ತುಮಕೂರಿನ ಕುಣಿಗಲ್ ಬೈಪಾಸ್ ನಲ್ಲಿ ಕಾರು ಹಾಗೂ ಈಚರ್ ನಡುವೆ ಭೀಕರ ಅಪಘಾತವಾಗಿದ್ದು, ಕಾರಿನಲ್ಲಿದ್ದ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಗಂಡ, ಹೆಂಡತಿ, ಮಗ ಹಾಗೂ ಮಗಳು ಮೃತಪಟ್ಟಿದ್ದಾರೆ.
ಕುಣಿಗಲ್ ಬಳಿ ಹಾದುಹೋಗಿರುವ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಬರುವ ಕುಣಿಗಲ್ ಬೈಪಾಸ್ ನಲ್ಲಿರುವ ಉಗಿಬಂಡಿ ರೆಸ್ಟೋರೆಂಟ್ ಬಳಿ ಘಟನೆ ನಡೆದಿದೆ.
ಮೃತರೆಲ್ಲರು ಮಾಗಡಿ ತಾಲೂಕಿನ ಯಲಗಲವಾಡಿ ಹ್ಯಾಂಡ್ ಪೊಸ್ಟ್ ನವರು ಎನ್ನಲಾಗಿದೆ.
ಯುಟರ್ನ್ ತೆಗೆದುಕೊಳ್ಳುವಾಗ ಕಾರಿಗೆ ಈಚರ್ ವಾಹನ ಡಿಕ್ಕಿ ಹೊಡೆದಿದೆ. ಡಿಕ್ಕಿಯಾದ ರಭಸಕ್ಕೆ ಒಂದೇ ಕುಟುಂಬ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಸ್ಥಳಕ್ಕೆ ಕುಣಿಗಲ್ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ.
ಮೃತದೇಹಗಳು ಕುಣಿಗಲ್ ತಾಲ್ಲೂಕು ಆಸ್ಪತ್ರೆಯ ಶವಗಾರಕ್ಕೆ ರವಾನೆ ಮಾಡಲಾಗಿದೆ.
ಕುಣಿಗಲ್ ನಲ್ಲಿ ಮಕ್ಕಳ ಶಾಲೆಗೆ ಸೇರಿಸಿದ್ದ ಮಾಹಿತಿ ತಿಳಿದುಬಂದಿದೆ.
ಮಕ್ಕಳೊಂದಿಗೆ ಊಟಕ್ಕೆಂದು ರಾಷ್ಟ್ರೀಯ ಹೆದ್ದಾರಿಯ ಹೋಟೆಲ್ ಗೆ ತೆರಳುವಾಗ ಅಪಘಾತವಾಗಿರುವ ಶಂಕೆ ವ್ಯಕ್ತವಾಗಿದೆ.