ಕುವೆಂಪು ಅವರ ಮಂತ್ರ ಮಾಂಗಲ್ಯ ಆಶಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವ ಜೋಡಿ: ವಿವಾಹವೆಂದರೆ ಎರಡು ಮನಸ್ಸುಗಳ ಒಂದುಗೂಡುವಿಕೆಯಾಗಬೇಕು- ಸಂಪತ್ತಿನ ಪ್ರದರ್ಶನವಾಗಬಾರದು- ಲೇಖಕ ಮಂಜುನಾಥ ಎಂ.ಅದ್ದೆ

ದೊಡ್ಡಬಳ್ಳಾಪುರ: ರಾಷ್ಟ್ರಕವಿ ಕುವೆಂಪು ಅವರ ಆಶಯದಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ನವ ವಧು-ವರನಿಗೆ ಕರ್ನಾಟಕ ರಾಜ್ಯ ನಾಟಕ ಅಕಾಡೆಮಿ ಸದಸ್ಯ ಟಿ.ಎಚ್.ಲವಕುಮಾರ್ ಅವರು ಮಂತ್ರ ಮಾಂಗಲ್ಯ ಬೋಧನೆ ಮಾಡುವ ಮೂಲಕ ನಗರದ ತ.ನ.ಪ್ರಭುದೇವ್ ಅವರ ತೋಟದಲ್ಲಿ ಭಾನುವಾರ ಟಿ.ಎಂ.ಬೃಂದ ಹಾಗೂ ಎಂ.ಪೃಥ್ವಿಕ್ ಘೋರ್ಪಡೆ ವಿವಾಹ ನಡೆಯಿತು.

ಈ ಸಂದರ್ಭದಲ್ಲಿ ವಧು-ವರರನ್ನು ಆರ್ಶೀವದಿಸಿ ಮಾತನಾಡಿದ ಲೇಖಕ ಮಂಜುನಾಥ ಎಂ.ಅದ್ದೆ, ಇತ್ತೀಚಿನ ದಿನಗಳಲ್ಲಿ ವಿವಾಹ ಎನ್ನುವುದು ಎರಡು ಮನಸ್ಸುಗಳ ಒಂದುಗೂಡುವಿಕೆಗಿಂತಲು ತಮ್ಮಲ್ಲಿನ ಸಂಪತ್ತಿನ ಪ್ರದರ್ಶನಕ್ಕೆ ಹೆಚ್ಚಿನ ಮಹತ್ವ ದೊರೆಯುತ್ತಿದೆ. ಸಾವಿರಾರು ಕೋಟಿ ಖರ್ಚು ಮಾಡುವ ವಿವಾಹಗಳನ್ನು ನಾವಿಂದು ನೋಡುತ್ತಿದ್ದೇವೆ. ಆದರೆ ಕುವೆಂಪು ಅವರ ಮಂತ್ರ ಮಾಂಗಲ್ಯದ ವಿವಾಹದಲ್ಲಿ ಎರಡು ಯುವ ಮನಸ್ಸುಗಳ ಹಾಗೂ ಎರಡು ಕುಟುಂಬಗಳ ಗಟ್ಟಿಯಾದ ಬಾಂಧವ್ಯವನ್ನು ಕಾಣಬುಹುದಾಗಿದೆ ಎಂದರು.

ರಾಜ್ಯ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ರೈತ ಸಂಘದ ಚಳುವಳಿಯಲ್ಲಿ ಕುವೆಂಪು ಅವರ ಮಂತ್ರಮಾಂಗಲ್ಯದ ವಿವಾಹಗಳು ನಡೆಯಬೇಕು ಎನ್ನುವುದು ಒಂದಾಗಿದೆ. ಇದರಿಂದ ರೈತರು ಸಾಲಕ್ಕೆ ಸಿಲುಕುವುದು ತಪ್ಪಲಿದೆ. ಇದೇ ಮಾರ್ಗದಲ್ಲಿ ವಿವಾಹವಾದ ಪ್ರೊ.ಎಂ.ಡಿ.ನಂಜುಂಡಸ್ವಾಮಿ, ಕೆ.ಪಿ.ಪೂರ್ಣಚಂದ್ರತೇಜಸ್ವಿ ಅವರು ರೈತ ಸಂಘದ ಹೋರಾಟಗಾರರಿಗೆ ಮಾದರಿಯಾಗಿದ್ದಾರೆ ಎಂದರು.

