ಕೆ.ಎಸ್.ಡಿ.ಎಲ್ ಇಂದು ಸಾಬೂನು, ಡಿಟರ್ಜೆಂಟ್ಸ್, ಸೌಂದರ್ಯವರ್ಧಕಗಳು, ಅಗರಬತ್ತಿ, ಧೂಪ ಸೇರಿದಂತೆ ಒಟ್ಟು 50 ಬಗೆಯ ಉತ್ಪನ್ನಗಳನ್ನು ತಯಾರಿಸುತ್ತಿದೆ. ಇದಕ್ಕೆ ಇಂದು ಹೊಸದಾಗಿ 21 ಉತ್ಪನ್ನಗಳು ಸೇರ್ಪಡೆಯಾಗುತ್ತಿದ್ದು, ಅವುಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಿಡುಗಡೆ ಮಾಡಿದರು.
ಇಂದು ಬಿಡುಗಡೆಗೊಂಡ ಹೊಸ ಉತ್ಪನ್ನಗಳು ಇಂತಿವೆ:
ಪ್ರೀಮಿಯಂ ಶ್ರೇಣಿಯ 10 ಬಗೆಯ ಸಾಬೂನು, 3 ತರಹದ ಶವರ್ ಜೆಲ್, 6 ಬಗೆಯ ಸೋಪ್ ಕಿಟ್ ಮತ್ತು ಒಂದು ಬಗೆಯ ಹ್ಯಾಂಡ್ ವಾಶ್.
ಇವುಗಳ ಮಾರಾಟದ ಮೂಲಕ ಸಂಸ್ಥೆಯು ಇನ್ನೂ 1,000 ಕೋಟಿ ರೂ. ಮೌಲ್ಯದ ಹೆಚ್ಚಿನ ವಹಿವಾಟನ್ನು ನಿರೀಕ್ಷಿಸುತ್ತಿದೆ.
ಇದಕ್ಕೆ ಪೂರಕವಾಗಿ ಸಂಸ್ಥೆಯು ಅಖಿಲ ಭಾರತ ಮಟ್ಟದ ಮಾರುಕಟ್ಟೆಯನ್ನು ಹೊಂದಲು ಮತ್ತು ವಿದೇಶಗಳಲ್ಲೂ ಸಂಸ್ಥೆಯ ಉತ್ಪನ್ನಗಳು ಸಿಗುವಂತೆ ಮಾಡಲು ರಚನಾತ್ಮಕ ಕ್ರಮಗಳನ್ನು ಸರಕಾರ ಕೈಗೊಂಡಿದೆ.
ಬಿಡುಗಡೆಯಾಗಿರುವ ಹೊಸ ತರಹದ ಪ್ರೀಮಿಯಂ ಸಾಬೂನುಗಳು:
Mysore Sandal Wave Termaric,
Wave Lime,
Wave Deo,
Milk Saffron,
Almond Soap,
Neem Soap,
Aloe Soap,
Jasmine Cream,
Shikakayi Soap
ಸ್ನಾನಕ್ಕೆ ಬಳಸುವ ಶವರ್-ಜೆಲ್ ಗಳು:
Mysore Sandal Shower Gel,
Gold Shower Gel
Millenium Shower Gel
ಇವೆಲ್ಲವೂ ಇಂದಿನ ಬಗೆಬಗೆಯ ಗ್ರಾಹಕರ ಅಭಿರುಚಿಗಳನ್ನು ಗಮನದಲ್ಲಿ ಇಟ್ಟುಕೊಂಡು ಹೊರತಂದಿರುವ ಉತ್ಪನ್ನಗಳೇ ಆಗಿವೆ.
