ಕುಡಾ ನೇತೃತ್ವದಲ್ಲಿ ಮತ್ತೊಂದು ಲೇಔಟ್ ಮಾಡಲಿಕ್ಕೆ ನಿರ್ಲಕ್ಷ್ಯ ಯಾಕೆ? ಕಮಿಷನರ್ ವಿರುದ್ದ ಬೈರತಿ ಸುರೇಶ್ ಗರಂ

ಕೋಲಾರ: ನಗರದ ಸುತ್ತಲೂ ಬೇಕಾಬಿಟ್ಟಿ ಖಾಸಗಿ ಲೇಔಟ್ ಗಳು ನಿರ್ಮಾಣವಾಗಿವೆ ಕುಡಾ ಮುಂದಾಳತ್ವದಲ್ಲಿ ಮತ್ತೊಂದು ಸರ್ಕಾರಿ ಲೇಔಟ್ ನಿರ್ಮಾಣ ಮಾಡಕ್ಕೆ ನಿಮಗೆಲ್ಲ ಏನು ರೋಗ ಎಂದು ಉಸ್ತುವಾರಿ ಸಚಿವ ಬೈರತಿ ಸುರೇಶ್ ಕುಡಾ ಆಯುಕ್ತ ಶ್ರೀನಾಥ್ ವಿರುದ್ಧ ಕ್ಲಾಸ್ ತೆಗೆದುಕೊಂಡರು

ನಗರದ ಹೊರವಲಯದ ಟಮಕದ ಕುಡಾ ಬಡಾವಣೆಯಲ್ಲಿ ಸೋಮವಾರ 9.80 ಕೋಟಿ ವೆಚ್ಚದ ರಸ್ತೆ ಕಾಮಗಾರಿ ಹಾಗೂ ಬಡಾವಣೆಗೆ ಕುಡಿಯುವ ನೀರಿನ ಬೋರ್ ವೆಲ್ ಉದ್ಘಾಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಇಷ್ಟು ವರ್ಷಗಳದರೂ ಈ ಬಡಾವಣೆಯನ್ನು ಯಾಕೆ ಅಭಿವೃದ್ಧಿ ಮಾಡಿಲ್ಲ ಇಷ್ಟು ನಿರ್ಲಕ್ಷ್ಯ ಮಾಡಿದರೆ ಹೇಗೆ ಕೂಡಲೇ ಯೋಜನೆ ರೂಪಿಸಿಕೊಂಡು ಅಭಿವೃದ್ಧಿಗೆ ಒತ್ತು ನೀಡಿ ಹಣಕ್ಕೆ ಕೊರತೆಯಿಲ್ಲ ಅನುದಾನ ಕೊಡಕ್ಕೆ ಸರ್ಕಾರ ಸಿದ್ದವಿದೆ ಎಂದರು.

ಆಗ ಮಧ್ಯಪ್ರವೇಶಿಸಿದ ಸಂಸದ ಮಲ್ಲೇಶ್ ಬಾಬು ಹಾಗೂ ಎಂಎಲ್ಸಿ ಇಂಚರ ಗೋವಿಂದರಾಜು ಹಿಂದೆ ಕೇಂದ್ರ ಸರ್ಕಾರದಿಂದ ಬಿಡುಗಡೆಯಾದ ಹಣದಿಂದ ಇವತ್ತು ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಗುದ್ದಲಿ ಪೂಜೆಗೆ ಶುಕ್ರದೆಸೆ ಬಂದಿದೆ ಎಂದಾಗ ಸಚಿವ ಮಧ್ಯಪ್ರವೇಶಿಸಿ ನೋಡಿ ಹಿಂದೆ ಕೇಂದ್ರ ಸರ್ಕಾರ ನಗರಾಭಿವೃದ್ಧಿ ಇಲಾಖೆಗೆ ಕೊಟ್ಟ ಅನುದಾನವನ್ನು ವಾಪಸ್ಸು ತೆಗೆದುಕೊಂಡಿದೆ ಈಗ ನಮ್ಮ ಕಾಂಗ್ರೆಸ್ ಸರ್ಕಾರದಿಂದ ಬಿಡುಗಡೆಯಾದ ಹಣದಲ್ಲಿ ಅಭಿವೃದ್ಧಿಗೆ ಒತ್ತು ನೀಡಲಾಗಿದೆ ನಿಮಗೂ ಜಿಲ್ಲೆಯ ಬಗ್ಗೆ ಕಾಳಜಿ ಇದ್ದರೆ ವಾಪಸ್ಸು ಹೋದ ಅನುದಾನವನ್ನು ಕೊಡಿಸಿಕೊಡಿ ಎಂದರು.

ಈ ಸಂದರ್ಭದಲ್ಲಿ ಸಂಸದ ಎಂ.ಮಲ್ಲೇಶ್ ಬಾಬು, ಶಾಸಕ ಕೊತ್ತೂರು ಜಿ ಮಂಜುನಾಥ್, ಎಂಎಲ್ಸಿಗಳಾದ ಎಂ.ಎಲ್ ಅನಿಲ್ ಕುಮಾರ್, ಇಂಚರ ಗೋವಿಂದರಾಜು, ಜಿಲ್ಲಾಧಿಕಾರಿ ಡಾ.ಎಂ.ಆರ್ ರವಿ, ಜಿಪಂ ಸಿಇಒ ಪ್ರವೀಣ್ ಪಿ.ಬಾಗೇವಾಡಿ, ಎಸ್ಪಿ ಬಿ.ನಿಖಿಲ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ವೈ ಶಿವಕುಮಾರ್, ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ ಉಪಾಧ್ಯಕ್ಷೆ ಸಂಗೀತಾ, ಸದಸ್ಯೆ ಶ್ವೇತಾ ಕುಡಾ ಅಧ್ಯಕ್ಷ ಮಹಮ್ಮದ್ ಹನೀಫ್, ಮುಖಂಡರಾದ ಚಂಜಿಮಲೆ ರಮೇಶ್, ಮೈಲಾಂಡಹಳ್ಳಿ ಮುರಳಿ, ವಿ.ಗೀತಾ, ಕುರಿಗಳ ರಮೇಶ್, ಕೋಮುಲ್ ಷಂಷೀರ್, ಇರಗಸಂಸ್ರ ವಿಶ್ವನಾಥ್, ಎಂ.ಸಿ ಫಾಲ್ಗುಣ, ಮುಂತಾದವರು ಇದ್ದರು.

Leave a Reply

Your email address will not be published. Required fields are marked *