
ಕೆಂಪೇಗೌಡ ಏರ್ ಪೊರ್ಟ್ ನಲ್ಲಿ NCB ಅಧಿಕಾರಿಗಳಿಂದ ಭರ್ಜರಿ ಕಾರ್ಯಾಚರಣೆ ನಡೆಸಲಾಗಿದ್ದು, ಬರೋಬ್ಬರಿ 50 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ವಶಕ್ಕೆಪಡೆಯಲಾಗಿದೆ.
ಕಾರ್ಯಾಚರಣೆ ವೇಳೆ ಮೂವರ ಆರೋಪಿಗಳ ಬಂಧಿಸಲಾಗಿದೆ. 45 ಕೆಜಿ ಹೈಡ್ರೋಗಾಂಜಾ, 6 ಕೆಜಿ ಸೈಲೋಸಿಬಿನ್ ಅಣಬೆ ಸೀಜ್ ಮಾಡಲಾಗಿದೆ.
ಆರಂಭದಲ್ಲಿ ಥೈಲ್ಯಾಂಡ್ ನಿಂದ ಡ್ರಗ್ಸ್ ಸಾಗಾಟ ಮಾಹಿತಿ ಕಲೆ ಹಾಕಿದ್ದ ಅಧಿಕಾರಿಗಳು. ಈ ಕಾರ್ಯಾಚರಣೆ ವೇಳೆ ಕೊಲಂಬೋದಿಂದ ಬರ್ತಿದ್ದ ಇಬ್ಬರು ಆರೋಪಿಗಳು ವಶಕ್ಕೆ ಪಡೆದು, ಇಬ್ಬರು ಆರೋಪಿಗಳಿಂದ 31 ಕೆಜಿ ಹೈಡ್ರೋಗಾಂಜಾ ಮತ್ತು 4 ಕೆಜಿ ಸೈಲೋಸಿಬಿನ್ ಅಣಬೆ ಸೀಜ್ ಮಾಡಲಾಗಿದೆ.

ಇಬ್ಬರ ವಿಚಾರಣೆಯಲ್ಲಿ ಮತ್ತೊಬ್ಬ ಆರೋಪಿ ನೆಕ್ಸ್ಟ್ ಫ್ಲೈಟ್ ಗೆ ಶ್ರೀಲಂಕಾದಿಂದ ಬರುವ ಮಾಹಿತಿ ಆಧಾರದ ಮೇಲೆ. ಖಚಿತ ಮಾಹಿತಿ ಪಡೆದು ಕಾದು ಇನ್ನೋರ್ವ ಶ್ರೀಲಂಕಾ ಪ್ರಜೆಯನ್ನ ಎನ್ ಸಿ ಬಿ. ಬಂಧಿಸಿದೆ.
ಶ್ರೀಲಂಕಾದ ಹ್ಯಾಂಡ್ಲರ್ ನಿಂದ 14 ಕೆ ಜಿ ಹೈಡ್ರೋಗಾಂಜಾ ಮತ್ತು 2 ಕೆಜಿ ಅಣಬೆ ವಶಕ್ಕೆ ಪಡೆಯಲಾಗಿದೆ. 250 ಫುಡ್ ಟಿನ್ ಗಳಲ್ಲಿ ಡ್ರಗ್ಸ್ ಸೀಲ್ ಮಾಡಿಕೊಂಡು ಬಂದಿದ್ದ ಆರೋಪಿಗಳು.
ಈ ವರ್ಷ ಎನ್ ಸಿ ಬಿ ಯಿಂದ 18 ಕೇಸ್ ಗಳಲ್ಲಿ 100 ಕೋಟಿ ಮೌಲ್ಯದ ಮಾದಕ ವಸ್ತು ಸೀಜ್ ಮಾಡಲಾಗಿದೆ.
18 ಪ್ರಕರಣಗಳಲ್ಲಿ ಕೇರಳ, ರಾಜಸ್ಥಾನ, ಗುಜರಾತ್, ಮಾಹಾರಾಷ್ಟ್ರ ದಲ್ಲಿ ಗಾಂಜಾ ದಂಧೆ ನಡೆಸ್ತಿದ್ದ 45 ಆರೋಪಿಗಳನ್ನ ಬಂಧಿಸಲಾಗಿದೆ.