ಕೆಎಸ್‌ಡಿಎಲ್ ಸಂಸ್ಥೆಯ ವಾರ್ಷಿಕ ವಹಿವಾಟು ಸದ್ಯಕ್ಕೆ 1,400 ಕೋಟಿ ರೂ.ಗಳ ಆಸುಪಾಸಿನಲ್ಲಿದೆ. ಇದನ್ನು ಮುಂದಿನ ಎರಡು ವರ್ಷಗಳಲ್ಲಿ 3,000 ಕೋಟಿ ರೂ.ಗಳ ಮಟ್ಟಕ್ಕೆ ಕೊಂಡೊಯ್ಯುವುದು ಗುರಿಯಾಗಿದೆ.
ಈ ನಿಟ್ಟಿನಲ್ಲಿ, ಸಂಸ್ಥೆಯು ಶಿವಮೊಗ್ಗದಲ್ಲಿ ಹೊಂದಿರುವ ಘಟಕದ ಆವರಣದಲ್ಲಿ ಆಕ್ವಾ ಮಿನರಲ್ ವಾಟರ್ ಘಟಕವನ್ನು ಆರಂಭಿಸುವ ತಯಾರಿ ನಡೆಯುತ್ತಿದೆ. ಜೊತೆಗೆ Transparent Bathing Soap & Perfume Composition ತಯಾರಿಕೆಗೆ ಸಿದ್ಧತೆಗಳು ನಡೆಯುತ್ತಿವೆ.
"ಕುಮಾರಸ್ವಾಮಿ ಯಾರು? Who is kumaraswmay. ಡಿ.ಕೆ. ಶಿವಕುಮಾರ್ ಸಿಎಂ ಆಗಿರುವುದನ್ನು ಒಪ್ಪದಿರುವುದಕ್ಕೆ ಅವರು ಯಾರು? ಅವರಿಗೂ ಇದಕ್ಕೂ ಏನು…
ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್ತಿಗೆ ದ್ವೈವಾರ್ಷಿಕ ಚುನಾವಣೆ-2026ರ ಸಂಬಂಧ ಅಕ್ಟೋಬರ್ 23 ರಂದು ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ…
ದೊಡ್ಡಬಳ್ಳಾಪುರ: ಅದ್ದೂರಿ ಆಚರಣೆಗಳಿಗೆ ಸೀಮಿತವಾಗದೆ, ಸಮಾಜಮುಖಿ ಕಾರ್ಯಗಳ ಮೂಲಕ ಹುಟ್ಟುಹಬ್ಬ ಆಚರಿಸುವುದು ಇತರರಿಗೂ ಮಾದರಿಯಾಗಲಿದೆ ಎಂದು ಕನ್ನಡ ಪಕ್ಷದ ರಾಜ್ಯ…
ಸರ್ಕಾರಿ ಸೇವೆಗಳನ್ನು ಜನಸಾಮಾನ್ಯರಿಗೆ ಸುಲಭವಾಗಿ, ತ್ವರಿತವಾಗಿ ತಲುಪಿಸಬೇಕೆಂಬ ಉದ್ದೇಶದಿಂದ ಜಾರಿಗೆ ತಂದಿರುವ ಡಿಜಿಟಲ್ ವ್ಯವಸ್ಥೆಗಳೇ ಇದೀಗ ಸಾರ್ವಜನಿಕರಿಗೆ ತಲೆನೋವಾಗಿ ಪರಿಣಮಿಸಿವೆ.…
ದೊಡ್ಡಬಳ್ಳಾಪುರ: ಅಕ್ರಮವಾಗಿ ಗಾಂಜಾ ಸಂಗ್ರಹಿಸಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪದ ಮೇರೆಗೆ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿ,…
ಲಂಚ ಪ್ರಕರಣ: ಮ್ಯೂನಿಷನ್ಸ್ ಇಂಡಿಯಾ ಕಾರ್ಯನಿರ್ವಾಹಕ ನಿರ್ದೇಶಕ ಸಿಬಿಐ ಬಲೆಗೆಲಂಚ ಸ್ವೀಕಾರ ಆರೋಪಕ್ಕೆ ಸಂಬಂಧಿಸಿದಂತೆ ಮ್ಯೂನಿಷನ್ಸ್ ಇಂಡಿಯಾ ಲಿಮಿಟೆಡ್ (MIL)…