ನಾಗರಹಾವೊಂದು ಕೆಮ್ಮಿನ ಸಿರಪ್ ಬಾಟಲಿಯನ್ನು ನುಂಗಲು ಯತ್ನಿಸಿರುವ ಘಟನೆ ಒರಿಸ್ಸಾದ ಭುವನೇಶ್ವರದಲ್ಲಿ ನಡೆದಿದೆ.
ಬಾಟಲಿಯನ್ನು ಪೂರ್ತಿಯಾಗಿ ನುಂಗಲು ಮತ್ತು ಹೊರಹಾಕಲು ಆಗದೇ ಹಾವು ಹೆಣಗಾಡುತ್ತಿತ್ತು. ಇದನ್ನು ಗಮನಿಸಿದ ಸಾರ್ವಜನಿಕರು ಹಾವಿನ ಬಾಯಿಯಿಂದ ಬಾಟಲ್ ಹೊರ ಹಾಕಲು ಸಹಾಯ ಮಾಡಿದರು. ಇದರಿಂದ ಹಾವು ಸಂಪೂರ್ಣವಾಗಿ ನಿತ್ರಾಣವಾಗಿತ್ತು. ಆದರೂ ಪ್ರಾಣಾಪಯದಿಂದ ಪಾರಾಗಿದೆ.