
ಕಳೆದ 10 ವರ್ಷಗಳಿಂದ ದೊಡ್ಡಬಳ್ಳಾಪುರ ತಾಲೂಕಿನ ಮಧುರೆ ಹೋಬಳಿಯ ಕನ್ನಮಂಗಲ ಗ್ರಾಮದ ಸರ್ವೇ ನಂಬರ್ 50ರ ಗೋಮಾಳದಲ್ಲಿ 53-57 ಅರ್ಜಿ ಹಾಕಿಕೊಂಡು ಉತ್ತು ಬಿತ್ತು ಬೆಳೆ ಬೆಳೆದು ಜೀವನ ನಡೆಸುತ್ತಿದ್ದೇವು. ಇದೀಗ ಬೆಟ್ಟಗುಡ್ಡ ಇರುವ ಭೂಮಿಯನ್ನು ಹಸನು ಮಾಡಿ ಕೃಷಿ ಕೆಲಸ ಮಾಡುತ್ತಿದ್ದ ಜಮೀನಿನಲ್ಲಿ KUSUM C ಯೋಜನೆಯಡಿ ಸೌರ ವಿದ್ಯುತ್ ಯೋಜನೆಗಳನ್ನು ಸ್ಥಾಪಿಸುವ ಉದ್ದೇಶಕ್ಕಾಗಿ ತಂತಿ ಬೇಲಿ ಅಳವಡಿಸಿದ್ದಾರೆ. ಇದರಿಂದ ನಮಗೆ ದಿಕ್ಕು ತೋಚದಂತಾಗಿದೆ ಎಂದು ಎರಡು ಯೋಧರ ಕುಟುಂಬಗಳು ಕಣ್ಣೀರು ಹಾಕುತ್ತಿದ್ದಾರೆ.

ಅಮೃತಸರದಲ್ಲಿ ಸೇವೆ ಸಲ್ಲಿಸುತ್ತಿರುವ ನವೀನ್ ಕುಟುಂಬ, ಹಿಮಾಚಲ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿರುವ ಮಂಜುನಾಥ ಕುಟುಂಬ ಹೋರಾಟ ನಡೆಸುತ್ತಿದ್ದಾರೆ.
ಈ ವೇಳೆ ಮಾತನಾಡಿದ ಯೋಧ ನವೀನ್, ನಾವು ಹುಟ್ಟು ಬಡತನದಿಂದ ಬಂದವರು. ನನ್ನ ತಂದೆ ತಾಯಿ ಬೇರೆಯವರ ತೋಟದಲ್ಲಿ ಕೂಲಿ ನಾಲಿ ಮಾಡಿ ನಮ್ಮನ್ನ ಓದಿಸಿ ವಿದ್ಯಾವಂತರನ್ನಾಗಿ ಮಾಡಿದ್ದಾರೆ. ನಾನು ಯೋಧನಾಗಿ ದೇಶ ಸೇವೆ ಮಾಡುತ್ತಿದ್ದೇನೆ. ನಾನು ಅಮೃತ್ ಸರದಲ್ಲಿ ನಾನು ನನ್ನ ಹೆಂಡತಿ ಮಕ್ಕಳು ಇದ್ದೇವೆ. ರಾಮದೇನಹಳ್ಳಿಯಲ್ಲಿ ನನ್ನ ತಂದೆ ತಾಯಿ, ಅಕ್ಕ ವಾಸವಾಗಿದ್ದರೆ. ನನ್ನ ತಂದೆಯ ಅರೋಗ್ಯ ಸರಿ ಇಲ್ಲ ಎಂದು ರಜೆ ಮೇಲೆ ಇಲ್ಲಿಗೆ ಬಂದಾಗ ನಮ್ಮ ಜಮೀನಿಗೆ ತಂತಿ ಬೇಲಿ ಹಾಕಿರುವುದು ಗೊತ್ತಾಯಿತು. ನಾವು ನಿರ್ಗತಿಕರು ನಮಗೆ ಬೇರೆ ಯಾವುದೇ ಮನೆ ಜಮೀನು ಇಲ್ಲ. ನಾವು ಕಳೆದ 25ವರ್ಷಗಳಿಂದ ಇಲ್ಲೇ ವಾಸವಾಗಿದ್ದೇವೆ. 10 ವರ್ಷಗಳಿಂದ ದೊಡ್ಡಬಳ್ಳಾಪುರ ತಾಲೂಕಿನ ಮಧುರೆ ಹೋಬಳಿಯ ಕನ್ನಮಂಗಲ ಗ್ರಾಮದ ಸರ್ವೇ ನಂಬರ್ 50ರಲ್ಲಿ 2 ಎಕರೆ ಗೋಮಾಳದಲ್ಲಿ ಸಾಗುವಳಿ ಮಾಡುತ್ತಾ ಬರುತ್ತಿದ್ದೇವೆ. 2021ರಲ್ಲಿ ಹಕ್ಕುಪಾತ್ರ ನೀಡಿ ನಮ್ಮ ಹೆಸರಿಗೆ ಮಾಡಿಕೊಡುವಂತೆ ಅರ್ಜಿ ಸಹ ಹಾಕಿರುತ್ತೇವೆ. ದಯಮಾಡಿ ನಮಗೆ ನ್ಯಾಯ ಸಿಗುವಂತೆ ಮಾಡಿ ಎಂದು ಯೋಧ ನವೀನ್ ಹಾಗೂ ಕುಟುಂಬದವರು ಮನವಿ ಮಾಡಿದ್ರು.

