
ಮೀನು ಹಿಡಿಯಲು ಹೋಗಿ ನೀರಿಗೆ ಬಿದ್ದು ಯುವಕ ಸಾವನ್ನಪ್ಪಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಗುಂಜೂರು ಸಮೀಪವಿರುವ ತಿಪ್ಪಗಾನಹಳ್ಳಿ ಕೆರೆಯಲ್ಲಿ ನಡೆದಿದೆ…..
ಮೃತ ದುರ್ದೈವಿಯನ್ನು ತೂಬಗೆರೆ ಹೋಬಳಿಯ ಕಾರ್ನಾಳ ಗ್ರಾಮದ ಮೃತ್ಯುಂಜಯ ಮಗನಾದ ಮುರುಳಿ(25), ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ…..

ಇಂದು ಮಧ್ಯಾಹ್ನ ಮೀನು ಹಿಡಿಯಲು ಸ್ನೇಹಿತರೊಟ್ಟಿಗೆ ತಿಪ್ಪಗಾನಹಳ್ಳಿ ಕೆರೆಗೆ ಹೋಗಿದ್ದು, ಈ ವೇಳೆ ಕಾಲು ಜಾರಿ ಕೆರೆಗೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.
ಮೃತ ಮುರುಳಿ ಡ್ರೈವರ್ ಕೆಲಸ ಮಾಡಿಕೊಂಡಿದ್ದ. ಶವವನ್ನು ದೊಡ್ಡಬಳ್ಳಾಪುರದ ಶವಗಾರಕ್ಕೆ ರವಾನಿಸಲಾಗಿದೆ…

ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ…..