ಕೊನಘಟ್ಟ ಕೆರೆ ಒಡಲು ಸೇರುತ್ತಿರುವ ಫಾಕ್ಸ್ ಕಾನ್ ಕಂಪನಿ ಕಲುಷಿತ ನೀರು: ಸ್ಥಳೀಯರಲ್ಲಿ ಮನೆ ಮಾಡಿದ ಆತಂಕ: ಸ್ಥಳಕ್ಕೆ ಶಾಸಕ ಧೀರಜ್ ಮುನಿರಾಜ್ ಭೇಟಿ, ಪರಿಶೀಲನೆ: ಫಾಕ್ಸ್ ಕಾನ್ ಕಂಪನಿಯ ಸಿಬ್ಬಂದಿಗೆ ತರಾಟೆ

ಫಾಕ್ಸ್ ಕಾನ್ ಕಂಪನಿಯ ಕಲುಷಿತ ನೀರು ದೊಡ್ಡಬಳ್ಳಾಪುರ ತಾಲೂಕಿನ ಕೊನಘಟ್ಟ ಕೆರೆಗಳ ಒಡಲು ಸೇರುತ್ತಿದ್ದು, ಇದರಿಂದ ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ.

ಫಾಕ್ಸ್ ಕಾನ್ ಕಂಪನಿ ಬಳಿ ಮಲ ಮಿಶ್ರಿತ, ಇತರೆ ಕಲುಷಿತ ನೀರಿಗಾಗಿಯೇ‌ ಒಂದು  ಕುಂಟೆಯನ್ನು ನಿರ್ಮಾಣ ಮಾಡಲಾಗಿದೆ. ಇದೀಗ ಆ‌ ಕುಂಟೆಯ ಕಟ್ಟೆಯನ್ನು ಹೊಡೆದು ರಾಜಕಾಲುವೆಗೆ ಹರಿಬಿಡಲಾಗಿದೆ. ಈ ಕಲುಷಿತ ನೀರು ನೇರವಾಗಿ ಕೊನಘಟ್ಟ ಗ್ರಾಮದ ಕೆರೆಗೆ ಹರಿದು ಬರುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದರು.

ಸ್ಥಳಕ್ಕೆ ಶಾಸಕ ಧೀರಜ್ ಮುನಿರಾಜು, ಜಿಲ್ಲಾಧಿಕಾರಿ ಎ.ಬಿ.ಬಸವರಾಜು, ಜಿಲ್ಲಾ‌ ಪಂಚಾಯಿತಿ ಸಿಇಒ ಅನುರಾಧಾ, ಡಿವೈಎಸ್ ಪಿ ರವಿ.ಪಿ, ತಹಶೀಲ್ದಾರ್ ವಿಭಾ ವಿದ್ಯಾ ರಾಠೋಡ್, ಗ್ರಾಮಾಂತರ ಠಾಣಾ ಇನ್ಸ್ ಪೆಕ್ಟರ್ ಸಾಧಿಕ್ ಪಾಷಾ, ತಾ.ಪಂ ಇಓ ಮುನಿರಾಜು, ಗ್ರಾ.ಪಂ ಅಧ್ಯಕ್ಷೆ ಜ್ಯೋತಿ, ಪಿಡಿಓ ರಷ್ಮಿ, ನೂರಾರು ಸಾರ್ವಜನಿಕರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಸದ್ಯ ಹೊಡೆದಿರುವ ಕುಂಟೆಯ ಕಟ್ಟೆಯನ್ನು ಮುಚ್ಚುವಂತೆ ಸ್ಥಳೀಯರು ಪಟ್ಟು ಹಿಡಿದಿದ್ದರು. ಇಲ್ಲಿನ ತ್ಯಾಜ್ಯ ನೀರು ರಾಜಕಾಲುವೆ ಸೇರಿದಂತೆ ಯಾವುದೇ ಮೂಲಗಳಿಂದ ಹೊರಬಾರದಂತೆ ಸಿಮೆಂಟ್ ವಾಲ್ ನಿರ್ಮಿಸುವಂತೆ ಆಗ್ರಹ ಮಾಡಿದರು.

ಆದರೆ, ಶಾಸಕ ಧೀರಜ್ ಮುನಿರಾಜ್, ಅಧಿಕಾರಿಗಳ ಆಗ್ರಹಕ್ಕೆ ಫಾಕ್ಸ್ ಕಾನ್ ಸಿಬ್ಬಂದಿ ಕ್ಯಾರೆ ಎನ್ನದಿರುವುದಕ್ಕೆ ಸ್ಥಳೀಯರು, ಹಾಗೂ ಶಾಸಕರ ಇನ್ನಷ್ಟು ಆಕ್ರೋಶಕ್ಕೆ  ಕಾರಣವಾಗಿತ್ತು.

