ಇಂದಿನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2ರಲ್ಲಿ ಅಂತಾರಾಷ್ಟ್ರೀಯ ವಿಮಾನಗಳ ಕಾರ್ಯಾಚರಣೆ ಆರಂಭ ಹಿನ್ನೆಲೆ, ಇನ್ನೇನು ಕೆಲವೇ ಕ್ಷಣಗಳಲ್ಲಿ ಮೊದಲ ವಿದೇಶಿ ವಿಮಾನ ಲ್ಯಾಂಡ್ ಆಗಲಿದೆ.
ಇಂದು ಬೆಳಗ್ಗೆ 10:15ಕ್ಕೆ ಟರ್ಮಿನಲ್ 2ರಲ್ಲಿ ಲ್ಯಾಂಡ್ ಆಗಲಿರುವ ಸೌದಿಯಾ ಏರ್ ಲೈನ್ಸ್ ವಿಮಾನ. ವಿಮಾನದಲ್ಲಿ ಪ್ರಯಾಣಿಸಿ ಬಂದವರನ್ನು ಸ್ವಾಗತಿಸಲು ಜಾನಾಪದ ಕಲಾತಂಡಗಳು ಸಜ್ಜಾಗಿವೆ.
ಇನ್ನು ಟರ್ಮಿನಲ್ 2ನಲ್ಲಿ ಅತ್ಯಾಧುನಿಕ ವಿಶ್ವ ದರ್ಜೆಯ ಸೌಲಭ್ಯಗಳು ಲಭ್ಯವಿದೆ. ವಿವಿಧ ಜಾತಿಯ ಸಸಿಗಳು ಮತ್ತು ಬಿದಿರಿನಿಂದ ಅಲಂಕರಿಸಿರುವ ಟರ್ಮಿನಲ್ 2. ಜೊತೆಗೆ ವಾರ್ಷಿಕವಾಗಿ 25 ಮಿಲಿಯನ್ ಪ್ರಯಾಣಿಕರನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿದೆ.