ಕೊನಘಟ್ಟ ಗ್ರಾಮದಲ್ಲಿ ಎತ್ತಿನಹೊಳೆ ಕಾಮಗಾರಿ: ಬೋರ್ ಬ್ಲಾಸ್ಟಿಂಗ್ ಸಾಧನದಿಂದ ಬಂಡೆ ಪುಡಿ: ಮನೆಗಳಿಗೆ ಹಾನಿಯಾಗುವ ಭಯದಲ್ಲಿ ಗ್ರಾಮಸ್ಥರು

ದೊಡ್ಡಬಳ್ಳಾಪುರದ ಕೊನಘಟ್ಟ ಗ್ರಾಮದಲ್ಲಿ ಎತ್ತಿನಹೊಳೆ ಕಾಮಗಾರಿ ನಡೆಯುತ್ತಿದ್ದು, ಬಂಡೆ ಪುಡಿ ಮಾಡಲು ಬೋರ್ ಬ್ಲಾಸ್ಟಿಂಗ್ ಸಾಧನ ಬಳಕೆ ಮಾಡಲಾಗುತ್ತಿದೆ. ಸ್ಥಳೀಯರು ಬೋರ್ ಬ್ಲಾಸ್ಟಿಂಗ್ ಮಾಡುವುದನ್ನು ತಡೆದಿದ್ದಾರೆ…

ಬೋರ್ ಬ್ಲಾಸ್ಟಿಂಗ್ ಮಾಡುವ ಸ್ಥಳದಿಂದ ಸುಮಾರು ಅರ್ಧ ಕಿಲೋ‌ಮೀಟರ್ ದೂರದಲ್ಲೇ ಮನೆಗಳು ಇವೆ. ಮನೆಗಳಲ್ಲಿ ಜನ ವಾಸ ಮಾಡುತ್ತಿದ್ದಾರೆ. ಒಂದು ವೇಳೆ ಬೋರ್ ಬ್ಲಾಸ್ಟಿಂಗ್ ಆದರೆ ಅರ್ಧ ಕಿಲೋ ಮೀಟರ್ ದೂರದಲ್ಲಿರುವ ಮನೆಗಳು ಬಿರುಕು ಬಿಡುತ್ತವೆ. ಕುಸಿದು ಬೀಳುವ ಸಂಭವ ಹೆಚ್ಚಿದೆ ಎಂದು ಊರಿನ ಗ್ರಾಮಸ್ಥರು ತಿಳಿಸಿದ್ದಾರೆ…

ಬೋರ್ ಬ್ಲಾಸ್ಟಿಂಗ್ ನಿಂದ ಎತ್ತಿನಹೊಳೆ ಕಾಲುವೆಗೆ ಬಂಡೆ ಪುಡಿ ಮಾಡಲಾಗುತ್ತಿದೆ. ಒಂದು ಬಾರಿಗೆ 10 ಬಾಂಬ್ ಇಟ್ಟು ಬ್ಲಾಸ್ಟ್ ಮಾಡೋದಕ್ಕೆ ರೆಡಿ ಮಾಡಿದ್ದಾರೆ. ಇದರಿಂದ ಹೆಚ್ಚು ಶಬ್ಧ ಬರುತ್ತೆ ಮತ್ತು ಸುತ್ತು ಇರುವ ಮನೆಗಳು ಅಲುಗಾಡುತ್ತೆ. ಆದರೆ ಸಿಬ್ಬಂದಿಗೆ ಹೇಳಿದರು ಕೇಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎತ್ತಿನಹೊಳೆ ಕಾಮಗಾರಿ ನಡೀತಿರೋ ಜಾಗದಲ್ಲಿ ಬಂಡೆ ಇದೆ ಬಂಡೆ ಹೊಡೆಯುವ ಕಾರಣ ತುಂಬ ದೊಡ್ಡ ಬಾಂಬುಗಳನ್ನು ಈಟ್ಟು ಸಿಡಿಸುತ್ತಿದ್ದಾರೆ. ಈ ಕಾರಣ ಅಕ್ಕ ಪಕ್ಕದಲ್ಲಿರುವ ಮನೆಗಳಿಗೆ ತೊಂದರೆಯಾಗುತ್ತಿದ್ದು, ಈ ಜಾಗದಲ್ಲಿ ಯಾವೊಬ್ಬ ಇಂಜಿನಿಯರ್ ಇಂಚಾರ್ಜ್ ಇರುವುದಿಲ್ಲ. ಕೇಳಿದರೆ ನಮಗೆ ಇದಕ್ಕೆ ಸಂಬಂಧವಿಲ್ಲ ಎಂದು ಉತ್ತರ ಕೊಡುತ್ತಿದ್ದಾರೆ. ದಯವಿಟ್ಟು ಇದರ ಬಗ್ಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ…

Leave a Reply

Your email address will not be published. Required fields are marked *

error: Content is protected !!