ಕೃಷ್ಣಾಪುರ ಗ್ರಾಮದಲ್ಲಿಯೇ ಮತಗಟ್ಟೆ ಮರು ಸ್ಥಾಪಿಸುವರೆಗೂ ಮತದಾನ ಬಹಿಷ್ಕಾರಕ್ಕೆ ಗ್ರಾಮಸ್ಥರ ನಿರ್ಧಾರ

ಕೋಲಾರ: ತಾಲೂಕಿನ ವೇಮಗಲ್ ಹೋಬಳಿಯ ಅಮ್ಮನಲ್ಲೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೃಷ್ಣಾಪುರ ಗ್ರಾಮದಲ್ಲಿಯೇ ಮತಗಟ್ಟೆ ಕೇಂದ್ರವನ್ನು ಮರು ಸ್ಥಾಪಿಸಬೇಕು ಇಲ್ಲದೇ ಹೋದರೆ ಲೋಕಸಭಾ ಚುನಾವಣೆಯ ಮತದಾನವನ್ನು ಬಹಿಷ್ಕಾರ ಮಾಡುವುದಾಗಿ ಗ್ರಾಮಸ್ಥರು ವಾಗ್ದಾನ ಮಾಡಿದರು.

ಈ ಸಂದರ್ಭದಲ್ಲಿ ಪ್ರಗತಿಪರ ರೈತ ರಾಜಣ್ಣ ಮಾತನಾಡಿ ಸುಮಾರು 30 ವರ್ಷಗಳಿಂದ ಕೃಷ್ಣಾಪುರ ಗ್ರಾಮದ ಮತಗಟ್ಟೆಯಲ್ಲಿಯೇ ಗ್ರಾಮಸ್ಥರು ಮತದಾನವನ್ನು ಮಾಡಿಕೊಂಡು ಬಂದಿದ್ದು ಈ ಚುನಾವಣೆಯಲ್ಲಿ ಅಮ್ಮನಲ್ಲೂರು ಗ್ರಾಮಕ್ಕೆ ಮತದಾನದ ಕೇಂದ್ರವನ್ನು ವರ್ಗಾಯಿಸಲಾಗಿದೆ ಎಂದು ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಕೃಷ್ಣಾಪುರ ಗ್ರಾಮದಲ್ಲಿ ಸುಮಾರು ೧೪೦ ಮನೆಗಳಿದ್ದು ೩೬೦ಕ್ಕೂ ಹೆಚ್ಚು ಮತದಾರರಿದ್ದಾರೆ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಗಡಿ ಭಾಗದಲ್ಲಿ ನಮ್ಮ ಗ್ರಾಮವಿದ್ದು ಜಿಲ್ಲಾಧಿಕಾರಿಯು 400 ಮತದಾರರಿಲ್ಲ ಎಂಬ ಕಾರಣವನ್ನು ನೀಡಿ ಅಮ್ಮನಲ್ಲೂರು ಗ್ರಾಮಕ್ಕೆ ಮತಗಟ್ಟೆ ಕೇಂದ್ರವನ್ನು ವರ್ಗಾವಣೆ ಮಾಡಲಾಗಿದೆ ಸುಮಾರು ೩ ಕಿಲೋ ಮೀಟರ್ ದೂರವಿರುವ ಅಮ್ಮನಲ್ಲೂರು ಗ್ರಾಮಕ್ಕೆ ಬಸ್ ಸೌಲಭ್ಯವಿಲ್ಲ ಗ್ರಾಮದ ಹಿರಿಯರು, ಅಂಗವಿಕಲರು ಗ್ರಾಮಕ್ಕೆ ಹೋಗಿ ಮತದಾನ ಮಾಡಿ ಬರಲು ಸಾಧ್ಯವಾಗುವುದಿಲ್ಲ ಕೂಡಲೇ ಕೃಷ್ಣಾಪುರ ಗ್ರಾಮದಲ್ಲಿಯೇ ಕೇಂದ್ರವನ್ನು ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.

ಗ್ರಾಮದ ಹಿರಿಯ ಮುಖಂಡ ಶ್ರೀನಿವಾಸ್ ಮಾತನಾಡಿ ಕಳೆದ ಎಲ್ಲಾ ಚುನಾವಣೆಯಲ್ಲಿ ನಮ್ಮ ಗ್ರಾಮದಲ್ಲಿಯೇ ಮತದಾನ ಮಾಡಿದ್ದೇವೆ ಹಾಗಾಗಿ ತಮ್ಮ ಗ್ರಾಮದಲ್ಲಿಯೇ ಮತಗಟ್ಟೆ ಸ್ಥಾಪಿಸಬೇಕೆಂದು ಗ್ರಾಮದ ಪ್ರತಿಯೊಬ್ಬರ ಒತ್ತಾಯವಾಗಿದೆ ಈ ಬಾರಿಯ ಚುನಾವಣೆಯಲ್ಲಿ ತಮ್ಮ ಗ್ರಾಮದಲ್ಲಿ ಯಾವುದೇ ಪಕ್ಷದ ಅಭ್ಯರ್ಥಿಗಳು ಚುನಾವಣಾ ಪ್ರಚಾರ ಮಾಡುವುದಕ್ಕೆ ಅವಕಾಶವಿಲ್ಲ ಗ್ರಾಮಸ್ಥರು ಸಹ ಯಾವುದೇ ಪಕ್ಷದ ಪರ ಪ್ರಚಾರದಲ್ಲಿ ಭಾಗವಹಿಸಯವುದಿಲ್ಲ ಗ್ರಾಮದಲ್ಲಿ ಮತಗಟ್ಟೆ ಸ್ಥಾಪಿಸುವರೆಗೂ ಮತದಾನ ಮಾಡುವುದಿಲ್ಲ ಎಂದರು

ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ ರಾಮಚಂದ್ರಪ್ಪ, ಗ್ರಾಮಸ್ಥರಾದ ಮಂಜುನಾಥ್, ಸತೀಶ್ ಕುಮಾರ್, ಲಕ್ಷ್ಮಣ್,ಮುನೇಗೌಡ, ಬತ್ತೇಶ್, ರಾಜಶೇಖರ್, ಕೆಂಪೇಗೌಡ, ವೆಂಕಟಪ್ಪ, ಮುನಿರಾಜು, ನರೇಶ್ ಮುಂತಾದವರು ಇದ್ದರು

Leave a Reply

Your email address will not be published. Required fields are marked *