ಕೆರೆಯಲ್ಲಿ ಮಣ್ಣು ತೆಗೆಯುತ್ತಿರುವ ವಿಚಾರ: ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಂಡನಿಂದ ಕಿರುಕುಳ ಆರೋಪ

ಕೆರೆಯಲ್ಲಿ ಮಣ್ಣು ತೆಗೆಯುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷರ ಪತಿ ವೈಯಕ್ತಿಕ ಕಿರುಕುಳ ಕೊಡುತ್ತಿದ್ದಾರೆ, ಬಲಾಢ್ಯರು ಕೆರೆಯ ಮಣ್ಣು ತೆಗೆಯುವಾಗ ಯಾವುದೇ ಕ್ರಮ ತೆಗೆದುಕೊಳ್ಳದ ಅವರು ಹಿಂದುಳಿದ ವರ್ಗಕ್ಕೆ ಸೇರಿದ ವ್ಯಕ್ತಿಯನ್ನ ಟಾರ್ಗೆಟ್ ಮಾಡುತ್ತಿದ್ದಾರೆಂದು ಭಾರ್ಗವ್ ರವರು ಅಧ್ಯಕ್ಷರ ವಿರುದ್ಧ ಆರೋಪವನ್ನ ಮಾಡಿದ್ದಾರೆ.

ದೊಡ್ಡತುಮಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೈರಸಂದ್ರಪಾಳ್ಯ ಗ್ರಾಮದ ಸರ್ವೆ ನಂಬರ್ 106ರಲ್ಲಿರುವ ಸರ್ಕಾರಿ ಕೆರೆಯಲ್ಲಿ ಹೂಳು ತುಂಬಿದೆ, ಅಂತರ್ಜಲ ವೃದ್ಧಿಗಾಗಿ ಗ್ರಾಮಸ್ಥರು ಕೆರೆಯಲ್ಲಿನ ಹೂಳು ತೆಗೆದು ತಮ್ಮ ತೋಟ ಮತ್ತು ಹೊಲಗಳಿಗೆ ಹಾಕುತ್ತಿದ್ದಾರೆ, ಬೈರಸಂದ್ರಪಾಳ್ಯದ ಗ್ರಾಮಸ್ಥರು ಗೌಡಹಳ್ಳಿಯ ಗ್ರಾಮದ ಭಾರ್ಗವ್  ಎಂಬುವರ ಜೆಸಿಬಿ ಮತ್ತು ಟ್ರಾಕ್ಟರ್ ಬಾಡಿಗೆ ಪಡೆದುಕೊಂಡು ಹೊಳು ತೆಗೆಯುತ್ತಿದ್ದಾರೆ. ಕೆರೆಯಲ್ಲಿನ ಹೂಳು ತೆಗೆಯುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ದೊಡ್ಡತುಮಕೂರು ಗ್ರಾಮ ಪಂಚಾಯಿತಿ ಅಧಿಕಾರಿಗಳು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ, ಈ ಕಾರಣಕ್ಕಾಗಿಯೇ ಪಂಚಾಯಿತಿ ಕಾರ್ಯಾಲಯದ ಮುಂದೆ ಜಮಾಯಿಸಿದ ಗ್ರಾಮಸ್ಥರು ಪಂಚಾಯಿತಿ ಅಧ್ಯಕ್ಷರ ಪತಿ ಮತ್ತು ಅಧಿಕಾರಿಗಳ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ್ದಾರೆ

ಇದೇ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಜೆಸಿಬಿ ಮಾಲೀಕರಾದ ಭಾರ್ಗವ್, ಜೀವನೋಪಯಕ್ಕಾಗಿ ನಾನು ಜೆಸಿಬಿ ಮತ್ತು ಟ್ರ್ಯಾಕ್ಟರ್ ಗಳನ್ನು ಬಾಡಿಗೆ ನೀಡುವೆ, ಕೆರೆಯಲ್ಲಿನ ಹೂಳು ತೆಗೆಯುವ ಕಾರಣಕ್ಕಾಗಿ ಬೈರಸಂದ್ರಪಾಳ್ಯದ ಗ್ರಾಮಸ್ಥರು ಜೆಸಿಬಿ ಮತ್ತು ಟ್ರ್ಯಾಕ್ಟರ್ ಬಾಡಿಗೆ ತೆಗೆದುಕೊಂಡು ಹೋಗಿದ್ದಾರೆ, ಗ್ರಾಮದ ಅಭಿವೃದ್ಧಿಗಾಗಿ ಕೆರೆಯಲ್ಲಿನ ಹೂಳು ತೆಗೆಯುತ್ತಿದ್ದಾರೆ ಎಂದರು.

ಪಂಚಾಯಿತಿ ಅಧ್ಯಕ್ಷರಾದ ಸರೋಜ,ವಿ ಯವರ ಪತಿ ಮಂಜುನಾಥ್ ವೈಯಕ್ತಿಕವಾಗಿ ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ, ಫೆಬ್ರವರಿ 6 ರಂದು ತೋಟಕ್ಕೆ ಮಣ್ಣು ಹೊಡೆಯಲು ಕೆರೆಯಲ್ಲಿ ಹೂಳು ತೆಗೆಯಲು ಅನುಮತಿಗಾಗಿ ಪಂಚಾಯಿತಿ ಮನವಿ ಸಲ್ಲಿಸಿದೆ, ಪಂಚಾಯಿತಿ ಅಧಿಕಾರಿಗಳು ಕೆರೆ ನಮ್ಮ ವ್ಯಾಪ್ತಿಗೆ ಬರುವುದಿಲ್ಲ, ಸಂಬಂಧಪಟ್ಟ ಇಲಾಖೆಯ ಅನುಮತಿ ಪಡೆಯುವಂತೆ ಹಿಂಬರಹ ಕೊಟ್ಟಿದ್ದರು, ಅದೇ ದಿನ ಕೆರೆಯಲ್ಲಿ ಹೂಳು ತೆಗೆಯುತ್ತಿರುವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ದೂರು ನೀಡಿದ್ದಾರೆ, 10-09-2024ರಂದು ಕೆರೆಯಲ್ಲಿ ಮಣ್ಣು ತೆಗೆಯುತ್ತಿರುವುದರ ವಿರುದ್ಧ ದೂರು ನೀಡಿದರು, ಬಲಾಢ್ಯರೆಂಬ ಕಾರಣಕ್ಕೆ ಸುಮ್ಮನಿದ್ದ ಅಧ್ಯಕ್ಷರು ಇವತ್ತು ಹಿಂದುಳಿದ ವರ್ಗಕ್ಕೆ ಸೇರಿದವನೆಂಬ ಕಾರಣಕ್ಕೆ ಕಿರುಕುಳ ಕೊಡುತ್ತಿದ್ದಾರೆಂದು ಆರೋಪ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!