ಚುಕ್ಕಿ ನಂಜುಂಡಸ್ವಾಮಿ ಮಾತನಾಡಿ, ಸರಳ ಭಾಷೆಯಲ್ಲಿ, ಬದುಕಿನ ಮೌಲ್ಯಗಳನ್ನು ತಿಳಿಸುವ ಕುವೆಂಪು ಅವರ ಮಂತ್ರ ಮಾಂಗಲ್ಯ ವಿವಾಹಗಳು ಸದಾ ಕಾಲಕ್ಕೂ ಆದರ್ಶವಾಗಿದೆ. ರಾಜ್ಯದಲ್ಲಿ ಸಾವಿರಾರು ವಿವಾಹಗಳು ಇದೇ ಆಶಯದಲ್ಲಿ ನಡೆಯುವ ಮೂಲಕ ಸಮೃದ್ದ ಬದುಕನ್ನು ನಡೆಸಿರುವವರು ನಮ್ಮೊಂದಿಗೆ ಇದ್ದಾರೆ ಎಂದರು.

ಬಿಬಿಎಂಪಿ ಯಲಹಂಕ ವಲಯ ಆಯುಕ್ತರಾದ ಸಿ.ಎಸ್.ಕರೀಗೌಡ ಅವರು ಚುಟುಕು ಕವಿ ಎಚ್.ದುಂಡಿರಾಜ್ ಅವರ ಕವನ ‘ರಸ್ತೆಯಲ್ಲಿ ನೋಡಿ ನಕ್ಕಳು ಅವಳು, ಈಗ ನಮ್ಮಿಬ್ಬರಿಗೆ ಇಬ್ಬರು ಮಕ್ಕಳು’ ವಾಚನ ಮಾಡಿ ಇಷ್ಟೇ ಸರಳವಾಗಿರಬೇಕು ವಿವಾಹ ಎನ್ನುವುದೇ ಮಂತ್ರ ಮಾಂಗಲ್ಯದ ಆಶಯವು ಆಗಿದೆ ಎಂದರು.

ಸರಳ ವಿವಾಹದಲ್ಲಿ ಕುವೆಂಪು ಅವರ ಮಂತ್ರ ಮಾಂಗಲ್ಯ ಪುಸ್ತಕವನ್ನು ಉಡುಗರೆಯಾಗಿ ನೀಡಲಾಯಿತು.

ನಟರಾಜ್ ನಾಗಸಂದ್ರ ಅವರು ಅಚ್ಚುಕಟ್ಟಾಗಿ ಮಂತ್ರ ಮಾಂಗಲ್ಯ ವಿವಾಹ ಕಾರ್ಯಕ್ರಮದ ನಿರೂಪಣೆ ಮಾಡಿದರು.

ಈ ವೇಳೆ ರಾಜ್ಯ ರೈತ ಸಂಘದ ಮುಖಂಡರಾದ ಕೆ.ಚುಲೋಚನಮ್ಮ ವೆಂಕಟರೆಡ್ಡಿ,ಕೆ.ಉಮಾ,ಮುತ್ತೇಗೌಡ, ವಿ.ಆರ್.ಗೀತಾವತಿ,ಮುನೇಶ್ವರರಾವ್, ಎಂ.ಪ್ರಜ್ವಲ್ ಹಾಗೂ ರೈತ ಸಂಘದ ಮುಖಂಡರು ಇದ್ದರು.

