ಕೇಂದ್ರ ಜಲ ಶಕ್ತಿ ಅಯೋಗ ತಂಡದಿಂದ ಜಲ ಸಂರಕ್ಷಣೆ ಕಾಮಗಾರಿಗಳ ಪರಿಶೀಲನೆ

ಅಕ್ಟೋಬರ್ 17 ರಿಂದ 19 ವರೆಗೂ ಜಿಲ್ಲೆಯಲ್ಲಿ ಕೇಂದ್ರ ಜಲಶಕ್ತಿ ಆಯೋಗದ ನೋಡಲ್ ಅಧಿಕಾರಿ  ರಾಮ್ ದಯಳ್ ಮೀನಾ ಮತ್ತು  ಫರ್ವೇಜ್ ಅಹಮ್ಮದ್ ನೇತೃತ್ವದ ಅಧಿಕಾರಿಗಳ ತಂಡವು ಈಶಾನ್ಯ ಮಾನ್ಸೂನ್ ಅವಧಿಯಲ್ಲಿನ ಜಲ ಸಂರಕ್ಷಣೆ ಕಾಮಗಾರಿಗಳು ಪರಿವೀಕ್ಷಣೆ ಮಾಡಲಿದ್ದು, ಇಂದು ಜಿಲ್ಲಾ ಪಂಚಾಯತಿ ಕಟ್ಟಡದ ಜಲ ಶಕ್ತಿ ಕೇಂದ್ರಕ್ಕೆ ಭೇಟಿ ನೀಡಿ ಪರಿವೀಕ್ಷಣೆ ಮಾಡಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಅನುರಾಧ ಕೆ.ಎನ್ ರವರು ಮಹಾತ್ಮ ಗಾಂಧಿ ನರೇಗಾ ಯೋಜನೆಯ  ನೀರು ಸಂಗ್ರಹಣೆ  ಕಾಮಗಾರಿಗಳು ಬಗ್ಗೆ ಪಿಪಿಟಿ ಮೂಲಕ ವಿವರಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬೆಳಿಗ್ಗೆ ಕೇಂದ್ರ ಶಕ್ತಿ ಆಯೋಗ ತಂಡ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ  ಡಾ. ಕೆ. ಎನ್. ಅನುರಾಧ  ಮತ್ತು ಉಪ ಕಾರ್ಯದರ್ಶಿ ಟಿ. ಕೆ ರಮೇಶ್ ರವರು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿದ ಬಳಿಕ ಜಲ ಸಂಪನ್ಮೂಲಗಳ ಸಂಗ್ರಹಣೆಯ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ದೇವನಹಳ್ಳಿ ತಾಲ್ಲೂಕಿನ ಐಬಾಸಾಪುರ ಗ್ರಾಮ ಪಂಚಾಯಿತಿ, ಕೊಣಗಿನಬೆಲೆ ರಸ್ತೆ ಬದಿ ನೆಡುತೋಪು. ಬೀಡಿಗಾನಹಳ್ಳಿಯ ರೇಷ್ಮೆ ವಿಸ್ತರಣೆ ಮತ್ತು ಪ್ಯಾಕ್ಟರಿ, ಮಂಡಿಬೆಲೆ ಗ್ರಾಮ ಪಂಚಾಯಿತಿಯ ನರೇಗಾ ಯೋಜನೆಯಡಿ ಅಭಿವೃದ್ಧಿ ಪಡಿಸಿದ ಕೃಷಿಹೊಂಡ, ನಾಲಾ ಅಭಿವೃದ್ಧಿ ಕಾಮಗಾರಿ, ಮಂಡಿ ಬೆಲೆಯ ವೈಯಕ್ತಿಕ ಅರಣ್ಯೀಕರಣ, ತೋಟಗಾರಿಕೆ ಇಲಾಖೆಯ ಗಡ್ಡದನಾಗೆನಹಳ್ಳಿಯ ಕೃಷಿ ಹೊಂಡ, ಬೂದಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಣ್ಣ ನೀರಾವರಿ ಇಲಾಖೆಯ ಚೆಕ್‌ ಡ್ಯಾಂ ಅಭಿವೃದ್ಧಿ ಕಾಮಗಾರಿಗಳನ್ನು ದೇವನಹಳ್ಳಿಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಾಥ ಗೌಡರ  ನೇತೃತ್ವದಲ್ಲಿ ಕೇಂದ್ರ ತಂಡದಿಂದ ಕಾಮಗಾರಿಗಳ ವೀಕ್ಷಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಅರಣ್ಯ ಇಲಾಖೆ  ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷವರ್ಧನ, ರೇಷ್ಮೆ ಇಲಾಖೆ ಉಪನಿರ್ದೇಶಕ ಪ್ರಭಾಕರ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಗುಣವಂತ, ಸಣ್ಣ ನೀರಾವರಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮಂಜುನಾಥ ಸಹಾಯಕ ನಿರ್ದೇಶಕರು, ಕುಡಿಯುವ ನೀರು ನೈರ್ಮಲ್ಯ ಇಲಾಖೆಯ ಅಧಿಕಾರಿಗಳು, ವಲಯ ಅರಣ್ಯಾಧಿಕಾರಿ ಗೀತಾ ಚೌವ್ಹಾಣ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ರೈತರು ಉಪಸ್ಥಿತಿದ್ದರು.

Leave a Reply

Your email address will not be published. Required fields are marked *