ನಿಗಮದ ಸಾಮಾಜಿಕ ಜವಾಬ್ದಾರಿ ಯೋಜನೆ ಅಡಿಯಲ್ಲಿ ದೇವನಹಳ್ಳಿ ವಿಧಾನ ಸಭಾ ಕ್ಷೇತ್ರದ ಕೆರೆಗಳನ್ನು ಅಭಿವೃದ್ಧಿಪಡಿಸುವ ಸಲುವಾಗಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಸಚಿವರಾದ ಕೆ.ಎಚ್.ಮುನಿಯಪ್ಪ ಅವರು ಯೋಜನೆ ರೂಪಿಸಿದ್ದು ಇದರ ಅಂಗವಾಗಿ ಕಾರ್ಪೋರೆಟ್ ಕಂಪನಿಗಳು ದೇವನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಕೆರೆಗಳನ್ನು ಇಂದು ಪರಿಶೀಲಿಸಿದ್ದು, ಕಂಪನಿಗಳ ವತಿಯಿಂದ ಅನುದಾನ ನೀಡಲು ಒಪ್ಪಿರುತ್ತಾರೆ ಎಂದು ತಿಳಿದುಬಂದಿದೆ.