2023ರ ಮುಂಗಾರು ಹಂಗಾಮಿನಲ್ಲಿ ಪ್ರಕೃತಿ ವಿಕೋಪದಿಂದ ಮಳೆ ಕೊರತೆಯಾಗಿದ್ದರಿಂದ ಬೆಳೆ ನಷ್ಟವಾದ ರೈತರಿಗೆ ಪರಿಹಾರ ನೀಡುವ ದೃಷ್ಟಿಯಿಂದ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಅನುಷ್ಠಾನಗೊಳಿಸಲಾಗಿದೆ.
ರಾಗಿ ಮತ್ತು ಮುಸುಕಿನ ಜೋಳದ ಬೆಳೆಗೆ ಪ್ರಧಾನ ಮಂತ್ರಿ ಪಸಲ್ ಬಿಮಾ ಯೋಜನೆಯಲ್ಲಿ ವಿಮೆ ಮಾಡಿಸುವಂತೆ ಕೃಷಿ ಇಲಾಖೆ ಸಾಕಷ್ಟು ಪ್ರಚಾರವನ್ನು ಜೂನ್ ತಿಂಗಳಿಂದಲೇ ಕೈಗೊಂಡಿತ್ತು. ಮಳೆ ಹಿನ್ನಡೆಯಾದ ಕಾರಣದಿಂದ ಎರಡು ಬಾರಿ ವಿಮಾ ನೋಂದಣಿಗೆ ದಿನಾಂಕವನ್ನು ವಿಸ್ತರಣೆ ಮಾಡಲಾಗಿತ್ತು.
ಈ ಹಿನ್ನೆಲೆ ತಾಲೂಕಿನಲ್ಲಿ ಈ ವರ್ಷ ರೈತರಿಂದ ಒಟ್ಟಾರೆ ಇಲ್ಲಿಯವರೆಗೆ 14,755 ಅರ್ಜಿಗಳು ಸಲ್ಲಿಕೆಯಾಗಿವೆ. ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಧಾನ ಮಂತ್ರಿ ಫಸಲ್ ಬೀಮಾ ಬೆಳೆ ವಿಮೆ ನೋಂದಣಿಗೆ ಒಂದು ಹೆಕ್ಟೇರ್‌ಗೆ 3,860ಗಳನ್ನು ರೈತರು ಪಾವತಿಸಬೇಕು. ಶೇ 100ರಷ್ಟು ಬೆಳೆ ನಷ್ಟವಾದರೆ ಒಂದು ಹೆಕ್ಟೇರ್‌ಗೆ 42,500 ಪರಿಹಾರ ರೈತರಿಗೆ ದೊರೆಯಲಿದೆ. ಇದಲ್ಲದೆ ಮಳೆ ಹೆಚ್ಚಾಗಿ, ಕೊಯ್ಲಿನ ಸಮಯ ಸೇರಿದಂತೆ ವಿವಿಧ ಹಂತಗಳಲ್ಲೂ ಬೆಳೆ ನಷ್ಟವಾದರೆ ಶೇಕಡವಾರು ಲೆಕ್ಕದಲ್ಲೂ ಬೆಳೆ ಪರಿಹಾರವನ್ನು ರೈತರು ಪಡೆಯಬಹುದಾಗಿದೆ.