ಕೈಕೊಟ್ಟ ಮಳೆ: ಕಂಗಾಲದ ಜನ: ಮಳೆಗಾಗಿ ಗ್ರಾಮ ದೇವತೆಗೆ ರಕ್ತ ಕೊಟ್ಟ ಗ್ರಾಮಸ್ಥರು

ಮಳೆ ಆಗಮನಕ್ಕಾಗಿ ಚಾಕುಗಳಿಂದ ದೇಹವನ್ನ ಕೊಯ್ದುಕೊಂಡು ರಕ್ತ ಅರ್ಪಣೆ ಮಾಡುವ ಮೂಲಕ ವಿಚಿತ್ರವಾಗಿ ದೇವರಲ್ಲಿ ಪ್ರಾರ್ಥನೆ‌ ಮಾಡಿರುವ ಘಟನೆ‌ ಚಿಕ್ಕಬಳ್ಳಾಪುರ ಜಿಲ್ಲೆಯ ಚೇಳೂರು ತಾಲ್ಲೂಕು ಹೊಸಹುಡ್ಯ ಗ್ರಾಮದಲ್ಲಿ ನಡೆದಿದೆ.

ಗ್ರಾಮದಲ್ಲಿ ಗ್ರಾಮ ದೇವತೆ ಚೌಡೇಶ್ವರಿ ದೇವರ ಉತ್ಸವ ಮಾಡಿ ಗ್ರಾಮದ ತೊಗಟ ವೀರ ಕ್ಷತ್ರೀಯರು ಚಾಕುಗಳಿಂದ ದೇಹದ ಎದೆಯ ಭಾಗಗಳನ್ನು ಕೊಯ್ದುಕೊಂಡು ರಕ್ತ ಅರ್ಪಣೆ ಮಾಡಿ ಮಳೆಗಾಗಿ ಪ್ರಾರ್ಥಿಸಿದರು.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಳೆ ಇಲ್ಲದೆ ಬರಗಾಲದ ವಾತಾವರಣ ನಿರ್ಮಾಣವಾಗಿದೆ. ಮಳೆಯನ್ನ ನೆಚ್ಚಿ ಸಾಲ ಮಾಡಿ ಬೆಳೆ ಬೆಳೆದಿದ್ದ ರೈತರು. ಈಗ ಫಸಲು ಬರುವ ಸಮಯದಲ್ಲಿ ಮಳೆ ಕೈಕೊಟ್ಟಿರುವ ಹಿನ್ನೆಲೆ ಬೆಳೆ ಬಾಡಿ ಹೋಗಿ ರೈತರನ್ನ ಸಂಕಷ್ಟಕ್ಕೆ ದೂಡಿದೆ. ಇದರಿಂದ ರೈತರು ಕಂಗಾಲಾಗಿ ಬರಗಾಲದ ವಾತಾವರಣದಿಂದ ಮುಕ್ತಿ ನೀಡಿ ಮಳೆ ಬರುವಂತೆ ಈ ವಿಚಿತ್ರ ಆಚರಣೆ ಮಾಡಿದ್ದಾರೆ.

Leave a Reply

Your email address will not be published. Required fields are marked *