ನಾವು ನಿರ್ಗತಿಕರು ಜೀವನಪಾಯಕ್ಕಾಗಿ ಖಾಲಿ ಇದ್ದ ಗೋಮಾಳ ಜಾಗದಲ್ಲಿ 2 ಎಕರೆಯನ್ನು ಹಸನು ಮಾಡಿ ರಾಗಿ ಜೋಳ ಬೆಳೆದು ಜೀವನ ಸಾಗಿಸುತ್ತಿದ್ದೇವೆ. ಅನುಭವದಲ್ಲೂ ಇದ್ದೇವೆ. ಇಂತಹ ಜಮೀನಿನಲ್ಲಿ ನಮಗೆ ನೋಟಿಸ್, ಯಾವುದೇ ಮಾಹಿತಿ ನೀಡದೆ ರಾತ್ರೋರಾತ್ರಿ ಬಂದು ಖಾಸಗಿ ಕಂಪನಿಯವರು ನಮ್ಮ ಜಮೀನನ್ನೂ ಸೇರಿಸಿ ತಂತಿ ಬೇಲಿ ಅಳವಡಿಸಿದ್ದಾರೆ.
ಸೇನೆಯಿಂದಲೂ ಮನವಿ ಅರ್ಜಿನ್ನು ಕಳುಹಿಸಲಾಗಿದೆ. ಅಧಿಕಾರಿಗಳು ಮೊದಲು ಮಾಡಿಕೊಡೋಣ ಎಂದಿದ್ದರು. ಈಗ ಅದು ಬಿಬಿಎಂಪಿ ವ್ಯಾಪ್ತಿಗೆ ಸೇರಿದೆ ಈಗ ಮಾಡಿಕೊಡಲು ಬರಲ್ಲ ಎಂದು ಹೇಳಿತ್ತಿದ್ದಾರೆ. ಇತ್ತ ಸೌರ ವಿದ್ಯುತ್ ಯೋಜನಗೆ ತಂತಿ ಬೇಲಿ ಹಾಕಿದ್ದಾರೆ. ಅವರಿಗೆ 9 ಎಕರೆ 20 ಗುಂಟೆ ಅಲರ್ಟ್ ಆಗಿದ್ದು, ಆದರೆ ಅವರು 30 ಎಕರೆ ಗಿಂತಲೂ ಹೆಚ್ಚು ಜಮೀನಿಗೆ ತಂತಿ ಬೇಲಿ ಹಾಕಿ ತಮ್ಮ ವಶಕ್ಕೆ ಪಡೆದಿದ್ದರೆ. ನಮ್ಮ ಜಮೀನು ಕಿತ್ತುಕೊಂಡರೆ ನಾವೆಲ್ಲಿ ಜೀವನ ಮಾಡುವುದು ದಯವಿಟ್ಟು ನಮಗೆ ನ್ಯಾಯ ದೊರಕಿಸಿಕೊಡಿ ಎಂದು ಮಧ್ಯಮದವರ ಮುಂದೆ ಕಣ್ಣೀರು ಹಾಕಿ ನಮಗೆ ನಮ್ಮ ಜಮೀನು ಕೊಡಿ, ಇಲ್ಲಿ ಆಗದಿದ್ದರೆ ಬೇರೆ ಕಡೆ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದ್ದಾರೆ.

ಇತ್ತ ಯೋಧ ಮಂಜುನಾಥ್ ಪತ್ನಿ ಸೌಮ್ಯ ಮಾತನಾಡಿ, ನಾವು 10 ವರ್ಷದಿಂದ ಸಾಗುವಳಿ ಮಾಡಿಕೊಂಡು ಬರುತ್ತಿದ್ದೇವೆ. ಸದ್ಯ ನನ್ನ ಗಂಡ ಹಿಮಾಚಲ ಪ್ರದೇಶದಲ್ಲಿ ಯೋಧನಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನಾನು ನನ್ನ ಇಬ್ಬರು ಮಕ್ಕಳು ಬೆಂಗಳೂರಿನ ದಾಸರಹಳ್ಳಿಯಲ್ಲಿ ವಾಸವಾಗಿದ್ದೇವೆ. ನಾವು ಕಳೆದ 10 ವರ್ಷದಿಂದ ಇಲ್ಲಿ ಸಾಗುವಳಿ ಮಾಡುತ್ತಾ ಬರುತ್ತಿದ್ದೇವೆ. ನಮಗೆ ವಿಚಾರ ತಿಳಿಸದೇ ಏಕಾಏಕಿ ತಂತಿ ಬೇಲಿ ಹಾಕಿದ್ದಾರೆ. ನಮಗೆ ಏನು ಮಾಡಬೇಕೆಂದು ತೋಚುತ್ತಿಲ್ಲ. ನನ್ನ ಗಂಡ ಹಿಮಾಚಲ ಪ್ರದೇಶದಲ್ಲಿದ್ದಾರೆ. ನಮಗೆ ನ್ಯಾಯ ದೊರಕಿಸಿಕೊಡಬೇಕೆಂದು ಮನವಿ ಮಾಡಿದ್ರು.
ಒಟ್ಟಾರೆ ಯೋಧರ ಕುಟುಂಬಗಳಿಗೆ ನೆಲೆ ಇಲ್ಲದಂತಾಗಿದೆ. ಸರ್ಕಾರ ಮಾನವೀಯತೆ ದೃಷ್ಟಿಯಿಂದ ಇಲ್ಲಲ್ಲದಿದ್ದರೂ ಬೇರೆ ಕಡೆ ಜಮೀನು ನೀಡಿ ಸಾಗುವಳಿ ಮಾಡಿಕೊಂಡು ಜೀವನ ನಡೆಸಲು ಅವಕಾಶ ಮಾಡಿಕೊಡ ಬೇಕಾಗಿದೆ. ದೇಶ ರಕ್ಷಣೆ ಮಾಡುವ ಯೋಧರಿಗೆ ನೆಲೆ ಸಿಗಲಿ.