ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ವೈಭವದಿಂದ ಆಚರಿಸಲಾಯಿತು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರೊ.ಪುರುಷೋತ್ತಮ ಬಿಳಿಮಲೆಯವರು ಅವರು ಧ್ವಜಾರೋಹಣ ನೆರವೇರಿಸಿದರು. ಈ ವೇಳೆ ಮಾತನಾಡಿದ ಅವರು, ಬೆಂಗಳೂರು ವಿಮಾನ ನಿಲ್ದಾಣದ ವತಿಯಿಂದ ಪ್ರತಿವರ್ಷವೂ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಿಂದ ಆಚರಿಸುತ್ತಿರುವುದು ಶ್ಲಾಘನೀಯ. ಆಂಗ್ಲಭಾಷೆಯಷ್ಟೇ ಅಲ್ಲ, ಕನ್ನಡಕ್ಕೂ ಹೆಚ್ಚಿನ ಆದ್ಯತೆಯನ್ನು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಕೊಡಲಾಗುತ್ತಿದೆ ಎಂಬುದನ್ನು ಇದು ಒತ್ತಿ ಹೇಳುತ್ತದೆ, ಅಷ್ಟೇ ಅಲ್ಲದೆ, ನಮ್ಮ ಕರ್ನಾಟಕದ ಪರಂಪರೆಯನ್ನು ಜಾಗತಿಕವಾಗಿ ಪಸರಿಸಲು ಕಲಾಪ್ರದರ್ಶನ ಏರ್ಪಡಿಸಿರುವುದು ಕೂಡ ಉತ್ತಮ ಕೆಲಸ ಎಂದು ಹೇಳಿದರು.
ಎರಡು ದಿನಗಳ ಕಾಲ ನಡೆದ ಕರ್ನಾಟಕ ರಾಜ್ಯೋತ್ಸವದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಕರ್ನಾಟಕದ ಸಾಂಪ್ರದಾಯಿಕ ಜಾನಪದ ಪ್ರಕಾರಗಳನ್ನು ಒಟ್ಟುಗೂಡಿಸುವ ಅದ್ಭುತ ನೃತ್ಯ ಪ್ರದರ್ಶನ, ವರ್ಣರಂಜಿತ ವೇಷಭೂಷಣ, ಸಂಗೀತ ಮತ್ತು ಕ್ರಿಯಾತ್ಮಕ ಚಲನೆಗಳು ಪ್ರೇಕ್ಷಕರನ್ನು ಆಕರ್ಷಿಸಿತು. ಇದಷ್ಟೇ ಅಲ್ಲದೆ, ಮಹಿಳಾ ಸ್ವ ಉದ್ಯೋಗಿಗಳೇ ನಿರ್ಮಿಸಿದ ಉಡುಪುಗಳ ಮಾರಾಟಕ್ಕೂ ಮಳಿಗೆಗಳನ್ನು ತೆರೆಯಲು ಟರ್ಮಿನಲ್ 2 ಮುಂಭಾಗ ಅವಕಾಶ ಕಲ್ಪಿಸಿಕೊಡಲಾಗಿತ್ತು. ಈ ಮಳಿಗೆಗಳು ಮೈಸೂರು ರೇಷ್ಮೆ, ಉಡುಪಿ ಸೀರೆಗಳು, ಬಿದ್ರಿವೇರ್ ಮತ್ತು ಇಳಕಲ್ ಸೀರೆಗಳಂತಹ ಸೊಗಸಾದ ವಸ್ತುಗಳನ್ನು ಪ್ರದರ್ಶನ ಹಾಗೂ ಮಾರಾಟ ಮಾಡಲಾಯಿತು. ಪ್ರವಾಸಿಗರಿಗೆ ಕರ್ನಾಟಕವನ್ನು ವ್ಯಾಖ್ಯಾನಿಸುವ ಕರಕುಶಲತೆ ಮತ್ತು ಸಂಪ್ರದಾಯದ ಬಗ್ಗೆ ಕಣ್ತುಂಬಿಕೊಳ್ಳಲು ಅವಕಾಶ ದೊರೆಯಿತು.