ಬೆಳಗ್ಗೆ 10 ಗಂಟೆಯಿಂದಲೇ ಜನಪ್ರತಿನಿಧಿ, ಅಧಿಕಾರಿಗಳು. ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದರು. ಆದರೆ, ಫಾಕ್ಸ್ ಕಾನ್ ಸಂಬಂಧಿತ ಅಧಿಕಾರಿಗಳು ಸ್ಥಳಕ್ಕೆ ಬರುವುದಕ್ಕೆ ಮೀನಾಮೇಷ ಎಣಿಸುತ್ತಿದ್ದರು. ಒಬ್ಬರ ಮೇಲೆ ಮತ್ತೊಬ್ಬರು ಹೇಳಿಕೊಂಡು ಕಾಲಹರಣ ಮಾಡುತ್ತಿದ್ದರು.

ಹರಿಯುತ್ತಿರುವ ಕಲುಷಿತ ನೀರು ನಿಲ್ಲುವವರೆಗೂ ಸ್ಥಳದಿಂದ ಹೊರಡುವುದಿಲ್ಲ ಎಂದು ಶಾಸಕ ಧೀರಜ್ ಮುನಿರಾಜ್ ಅವರು ಪಟ್ಟುಹಿಡಿದಿದ್ದರು.

ದೊಡ್ಡಬಳ್ಳಾಪುರ‌ದ ಬಾಶೆಟ್ಟಿಹಳ್ಳಿಯಲ್ಲಿ ಏಷ್ಯಾದ ಎರಡನೇ ಅತಿದೊಡ್ಡ ಕೈಗಾರಿಕಾ ಪ್ರದೇಶವಿದೆ. ಇಲ್ಲಿನ ನೂರಾರು ಕಾರ್ಖಾನೆಗಳ‌ ರಾಸಾಯನಿಕ ಮಿಶ್ರಿತ ಕಲುಷಿತ ನೀರನ್ನ ನೇರವಾಗಿ ಅರ್ಕಾವತಿ ನದಿ ಪಾತ್ರದ ಕೆರೆಗಳಿಗೆ ಬಿಡಲಾಗಿತ್ತಿದೆ. ಇದರಿಂದ ಅರ್ಕಾವತಿ ನದಿ ಪಾತ್ರದ ಕೆರೆಗಳು ಸಂಪೂರ್ಣವಾಗಿ ಕಲುಷಿತಗೊಂಡ ಜನ ಜಾನುವಾರು‌ ಕುಡಿಯಲು ಯೋಗ್ಯವಾಗದ ಸ್ಥಿತಿಗೆ ಬಂದು ತಲುಪಿದೆ‌. ಈ ಕೆರೆಗಳನ್ನು ಶುದ್ಧೀಕರಿಸುವಂತೆ, ಕಾರ್ಖಾನೆಗಳ‌ ರಾಸಾಯನಿಕ ಮಿಶ್ರಿತ ಕಲುಷಿತ ನೀರನ್ನು ಕೆರೆಗಳಿಗೆ ಬಿಡುವವರ ವಿರುದ್ಧ ಕ್ರಮ ಜರುಗಿಸುವಂತೆ ಸ್ಥಳೀಯರು ಅನೇಕ ಹೋರಾಟಗಳು ಮಾಡಿಕೊಂಡು ಬರುತ್ತಿದ್ದಾರೆ. ಈ ಸಮಸ್ಯೆ ಜೊತೆಗೆ ಇದೀಗ ದೊಡ್ಡಬಳ್ಳಾಪುರ ತಾಲೂಕಿನ ಹೊರವಲಯದ ಕೊನಘಟ್ಟ ಸಮೀಪದಲ್ಲಿನ ಫಾಕ್ಸ್ ಕಾನ್ ಕಂಪನಿ ಮಲ ಮಿಶ್ರಿತ, ಕಲುಷಿತ ನೀರನ್ನು ಸ್ವಚ್ಛವಾಗಿರುವ ಕೊನಘಟ್ಟ ಕೆರೆಗೆ ಹರಿಬಿಟ್ಟಿರುವುದು ಜನರಲ್ಲಿ ಆತಂಕ ಸೃಷ್ಟಿಸಿದೆ. ಪ್ರಾರಂಭದಲ್ಲಿ ಇದಕ್ಕೆ ಕಡಿವಾಣ ಹಾಕಬೇಕು ಎಂದು ಸ್ಥಳೀಯರೊಬ್ಬರು ಹೇಳಿದ್ದಾರೆ.

