ಕೊನಘಟ್ಟ ದೇವಾಲುಗಳ ಪಟ್ಟಿಗೆ ಮತ್ತೊಂದು ದೇವಾಲಯ ಸೇರ್ಪಡೆ

ದೊಡ್ಡಬಳ್ಳಾಪುರ ತಾಲ್ಲೂಕಿನ ಕೊನಘಟ್ಟದಲ್ಲಿ 20ಕ್ಕೂ ಹೆಚ್ಚು ದೇವಾಲಯಗಳಿವೆ. ದೊಡ್ಡಬಳ್ಳಾಪುರ ತಾಲ್ಲೂಕಿನ ದೇವಾಲಯಗಳ ತವರೂರು ಎಂದು ಕೊನಘಟ್ಟ ಹೆಸರುವಾಸಿಯಾಗಿದೆ. ಇಲ್ಲಿ ನೆಡೆಯುವ ಕರಗ ಮಹೋತ್ಸವವಂತೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲೇ ಪ್ರಖ್ಯಾತಿಯಾಗಿದೆ. ಸಪ್ಪಲಮ್ಮ, ಮಾರಮ್ಮ, ದೊಡ್ಡಮ್ಮ, ಪಳೇಕಮ್ಮ, ಹೀಗೆ ಇನ್ನೂ ಹಲವಾರು ಶಕ್ತಿ ದೇವಾಲಯಗಳಿದ್ದು, ಈಗ ಇಲ್ಲಿರುವ ಶಕ್ತಿ ದೇವಾಲಯಗಳ ಪಟ್ಟಿಗೆ ಕೊನಘಟ್ಟದಲ್ಲಿ ಚೌಡೇಶ್ವರಿ ಅಮ್ಮನವರ ದೇವಾಲಯ ಸಹ ಸೇರ್ಪಡೆಯಾಗಿದೆ.

ಇತ್ತೀಚಿನ ದಿನಗಳಲ್ಲಿ ಚೌಡೇಶ್ವರಿ ಅಮ್ಮನವರ ಸನ್ನಿಧಿಗೆ ಭಕ್ತಾದಿಗಳ ದಂಡು ರಾಜ್ಯದ ಹಲವಾರು ಕಡೆಗಳಿಂದ ಹರಿದು ಬರುತ್ತಿದೆ. ಪ್ರತಿ ಮಂಗಳವಾರ ಮತ್ತು ಶುಕ್ರವಾರ ಅಮ್ಮನವರು ಹೂ ಪ್ರಸಾದ‌ ನೀಡುತ್ತಾರೆ. ಅಮವಾಸ್ಯೆ ಮತ್ತು ಹುಣ್ಣಿಮೆಯ ದಿನಗಳಲ್ಲಿ ತೀರ್ಥ ಸ್ನಾನವಿರುತ್ತದೆ. ಹಾಗೂ ಅಮ್ಮನ ನಂಬಿದರೆ ಸಕಲವೂ ಸುಲಲಿತವಾಗಿ ಭಕ್ತರ ಮನೆಯ ಕಷ್ಟಗಳು ತಂತಾನೆ ಕರಗಿ ಹೋಗುತ್ತಿರುವುದಾಗಿ ತಾಯಿ ಚೌಡೇಶ್ವರಿಯನ್ನ ನಂಬಿರುವ ಭಕ್ತರು ಹೇಳುತ್ತಿದ್ದಾರೆ.

ತಾಯಿ ಚೌಡೇಶ್ವರಿ ಮಾತೆಯ ಆಶೀರ್ವಾದ ಎಲ್ಲರಿಗೂ ಸಿಗುತ್ತಿದ್ದರೂ ಪ್ರಸ್ತುತ ಮಾತೆಗೆ ಒಂದು ನಿಗದಿತ ಗುಡಿ ಇಲ್ಲದಿರುವುದು ನೋವಿನ ವಿಚಾರವಾಗಿದೆಯೆಂದು ಭಕ್ತರು ತಮ್ಮ ನೋವನ್ನ ತೋಡಿಕೊಂಡಿದ್ದು ಮಾತೆಗೆ ಒಂದು ಗುಡಿಯನ್ನ ಕಟ್ಟಬೇಕೆಂದು ಭಕ್ತರು ಬಯಸಿದ್ದು ನಾಡಿನ ಜನರ ತನು ಮನ ಧನವನ್ನು ನಿರೀಕ್ಷಿಸಿದ್ದು ಪ್ರಸ್ತುತ ಅರ್ಚಕರ ಸ್ವಗೃಹದಲ್ಲಿ ದೇವಿಯನ್ನ ಪೂಜಿಸಲಾಗುತ್ತಿದೆ. ಆದಷ್ಟು ಬೇಗ ಸ್ಥಳೀಯ ಆಡಳಿತ ತಾಯಿಗೆ ಒಂದು ಸ್ಥಳವನ್ನ ಗುರುತಿಸಿ ಗುಡಿ ಕಟ್ಟುವ ಕೆಲಸಕ್ಕೆ ಮುಂದಾಗಬೇಕೆಂದು ಭಕ್ತರು ಕೇಳಿಕೊಳುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!