20ಕ್ಕೂ ಹೆಚ್ಚು ದೇವಾಲಯಗಳಿವೆ. ದೊಡ್ಡಬಳ್ಳಾಪುರ ತಾಲ್ಲೂಕಿನ ದೇವಾಲಯಗಳ ತವರೂರು ಎಂದು ಕೊನಘಟ್ಟ ಹೆಸರುವಾಸಿಯಾಗಿದೆ. ಇಲ್ಲಿ ನೆಡೆಯುವ ಕರಗ ಮಹೋತ್ಸವವಂತೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲೇ ಪ್ರಖ್ಯಾತಿಯಾಗಿದೆ. ಸಪ್ಪಲಮ್ಮ, ಮಾರಮ್ಮ, ದೊಡ್ಡಮ್ಮ, ಪಳೇಕಮ್ಮ, ಹೀಗೆ ಇನ್ನೂ ಹಲವಾರು ಶಕ್ತಿ ದೇವಾಲಯಗಳಿದ್ದು, ಈಗ ಇಲ್ಲಿರುವ ಶಕ್ತಿ ದೇವಾಲಯಗಳ ಪಟ್ಟಿಗೆ ಕೊನಘಟ್ಟದಲ್ಲಿ ಚೌಡೇಶ್ವರಿ ಅಮ್ಮನವರ ದೇವಾಲಯ ಸಹ ಸೇರ್ಪಡೆಯಾಗಿದೆ.
ಇತ್ತೀಚಿನ ದಿನಗಳಲ್ಲಿ ಚೌಡೇಶ್ವರಿ ಅಮ್ಮನವರ ಸನ್ನಿಧಿಗೆ ಭಕ್ತಾದಿಗಳ ದಂಡು ರಾಜ್ಯದ ಹಲವಾರು ಕಡೆಗಳಿಂದ ಹರಿದು ಬರುತ್ತಿದೆ. ಪ್ರತಿ ಮಂಗಳವಾರ ಮತ್ತು ಶುಕ್ರವಾರ ಅಮ್ಮನವರು ಹೂ ಪ್ರಸಾದ ನೀಡುತ್ತಾರೆ. ಅಮವಾಸ್ಯೆ ಮತ್ತು ಹುಣ್ಣಿಮೆಯ ದಿನಗಳಲ್ಲಿ ತೀರ್ಥ ಸ್ನಾನವಿರುತ್ತದೆ. ಹಾಗೂ ಅಮ್ಮನ ನಂಬಿದರೆ ಸಕಲವೂ ಸುಲಲಿತವಾಗಿ ಭಕ್ತರ ಮನೆಯ ಕಷ್ಟಗಳು ತಂತಾನೆ ಕರಗಿ ಹೋಗುತ್ತಿರುವುದಾಗಿ ತಾಯಿ ಚೌಡೇಶ್ವರಿಯನ್ನ ನಂಬಿರುವ ಭಕ್ತರು ಹೇಳುತ್ತಿದ್ದಾರೆ.
ತಾಯಿ ಚೌಡೇಶ್ವರಿ ಮಾತೆಯ ಆಶೀರ್ವಾದ ಎಲ್ಲರಿಗೂ ಸಿಗುತ್ತಿದ್ದರೂ ಪ್ರಸ್ತುತ ಮಾತೆಗೆ ಒಂದು ನಿಗದಿತ ಗುಡಿ ಇಲ್ಲದಿರುವುದು ನೋವಿನ ವಿಚಾರವಾಗಿದೆಯೆಂದು ಭಕ್ತರು ತಮ್ಮ ನೋವನ್ನ ತೋಡಿಕೊಂಡಿದ್ದು ಮಾತೆಗೆ ಒಂದು ಗುಡಿಯನ್ನ ಕಟ್ಟಬೇಕೆಂದು ಭಕ್ತರು ಬಯಸಿದ್ದು ನಾಡಿನ ಜನರ ತನು ಮನ ಧನವನ್ನು ನಿರೀಕ್ಷಿಸಿದ್ದು ಪ್ರಸ್ತುತ ಅರ್ಚಕರ ಸ್ವಗೃಹದಲ್ಲಿ ದೇವಿಯನ್ನ ಪೂಜಿಸಲಾಗುತ್ತಿದೆ. ಆದಷ್ಟು ಬೇಗ ಸ್ಥಳೀಯ ಆಡಳಿತ ತಾಯಿಗೆ ಒಂದು ಸ್ಥಳವನ್ನ ಗುರುತಿಸಿ ಗುಡಿ ಕಟ್ಟುವ ಕೆಲಸಕ್ಕೆ ಮುಂದಾಗಬೇಕೆಂದು ಭಕ್ತರು ಕೇಳಿಕೊಳುತ್ತಿದ್ದಾರೆ.
ದ್ವೇಷ ಭಾಷಣ ತಡೆ ಮಸೂದೆಯ ಬಗ್ಗೆ ಬಿಜೆಪಿಗೆ ಮಾತ್ರ ಏಕೆ ಆತಂಕ? ದ್ವೇಷ ಭಾಷಣ ತಡೆ ಮಸೂದೆ ಕೆಲವರನ್ನು ಗುರಿಯಾಗಿಸಿಕೊಂಡು…
ದಲಿತ ಯುವಕನ ಮದುವೆಯಾಗಿದ್ದಕ್ಕೆ ತಂದೆಯೇ 7 ತಿಂಗಳ ಗರ್ಭಿಣಿ ಮಗಳನ್ನು ಭೀಕರವಾಗಿ ಹತ್ಯೆ ಮಾಡಿದ ಘಟನೆ ಸಂಬಂಧ ಎಸ್ಪಿ ಗುಂಜನ್…
ದೆಹಲಿ ವಾಯು ಮಾಲಿನ್ಯ...... ನಮ್ಮ ನಗರ ಯಾವಾಗ ?...... ಎಚ್ಚರಿಕೆಯ ಗಂಟೆ ನಿರಂತರವಾಗಿ ಹೊಡೆದುಕೊಳ್ಳುತ್ತಿರುವಾಗ ನಾವು ನಿದ್ದೆ ಮಾಡುವುದಾದರೂ ಹೇಗೆ…
ಡಾ. ಬಿ.ಆರ್ ಅಂಬೇಡ್ಕರ್ ಸ್ನೇಹದ ಬಳಗದವರಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ನಗರದ 5ನೇ ವಾರ್ಡ್ ಸಿದ್ದೇನಾಯಕನಹಳ್ಳಿಯಲ್ಲಿ ನಿರ್ಮಿಸಿರುವ ಬಾಬಾಸಾಹೇಬ್…
ತಾಲೂಕಿನ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆ ಭಾನುವಾರ ಸೂಸುತ್ರವಾಗಿ ಪೂರ್ಣಗೊಂಡಿದೆ. ರಾಜ್ಯ ಚುನಾವಣಾ ಆಯೋಗ, ಜಿಲ್ಲಾಡಳಿತ, ತಾಲೂಕು ಆಡಳಿತ, ಬಾಶೆಟ್ಟಿಹಳ್ಳಿ…
ಒಂಟಿ ಮನೆ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಇಬ್ಬರು ವಿದೇಶಿ ಪ್ರಜೆಗಳನ್ನು ಊರಿನ ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಇಂದು…