ಕೇರಳದ ಮಾಜಿ ಸಿಎಂ ಉಮ್ಮಾನ್ ಚಾಂಡಿ (79) ವಿಧಿವಶ

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಕೇರಳದ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಕಾಂಗ್ರೆಸ್​ ನಾಯಕ ಉಮ್ಮನ್​ ಚಾಂಡಿ (79), ಇಂದು ಮುಂಜಾನೆ ವಿಧಿವಶರಾಗಿದ್ದಾರೆ.

ಕೇರಳ ಕಾಂಗ್ರೆಸ್ ಅಧ್ಯಕ್ಷ ಕೆ. ಸುಧಾಕರನ್ ಅವರು ಟ್ವಿಟರ್ ನಲ್ಲಿ ಚಾಂಡಿ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿ, ಒಬ್ಬ ಧೀಮಂತ ನಾಯಕರೊಬ್ಬರನ್ನು ಕಾಂಗ್ರೆಸ್ ಇಂದು ಕಳೆದುಕೊಂಡಿದೆ, ‘ಪ್ರೀತಿಯ’ ಶಕ್ತಿಯಿಂದ ಜಗತ್ತನ್ನು ಗೆದ್ದ ರಾಜನ ಕಥೆಯು ಅದರ ಕಟುವಾದ ಅಂತ್ಯವನ್ನು ಕಂಡುಕೊಳ್ಳುತ್ತದೆ.

ಇಂದು, ನಾನು ದಂತಕಥೆಯಾದ ಉಮ್ಮಾನ್ ಚಾಂಡಿ ಅವರ ನಷ್ಟದಿಂದ ತೀವ್ರ ದುಃಖಿತನಾಗಿದ್ದೇನೆ. ಅವರ ಪರಂಪರೆಯು ನಮ್ಮ ಆತ್ಮಗಳಲ್ಲಿ ಶಾಶ್ವತವಾಗಿ ಪ್ರತಿಧ್ವನಿಸುತ್ತದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

Leave a Reply

Your email address will not be published. Required fields are marked *