
ದೇವನಹಳ್ಳಿ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಕೋರಿಯನ್ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪದಡಿಯಲ್ಲಿ ಆರೋಪಿ ಅಫಾನ್ ಅಹಮ್ಮದ್ ನನ್ನು ಬಂಧಿಸಲಾಗಿದೆ…
ದೂರುದಾರ ಮಹಿಳೆ ಬೆಂಗಳೂರಿನಿಂದ ಕೋರಿಯಾಗೆ ತೆರಳಿದ್ದರು. ಇಮಿಗ್ರೇಷನ್ ತಪಾಸಣೆ ಮುಗಿಸಿ ಫ್ಲೈಟ್ ಹತ್ತಲು ಹೊರಟ್ಟಿದ್ದರು.
ದಾರಿಗೆ ಅಡ್ಡಬಂದು ನಿಮ್ಮ ಲೆಗೇಜಿನಲ್ಲಿ ಸಮಸ್ಯೆ ಇದೆ ಎಂದು ಹೇಳಿ ಮತ್ತೇ ಚೆಕ್ ಮಾಡಬೇಕೆಂದು ಪುರುಷರ ಶೌಚಾಲಯದ ಬಳಿ ಕರೆದುಕೊಂಡು ಹೋಗಿ ಮಹಿಳೆಯ ಖಾಸಗಿ ಭಾಗಗಳಿಗೆ ಸ್ಪರ್ಶಿಸಿ ಅಸಭ್ಯವಾಗಿ ವರ್ತನೆ ಮಾಡಿ ಮಹಿಳೆಗೆ ಧನ್ಯವಾದಗಳು ತಿಳಿಸಿ ಹೊರಟಹೋಗಿದ್ದ ಏರ್ ಪೋರ್ಟ್ ಸಿಬ್ಬಂದಿಯನ್ನು ಬಂಧನ ಮಾಡಲಾಗಿದೆ.
ಪ್ರಕರಣದ ಕುರಿತು ಏರ್ ಪೋರ್ಟ್ ಪೊಲೀಸ್ ಠಾಣೆಯಲ್ಲಿ ಮಹಿಳೆ ದೂರು ದಾಖಲು ಮಾಡಿದ್ದರು. ಪ್ರಕರಣ ಸಂಬಂಧ ಆರೋಪಿ ಅಫಾನ್ ಬಂಧನ ಮಾಡಲಾಗಿದೆ.