ಕೋಲಾರ: ಜಿಲ್ಲೆಯ ಪ್ರಗತಿಪರ ರೈತರು ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಅಶೋಕ್ ದಳವಾಯಿ ಅವರನ್ನು ಭೇಟಿ ಮಾಡಿ ಜಿಲ್ಲೆಯ ರೈತರಿಗೆ ಬೆಂಬಲ ಬೆಲೆ ಸೇರಿದಂತೆ ಮಾರುಕಟ್ಟೆ ಪರಿಸ್ಥಿತಿಗಳ ಬಗ್ಗೆ ಮನವರಿಕೆ ಮಾಡಿಕೊಟ್ಟರು,
ಈ ಸಂದರ್ಭದಲ್ಲಿ ಪ್ರಗತಿಪರ ರೈತ ತುರಾಂಡಹಳ್ಳಿ ರವಿ ಮಾತನಾಡಿ ರೈತರು ಬೆಳೆದ ಕೃಷಿ ಉತ್ಪನ್ನಗಳಿಗೆ ಉತ್ಪಾದನಾ ವೆಚ್ಚ ನಿಗದಿ ಮಾಡುವುದು ಅಷ್ಟೇ ಕೃಷಿ ಆಯೋಗದ ಕೆಲಸವಾಗಬಾರದು ರೈತರಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ದೊರೆಯುವಂತೆ ಮಾಡುವ ಹೊಣೆಗಾರಿಕೆಯನ್ನು ತೆಗೆದುಕೊಳ್ಳಬೇಕು ಎಂದು ಅಶೋಕ್ ದಳವಾಯಿ ಅವರನ್ನು ಒತ್ತಾಯ ಮಾಡಿದರು
ಕೃಷಿ ಉತ್ಪನ್ನಗಳ ಬೆಲೆ ಕುಸಿತ ಅತಿವೃಷ್ಠಿ ಹಾಗೂ ಅನಾವೃಷ್ಠಿಯಿಂದ ಬೆಳೆ ಹಾನಿ ಉತ್ಪಾದನಾ ವೆಚ್ಚದ ಏರಿಕೆಯಂತಹ ಬಿಕ್ಕಟ್ಟಿನ ಸ್ಥಿತಿಯಲ್ಲಿ ಕೃಷಿ ಮಾರುಕಟ್ಟೆ ವ್ಯವಸ್ಥೆಯನ್ನು ಸುಧಾರಿಸುವುದು ಕೂಡ ಆಯೋಗದ ಜವಾಬ್ದಾರಿಯಾಗಬೇಕು ಜೊತೆಗೆ ಹಣ್ಣು ತರಕಾರಿಗಳು, ದವಸ ಧಾನ್ಯಗಳನ್ನು ಮತ್ತು ಮಸಾಲೆ ಪದಾರ್ಥಗಳ ಸಂಗ್ರಹಯ ಗೋದಾಮು ಮಾಡಬೇಕಾಗಿದೆ ಜೊತೆಗೆ ಶೀತಲಗೃಹಗಳ ಗೋದಾಮುಗಳಲ್ಲಿ ರೈತರು ದಾಸ್ತಾನಿನ ಸಂಗ್ರಹದ ಆಧಾರದ ಮೇಲೆ ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವುದು ಇದಕ್ಕೆ ಸಂಬಂಧಿಸಿದ ಇಲಾಖೆಯ ನೇತೃತ್ವದಲ್ಲಿ ಪ್ರಚಾರ ಮಾಡಬೇಕು ಎಂದು ಒತ್ತಾಯಿಸಿದರು.
ರೈತರಿಗೆ ಸಂಬಂಧಿಸಿದ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಗ್ರಾಪಂ ಮಟ್ಟದಲ್ಲಿ ಶೀಥಲಗೃಹಗಳ ಗೋದಾಮುಗಳನ್ನು ನಿರ್ಮಾಣ ಮಾಡಿ ರೈತರಿಗೆ ಮಾರುಕಟ್ಟೆಯಲ್ಲಿ ಬೆಲೆ ಕುಸಿದಾಗ ಸಂಗ್ರಹಿಸಿ ಏರಿಕೆಯಾದಾಗ ಮಾರಾಟ ಮಾಡಲು ಅನುವು ಮಾಡಿಕೊಡಬೇಕು ಬೆಳೆಗಳ ಸಮೀಕ್ಷೆ ಬಗ್ಗೆ ಕಾಲಕಾಲಕ್ಕೆ ಮಾಹಿತಿ ನೀಡುವ ಕೆಲಸವನ್ನು ಮಾಡಬೇಕು ರೈತರಿಗೆ ಸಬ್ಸಿಡಿ ಕೊಡುವ ಬದಲಾಗಿ ಬೆಳೆಗಳನ್ನು ಬೆಳೆಯುವ ರೈತರಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ದರಕ್ಕೆ ಮಾರಾಟ ಮಾಡುವ ವ್ಯವಸ್ಥೆ ಮಾಡಬೇಕು ಜೊತೆಗೆ ಕೋಲಾರದಲ್ಲಿ ದೊಡ್ಡದಾದ ಎಪಿಎಂಸಿ ಮಾರುಕಟ್ಟೆ ವ್ಯವಸ್ಥೆ ಮಾಡಿ ರೈತರಿಗೆ ಅನುಕೂಲ ಮಾಡಿಕೊಡಬೇಕಾಗಿದೆ ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕೃಷಿ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಹೆಚ್ ಲೋಕೇಶ್, ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಪ್ರಾದೇಶಿಕ ವ್ಯವಸ್ಥಾಪಕ ಡಾ ಎನ್ ಮಂಜುನಾಥ್, ಪ್ರಗತಿಪರ ರೈತ ಮದನಹಳ್ಳಿ ರವಿಶಂಕರ್ ಮುಂತಾದವರು ಇದ್ದರು.