ಕುರಿ -ಮೇಕೆ ಕಳ್ಳತನ – ಇಬ್ಬರು ಆರೋಪಿಗಳ ಬಂಧನ

ಬಿಡದಿ ಪೊಲೀಸ್‌ ಠಾಣೆ ವ್ಯಾಪ್ತಿಯ ತಾಳಗುಪ್ಪೆ ಗ್ರಾಮದ ಕುರಿ ಮತ್ತು ಮೇಕೆ ಫಾರಂನ ಬೀಗ ಹೊಡೆದು, ಕುರಿ ಮತ್ತು ಮೇಕೆಗಳನ್ನು ಕಳ್ಳತನ ಮಾಡಿರುವ ಬಗ್ಗೆ ಬಿಡದಿ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿತ್ತು.

ದೂರು ದಾಖಲಿಸಿಕೊಂಡ ಪೊಲೀಸರು ಸೂಕ್ತ ತನಿಖೆ ನಡೆಸಿ, ಕುರಿ ಮತ್ತು ಮೇಕೆಗಳನ್ನು ಕಳ್ಳತನ ಮಾಡಿದ್ದ  ಓರ್ವ ಕಾನೂನು ಸಂಘರ್ಷಕ್ಕೋಳಗಾದ ಬಾಲಕ ಸೇರಿ ಒಟ್ಟು ಇಬ್ಬರು ಆರೋಪಿಗಳನ್ನು  ವಶಕ್ಕೆ ಪಡೆದು ವಿಚಾರಣೆ ನಡೆಸಿ ಸುಮಾರು 2.80 ಲಕ್ಷ ರೂ ಮೌಲ್ಯದ ಕುರಿ ಮತ್ತು ಮೇಕೆಗಳನ್ನು ಹಾಗೂ ತಾವರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ದ 2 ದ್ವಿಚಕ್ರ ವಾಹನ ಹಾಗೂ 1 ಓಮಿನಿ ಕಾರನ್ನು ವಶಪಡಿಸಿಕೊಳ್ಳಲಾಗಿದೆ.

ಒಟ್ಟು 3 ಪ್ರಕರಣಗಳನ್ನು ಪತ್ತೆ ಮಾಡುವಲ್ಲಿ ಬಿಡದಿ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿ ತಂಡವು ಯಶಸ್ವಿಯಾಗಿರುತ್ತದೆ.

Leave a Reply

Your email address will not be published. Required fields are marked *

error: Content is protected !!