ಸ್ವಚ್ಛವಾಗಿರುವ ಜಲ ಮೂಲಗಳು ಕಾರ್ಖಾನೆಗಳ ಕಲುಷಿತ ನೀರಿನಿಂದ ಕಲುಷಿತಗೊಂಡರೆ ಭವಿಷ್ಯದಲ್ಲಿ ದೊಡ್ಡಬಳ್ಳಾಪುರ ಜನರ ಜೀವನ ಅದೋಗತಿಗೆ ಬಂದು ತಲುಪುತ್ತದೆ. ತಾಲೂಕಿನ ಜನರು ಅನಾರೋಗ್ಯದಿಂದ ಬಳಲಿ ಸಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಮುಂದಿನ‌ ಪೀಳಿಗೆ ಸಾಕಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

Ramesh Babu

Journalist

Recent Posts

ಸರ್ಕಾರಿ ಶಾಲಾ ಮಕ್ಕಳಿಗೆ ಟ್ರ್ಯಾಕ್‌ಸೂಟ್, ಶೂ ವಿತರಣೆ

ದೊಡ್ಡಬಳ್ಳಾಪುರ: ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ ಅಗತ್ಯ ಮೂಲಸೌಕರ್ಯ ಹಾಗೂ ಪ್ರೋತ್ಸಾಹ ದೊರೆಯುವಂತೆ ಸಮಾಜದ…

12 hours ago

ಕಸ ವಿಂಗಡಣೆ ಯಂತ್ರಕ್ಕೆ ಸಿಲುಕಿ ಮಹಿಳೆ ಸಾವು

ದೊಡ್ಡಬಳ್ಳಾಪುರ: ಕಸ ವಿಂಗಡಣೆ ಮಾಡುವ ಯಂತ್ರಕ್ಕೆ ಸಿಲುಕಿ ಮಹಿಳೆಯೊಬ್ಬರು ಮೃತಪಟ್ಟಿರುವ ದಾರುಣ ಘಟನೆ ತಾಲೂಕಿನ ಎಂಎಸ್‌ಜಿಪಿ ಕಸ ಸಂಸ್ಕರಣಾ ಘಟಕದಲ್ಲಿ…

17 hours ago

ಅಕ್ಟೋಬರ್ 2….. ಶಾಸ್ತ್ರಿ ಮತ್ತು ಗಾಂಧಿ……..,

ದೇಶದ ಪ್ರಧಾನಿಯೊಬ್ಬರು ಹೀಗೂ ಬದುಕಬಹುದು ಎಂದು ತೋರಿಸಿ ಮಾದರಿಯಾದ ವ್ಯಕ್ತಿ ಲಾಲ್ ಬಹದ್ದೂರ್ ಶಾಸ್ತ್ರಿ. ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.......…

20 hours ago

ಬೆಂಬಲ ಬೆಲೆಯಡಿ ಸೂರ್ಯಕಾಂತಿ, ಹೆಸರುಕಾಳು, ಸೋಯಾಬೀನ್‌ಗೆ ಖರೀದಿಗೆ ಕೇಂದ್ರದ ಅನುಮೋದನೆ

2026-27ನೇ ಸಾಲಿನ ಮುಂಗಾರು ಹಂಗಾಮಿನ ಬೆಂಬಲ ಬೆಲೆ ಯೋಜನೆಯಡಿ ಸೂರ್ಯಕಾಂತಿ, ಹೆಸರುಕಾಳು ಹಾಗೂ ಸೋಯಾಬೀನ್ ಉತ್ಪನ್ನಗಳನ್ನು ಕನಿಷ್ಠ ಬೆಂಬಲ ಬೆಲೆ…

1 day ago

ಸಿಎಂಗೆ ರೈತಪರ ಕಾಳಜಿ ಇಲ್ಲ ಶಾಸಕ ಧೀರಜ್ ಮುನಿರಾಜು ಆರೋಪ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಬಡವರು ಹಾಗೂ ರೈತರ ಬಗ್ಗೆ ಕಾಳಜಿ ಇಲ್ಲ. ಹೂಡಿಕೆದಾರರು ಹಾಗೂ ಬಂಡವಾಳಶಾಹಿಗಳ ಹಿತಾಸಕ್ತಿಯ ಬಗ್ಗೆಯೇ…

1 day ago

ಎಸ್ ಐ ಆರ್ ಪ್ರಕ್ರಿಯೆಯಲ್ಲಿ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡುವ ಅಧಿಕಾರಿಗಳ ವಿರುದ್ಧ ಕ್ರಮ – ಡಿಸಿ ಅನುರಾಧ

ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸುವ ಬಿಎಲ್‌ಒ ಅಥವಾ…

1 day ago