ಇತ್ತೀಚೆಗೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕುರಿ- ಮೇಕೆ, ಹಸು ಕಳ್ಳರ ಹಾವಳಿ ಹೆಚ್ಚಾಗಿದ್ದು, ಕಳ್ಳರ ಬೇಟೆಯಾಡಲು ಪೊಲೀಸರು ಕಾರ್ಯನಿರತರಾಗಿದ್ದಾರೆ.
ಕುರಿ ಕಳ್ಳತನ ಪ್ರಕರಣಗಳನ್ನು ಬೇಧಿಸಿದ ಗ್ರಾಮಾಂತರ ಠಾಣೆ ಪೊಲೀಸರು, ಸಿಸಿಟಿವಿ ಆಧಾರದ ಮೇಲೆ ಇಬ್ಬರು ಕುರಿಕಳ್ಳರನ್ನು ಬಂಧಿಸಿ, ಅವರಿಂದ 2.30 ಲಕ್ಷ ಮೌಲ್ಯದ 18 ಕುರಿಗಳನ್ನು ಜಪ್ತಿ ಮಾಡಿದ್ದಾರೆ.
ನಗರದ ದರ್ಗಾ ಪೇಟೆಯ ನಿವಾಸಿ ನೂರುಲ್ಲಾ, ರೋಜಿಪುರ ನಿವಾಸಿ ಮಹಮ್ಮದ್ ಅಬೀಬ್ ಬಂಧಿತ ಆರೋಪಿಗಳು.
ಜುಲೈ 21 ರಂದು ಸಂತೋಷ್ ಎಂಬುವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡ ಪೊಲೀಸರು ಆರೋಪಿಗಳ ಬೇಟೆಯಾಡಿದ್ದಾರೆ.
ಕುರಿ ಕಳ್ಳರನ್ನು ಬಂಧಿಸಿದ ಗ್ರಾಮಾಂತರ ಪೊಲೀಸ್ ಠಾಣೆ ಇನ್ ಸ್ಪೆಕ್ಟರ್ ಸಾಧಿಕ್ ಪಾಷಾ ಹಾಗೂ ಸಿಬ್ಬಂದಿಯ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ಅವರು ಶ್ಲಾಘಿಸಿದ್ದಾರೆ.