ತನ್ನ ಪಾಡಿಗೆ ತಾನು ನಡೆದುಕೊಂಡು ಹೋಗುತ್ತಿದ್ದವನ ಮೇಲೆ ಕುಡಿದ ಅಮಲಿನಲ್ಲಿ ಹಿಂದೆಯಿಂದ ಬಂದು ರೇಜರ್ ನಿಂದ ಹಲ್ಲೆ ಮಾಡಿ ಪರಾರಿಯಾಗಿರೋ ಆಟೋ ಡ್ರೈವರ್ ನಿಖಿಲ್.
ಜು.30ರ ಸಂಜೆ 7:30ರ ಸಮಯದಲ್ಲಿ ತನ್ನ ಹೊಲದಲ್ಲಿ ವ್ಯವಸಾಯದ ಕೆಲಸಕ್ಕೆ ಆಳುಗಳನ್ನು ಕರೆಯಲು ತೂಬಗೆರೆ ಬಸ್ ಸ್ಟಾಂಡ್ ಬಳಿ ಬಂದಾಗ ಅಲ್ಲೇ ಇದ್ದ ಆಟೋ ಡ್ರೈವರ್ ನಿಖಿಲ್ ಕ್ಷುಲ್ಲಕ ಕಾರಣಕ್ಕೆ ಹಲ್ಲೆ ನಡೆಸಿ ದರ್ಪ ಮೆರೆದಿದ್ದಾನೆ.
ನನ್ನನ್ನು ನೋಡಿ ಬಾ ಇಲ್ಲಿ ಎಂದು ಕರೆಯುತ್ತಾನೆ, ಆಗ ನನಗೆ ಸ್ವಲ್ಪ ಕೆಲಸ ಇದೆ ಆಮೇಲೆ ಸಿಗುತ್ತೇನೆ ಎಂದು ನನ್ನ ಪಾಡಿಗೆ ನಾನು ಹೋಗುತ್ತಿದ್ದ ಸಂದರ್ಭದಲ್ಲಿ ಇದೇ ನೆಪ ಇಟ್ಟುಕೊಂಡು ನಾನು ಕರೆದರೆ ಬರದೇ ನಿನ್ನ ಪಾಡಿಗೆ ನೀನು ಹೋಗುತ್ತಿದ್ದೀಯಾ ಎಷ್ಟು ದುರಾಹಂಕಾರ ಎಂದು ಹೇಳಿ ಹಿಂದೆಯಿಂದ ಬಂದು ಏಕಾಏಕಿ ರೇಜರ್ ನಿಂದ ನನ್ನ ಎಡಗೈ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಹಲ್ಲೆಗೊಳಗಾದ ರಮೇಶ್ ಆರೋಪಿಸಿದ್ದಾನೆ.
ಇದನ್ನು ಗಮನಿಸಿದ ನನ್ನ ತಮ್ಮ ದರ್ಶನ್, ಹಾಗೂ ಶ್ರೀಧರ್ ಓಡಿ ಬಂದರು. ಆಗ ಅಲ್ಲಿಂದ ನಿಖಿಲ್ ಪರಾರಿಯಾದ. ನಂತರ ನನ್ನ ತಾಯಿ ಚಂದ್ರಮ್ಮ ಹಾಗೂ ನನ್ನ ಹೆಂಡತಿ ಚೈತ್ರ ಇಬ್ಬರು ಅಲ್ಲಿಗೆ ಬಂದು ಆಟೋದಲ್ಲಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿದರು ಎಂದು ಹೇಳಿದ ರಮೇಶ್.
ನಂತರ ನಮ್ಮ ಗ್ರಾಮಸ್ಥರು ಎಲ್ಲಾರೂ ಸೇರಿ ಈ ಬಗ್ಗೆ ನ್ಯಾಯ ಪಂಚಾಯಿತಿ ಮಾಡೋಣಾ ಎಂದು ಹೇಳಿದರು, ಆದರೆ ಇದುವರೆಗೂ ಯಾವುದೇ ರಾಜಿ ಪಂಚಾಯಿತಿ ಮಾಡದ ಕಾರಣ, ತಡವಾಗಿ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಗೆ ಬಂದು ದೂರು ನೀಡಿರುತ್ತೇನೆ ಎಂದರು. ಈ ಕುರಿತು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಹಲ್ಲೆ ಮಾಡಿರೋ ನಿಖಲ್ ಪರಾರಿಯಾಗಿದ್ದು ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.