ಕುಡಿಯುವ ನೀರಿಗಾಗಿ ಆದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಯಾದಗಿರಿ ಜಿಲ್ಲೆಯ ಹುಣಸಗಿ ಪಟ್ಟಣದಲ್ಲಿ ನಡೆದಿದೆ.
ನಂದಕುಮಾರ ಕಟ್ಟಿಮನಿ (21)ಕೊಲೆಯಾದ ಯುವಕ.
ನೀರಿನ ವಿಚಾರವಾಗಿ ಅಜ್ಜಿ ಜೊತೆ ಆರೋಪಿತರ ಜಗಳವಾಗಿದೆ. ಅಜ್ಜಿ ಜೊತೆ ಜಗಳ ಮಾಡಿದಕ್ಕೆ ಮೊಮ್ಮಗ ನಂದಕುಮಾರ ಆರೋಪಿಗಳನ್ನ ಪ್ರಶ್ನೆ, ಪಶ್ನೆ ಮಾಡಿದಕ್ಕೆ ಸಂಬಂಧಿಕರಿಂದಲೇ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ ಎನ್ನಲಾಗಿದೆ.
ಹಣಮಂತ ಹಾಗೂ ಹಣಮವ್ವ ಸೇರಿ ಚಾಕು ಇರಿದು ಕೊಲೆ ಮಾಡಿದ್ದಾರೆ ಎನ್ನಲಾಗಿದೆ.
ಹುಣಸಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಬ್ಬರನ್ನ ಬಂಧಿಸಲಾಗಿದೆ.