Ramesh Babu

Journalist

Recent Posts

ವ್ಯಕ್ತಿಯೋರ್ವ ನೇಣಿಗೆ ಶರಣು

  ವ್ಯಕ್ತಿಯೋರ್ವ ನೇಣಿಗೆ ಶರಣಾಗಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಹೋಬಳಿಯ ಸಾದುಮಠದಲ್ಲಿ ನಡೆದಿದೆ.. ಊರ ಹೊರವಲಯದಲ್ಲಿರುವ ಹಲಸಿನ ಮರಕ್ಕೆ…

3 minutes ago

ತಿಂಗಳಾಂತ್ಯಕ್ಕೆ ಮೊದಲ ಬಗರ್ ಹುಕುಂ ಸಮಿತಿ ಸಭೆ – ಶಾಸಕ ಧೀರಜ್ ಮುನಿರಾಜು

ಇದೇ ಏಪ್ರಿಲ್ ತಿಂಗಳಾಂತ್ಯಕ್ಕೆ ರೈತರಿಗೆ ಭೂ ಮಂಜೂರು ಮಾಡುವ ಬಗರ್ ಹುಕುಂ ಸಮತಿ ಸಭೆಯನ್ನು ಮಾಡಲಾಗುವುದು, ಸಭೆಯಲ್ಲಿ ಕನಿಷ್ಟ 100…

51 minutes ago

ಭೂ ಮಾಪನ ಕಾರ್ಯ ಸ್ಥಗಿತ, ರೈತರ ಆಕ್ರೋಶ: ಪರ್ಯಾಯ ವ್ಯವಸ್ಥೆ ಮಾಡುವಂತೆ ಒತ್ತಾಯ

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸರ್ಕಾರದ ಪರವಾನಗಿ ಭೂ ಮಾಪಕರು ಎರಡು ತಿಂಗಳಿಂದ ಮುಷ್ಕರ ಹೂಡಿರುವುದರಿಂದ ಭೂ ಮಾಪನ ಇಲಾಖೆಯ…

2 hours ago

ಮಹಿಳೆಯರ ಸಬಲೀಕರಣಕ್ಕೆ ಕೇಂದ್ರ ಸರ್ಕಾರದಿಂದ ವಿವಿಧ ಯೋಜನೆ ಜಾರಿ- ಬಿಜೆಪಿ ರಾಜ್ಯ ವಕ್ತಾರರಾದ ಅಶ್ವಿನಿ ಶಂಕರ್

ಕೇಂದ್ರ ಸರ್ಕಾರ ಕಳೆದ ಒಂದು ದಶಕದಿಂದ ವಿವಿಧ ಯೋಜನೆಗಳ ಮೂಲಕ ಮಹಿಳೆಯರ ಸಬಲೀಕರಣಕ್ಕೆ ಒಂದೊಂದೆ ಹೆಜ್ಜೆ ಇಟ್ಟುಕೊಂಡು ಬರುತ್ತಿದೆ ಎಂದು…

3 hours ago

ಆಶಾ ಭೋಸ್ಲೆ…..ಸುಮಾರು 12000ಕ್ಕೂ ಹೆಚ್ಚು ಹಾಡುಗಳಿಗೆ ಧ್ವನಿಯಾಗಿದ್ದವರು- ಅವರಿಗೆ ‌ಭಾವಪೂರ್ಣ ಶ್ರದ್ಧಾಂಜಲಿ……

ಆಶಾ ಭೋಸ್ಲೆ..... ಸಂಗೀತ ಎಂಬ ಮಾಂತ್ರಿಕ ಮತ್ತು ಭಾವನಾತ್ಮಕ ಹಾಗೂ ಭ್ರಮಾತ್ಮಕ ಶಕ್ತಿಯ ಉತ್ತುಂಗ ಧ್ವನಿಯೊಂದು ನಮ್ಮನ್ನಗಲಿದ ಸಂದರ್ಭದಲ್ಲಿ...... ಶಬ್ದ…

13 hours ago

Документ_9

Effektives Schreiben von Hausarbeiten Das Schreiben von Hausarbeiten kann für viele Studierende eine große Herausforderung…

17 hours ago