ಈ ಆಚರಣೆಯ ಮೂಲಕ, BLR ವಿಮಾನ ನಿಲ್ದಾಣವು ಕರ್ನಾಟಕದ ರೋಮಾಂಚಕ ಸಂಸ್ಕೃತಿ ಮತ್ತು ಪರಂಪರೆಯನ್ನು ಜಾಗತಿಕ ವೇದಿಕೆಯಲ್ಲಿ ಪ್ರಚಾರ ಮಾಡುವ ತನ್ನ ಬದ್ಧತೆಯನ್ನು ಎತ್ತಿ ತೋರಿಸಿತು.
ಬೆಂಗಳೂರು ಗ್ರಾಮಾಂತರ ಪೊಲೀಸ್ ಎಸ್ಪಿ ಆಗಿದ್ದ ಸಿ.ಕೆ ಬಾಬಾ ಅವರಿಗೆ ಬಡ್ತಿ ನೀಡಿ ಕರ್ನಾಟಕ ರಾಜ್ಯ ಮೀಸಲು ಪಡೆಯ ಡಿಐಜಿ…
ಹೊಸ ವರ್ಷದ ಸಂಭ್ರಮದ ನಡುವೆಯೇ ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬದಲಾವಣೆಯಾಗಿದೆ. ರಾಜ್ಯದಾದ್ಯಂತ 48 ಐಪಿಎಸ್ ಅಧಿಕಾರಿಗಳಿಗೆ ಮುಂಬಡ್ತಿ…
ದೊಡ್ಡಬಳ್ಳಾಪುರದ ಪಾಲನಜೋಗಿಹಳ್ಳಿ, ಗೌರಿಬಿದನೂರು ರಸ್ತೆಯ ಫ್ರೆಂಡ್ಸ್ ಫಂಕ್ಷನ್ ಹಾಲ್ ಎದುರಿನ ಸಹ್ಯಾದ್ರಿ ಆಸ್ಪತ್ರೆಯು 2025ರ ಮೇ.11ರಂದು ಪ್ರಾರಂಭವಾಗಿ ಆಧುನಿಕ ತಂತ್ರಜ್ಞಾನ,…
ಪ್ರತಿ ವರ್ಷ ಚಳಿಗಾಲದಲ್ಲಿ ಬರುವ ಹಬ್ಬದಲ್ಲಿ, ಬೆಂಗಳೂರು ಮೆಡಿಕವರ್ ಆಸ್ಪತ್ರೆಗಳಲ್ಲಿ ಹೊಟ್ಟೆ ಸಂಬಂಧಿತ (ಗ್ಯಾಸ್ಟ್ರೋ) ಹೊರರೋಗಿ ವಿಭಾಗ (OPD) ಮತ್ತು…
ಕೇರಳದ ತಿರುವನಂತಪುರಂ ಜಿಲ್ಲೆಯ ಶಿವಗಿರಿ ಮಠದಲ್ಲಿ ಶ್ರೀ ನಾರಾಯಣ ಧರ್ಮಸಂಗಮ ಟ್ರಸ್ಟ್ ಆಯೋಜಿಸಿರುವ ಮಠದ ಯಾತ್ರಾರ್ಥಿಗಳ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ…
ಇತ್ತೀಚೆಗೆ ಮಂಡ್ಯ ಮೂಲಕ ವ್ಯಕ್ತಿ ಮಹಿಳೆ ಮತ್ತು ಆಕೆಯ ಸಹಚರರ ಜಾಲಕ್ಕೆ ಸಿಲುಕಿ ಮಾರಣಾಂತಿಕ ಹಲ್ಲೆಗೆ ಒಳಗಾಗಿ ನಂತರ ಅರೆ…