ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮ ನಿಯಮಿತ ವತಿಯಿಂದ 2025-26ನೇ ಸಾಲಿನಲ್ಲಿ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿಯಲ್ಲಿ ಕುರಿ/ಮೇಕೆ (10+1) ಘಟಕಗಳ ವಿತರಣೆಗಾಗಿ ಹಾಗೂ ಸಹಾಯಧನ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ 18 ರಿಂದ 60 ವರ್ಷ ವಯೋಮಿತಿ ಇರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕೂಲಿ ಕಾರ್ಮಿಕರು, ಕೃಷಿ ಕಾರ್ಮಿಕರು ಮತ್ತು ಪಶುಸಂಗೋಪನೆಯಲ್ಲಿ ತೊಡಗಿಸಿಕೊಂಡ ಆಸಕ್ತ ರೈತರು ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿದಾರರು ಆರ್.ಡಿ ನಂಬರ್ ಇರುವ ಜಾತಿ ಪ್ರಮಾಣ ಪತ್ರ ಮತ್ತು ಫ್ರೂಟ್ಸ್ ಐ.ಡಿ ಕಡ್ಡಾಯವಾಗಿ ಹೊಂದಿರಬೇಕು. ಅರ್ಹ ಫಲಾನುಭವಿಗಳನ್ನು ಕ್ಷೇತ್ರದ ಶಾಸಕರ ಅಧ್ಯಕ್ಷತೆಯಲ್ಲಿ ತಾಲ್ಲೂಕು ಮಟ್ಟದ ಫಲಾನುಭವಿಗಳ ಆಯ್ಕೆ ಸಮಿತಿ ಮೂಲಕ ಆಯ್ಕೆ ಮಾಡಲಾಗುವುದು.
ನಿಗದಿತ ಅರ್ಜಿಯನ್ನು ಆಯಾ ತಾಲ್ಲೂಕಿನ ಮುಖ್ಯ ಪಶುವೈದ್ಯಾಧಿಕಾರಿಗಳು (ಆಡಳಿತ) ಇವರಿಂದ ಪಡೆದು ಅಗತ್ಯ ದಾಖಲೆಗಳೊಂದಿಗೆ ಭರ್ತಿ ಮಾಡಿ ಮಾ.12 ರಂದು ಸಂಜೆ 5 ಗಂಟೆಯೊಳಗೆ ಕಚೇರಿಗೆ ಸಲ್ಲಿಸಬಹುದು.
ಅರ್ಜಿ ನಮೂನೆ ಹಾಗೂ ಇತರೆ ವಿವರಗಳಿಗಾಗಿ ಆಯಾ ತಾಲ್ಲೂಕಿನ ಮುಖ್ಯ ಪಶುವೈದ್ಯಾಧಿಕಾರಿಗಳು (ಆಡಳಿತ) ರವರನ್ನು ಸಂಪರ್ಕಿಸಬಹುದಾಗಿದೆ ಎಂದು ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತದ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅಬಕಾರಿ ಇಲಾಖಾ ವತಿಯಿಂದ ವಿವಿಧ 47 ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾದ 111.355 ಕೆ.ಜಿ ಗಾಂಜಾವನ್ನು ಬೆಂಗಳೂರು ಗ್ರಾಮಾಂತರ…
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧೀನದಲ್ಲಿರುವ ವಿವಿಧ ವಸತಿ ಶಾಲೆಗಳಲ್ಲಿ 2026-27ನೇ ಸಾಲಿನ 6ನೇ ತರಗತಿ ಪ್ರವೇಶಕ್ಕಾಗಿ ನಡೆಸಲಾಗುವ ರಾಜ್ಯಮಟ್ಟದ ಸಾಮಾನ್ಯ…
ದೊಡ್ಡಬಳ್ಳಾಪುರದಲ್ಲಿ ಈ ಮೊದಲೇ ಅನುಮೋದನೆಗೊಂಡ ಜಿಲ್ಲಾಸ್ಪತ್ರೆಗೆ ಗುದ್ದಲಿಪೂಜೆ ಮಾಡಿ 2 ವರ್ಷವಾಗಿದೆ. ಈ ಬಾರಿಯಾದರೂ ಅನುದಾನ ನೀಡಿ ಜಿಲ್ಲಾಸ್ಪತ್ರೆ ಪ್ರಾರಂಭಿಸಲು…
ಕೋಟಿ ವರದಕ್ಷಿಣೆ, ಕಿಯಾ ಕಾರು ಕೊಟ್ಟರು, ಹೆಂಡತಿಗೆ ಕಿರುಕುಳ ನೀಡುತ್ತಿದ್ದ ಈ ಹಿನ್ನೆಲೆ ಗಂಡನ ವಿರುದ್ಧ ಹೆಂಡತಿ ದೂರು ನೀಡಿದ್ದಾರೆ...…
ಬೆಂಗಳೂರು, ವೈಟ್‌ಫೀಲ್ಡ್ : ಒಂದೂವರೆ ವರ್ಷಕ್ಕೂ ಹೆಚ್ಚು ಕಾಲ ಗಂಭೀರ ಸಮಸ್ಯೆಯಿಂದ ಬಳಲುತ್ತಿದ್ದ ಪಶ್ಚಿಮ ಬಂಗಾಳದ 26 ವರ್ಷದ ಯುವಕನಿಗೆ…
ದೊಡ್ಡಬಳ್ಳಾಪುರ ತಾಲೂಕಿನ ಹಮಾಮ್ ಗೇಟ್(ಶಿವಪುರ ಗೇಟ್) ಬಳಿ ಇಂದು ರಾತ್ರಿ ಸುಮಾರು 9:30ರಲ್ಲಿ ದಾರಿಯಲ್ಲಿದ್ದ ಮಹಿಳೆಗೆ ಕೋಳಿ ಸಾಗಿಸುವ ಐಷರ್…